Advertisement

ಭಾರತದಲ್ಲಿ ಫೇಸ್‌ಬುಕ್‌ ಬಳಕೆದಾರರ ಸಂಖ್ಯೆ ಇಳಿಮುಖ

10:05 AM Jul 22, 2022 | Team Udayavani |

ನವದೆಹಲಿ: ಭಾರತಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ನ ಬಳಕೆದಾರರಲ್ಲಿ ಗರಿಷ್ಠ ಪ್ರಮಾಣದಲ್ಲಿ ಇಳಿಮುಖವಾಗಿದೆ. ಹೆಚ್ಚುತ್ತಿರುವ ಮೊಬೈಲ್‌ ಡೇಟಾ ವೆಚ್ಚ, ಮಹಿಳೆಯರ ವಿರುದ್ಧ ಅವಹೇಳನಕಾರಿ ಟೀಕೆ, ಅಶ್ಲೀಲ ವಿಡಿಯೋಗಳು ಪ್ರಧಾನ ಕಾರಣವಾಗಿವೆ ಎಂದು ಫೆ.2ರಂದು ಪ್ರಕಟವಾಗಿದ್ದ ತ್ತೈಮಾಸಿಕ ವರದಿಯಲ್ಲಿ ಈ ಅಂಶ ಉಲ್ಲೇಖಗೊಂಡಿದೆ.

Advertisement

ಮೆಟಾ ಮಾಲೀಕತ್ವದ ಫೇಸ್‌ಬುಕ್‌ನಲ್ಲಿಯೂ ಕೂಡ ಪುರುಷರದ್ದೇ ಪಾರಮ್ಯ. ಹೀಗಾಗಿ, ಮಹಿಳೆಯರು ತಮ್ಮ ಸುರಕ್ಷತೆಗೆ ಅದರಿಂದ ಧಕ್ಕೆ ಉಂಟಾಗುತ್ತದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಎಂದು ಜಾಲತಾಣದ ಉದ್ಯೋಗಿಗಳ ಸಂಘಟನೆ ನಡೆಸಿದ ಮತ್ತೂಂದು ವರದಿಯಲ್ಲೂ ಪ್ರಸ್ತಾಪಗೊಂಡಿದೆ. ಭಾರತದಲ್ಲಿ ಮಹಿಳೆಯರನ್ನು ಹೊರತುಪಡಿಸಿ ಮೆಟಾ ಮಾಲೀಕತ್ವದ ಫೇಸ್‌ಬುಕ್‌ ತನ್ನ ಅಸ್ತಿತ್ವ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಅದರಲ್ಲಿ ಅಭಿಪ್ರಾಯಪಡಲಾಗಿದೆ.

ಕಳೆದ ವರ್ಷದಿಂದಲೇ ಭಾರತದಲ್ಲಿ ಜಾಲತಾಣದ ಫಾಲೋವರ್ಸ್‌ಗಳ ಸಂಖ್ಯೆ ಇಳಿಮುಖವಾಗಿತ್ತು. ಆರು ತಿಂಗಳ ಅವಧಿಯಲ್ಲಿ 1.4 ಬಿಲಿಯನ್ ಮಂದಿಯನ್ನು ಸೇರಿಸಿಕೊಂಡ ಬೆನ್ನಲ್ಲೇ ಈ ಬೆಳವಣಿಗೆ ಶುರುವಾಗಿದೆ. ಈ ಅಧ್ಯಯನದ ಬಗ್ಗೆ ಪ್ರತಿಕ್ರಿಯೆ ನೀಡಿದ ಮೆಟಾ ಸಂಸ್ಥೆಯ ವಕ್ತಾರ “ಆಂತರಿಕವಾಗಿ ಸಂಶೋಧನೆ ನಡೆಸುವ ಬಗ್ಗೆ ಕಂಪನಿ ಯಾವತ್ತೂ ಹೂಡಿಕೆ ಮಾಡುತ್ತದೆ. ಏಳು ತಿಂಗಳ ಹಿಂದಿನ ವರದಿಯನ್ನು ಸಮಗ್ರ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next