Advertisement

ಗಂಗಾವತಿ: ಹೆಚ್ಚಳವಾಗುತ್ತಿರುವ ಅನಾಥ ವಯೋವೃದ್ಧರು, ಭಿಕ್ಷುಕರ ಸಂಖ್ಯೆ ಜಿಲ್ಲಾಡಳಿತ ಮೌನ

11:20 AM Oct 17, 2021 | Team Udayavani |

ಗಂಗಾವತಿ: ನಗರದಲ್ಲಿ ನಿತ್ಯವೂ ಹೊಸ ಅನಾಥ ವಯೋವೃದ್ಧರು, ಬುದ್ಧಿಮಾಂಧ್ಯರು ಹಾಗೂ ಭಿಕ್ಷುಕರು ಕಂಡು ಬರುತ್ತಿದ್ದು ಇವರನ್ನು ಸಂರಕ್ಷಣೆ ಮಾಡಿ ಜೀವನ ಕಲ್ಪಿಸಲು ಜಿಲ್ಲಾಡಳಿತ ವಿಫಲವಾಗಿದೆ.

Advertisement

ಕೊಪ್ಪಳ ಜಿಲ್ಲೆಯಾಗಿ 24 ವರ್ಷಗಳು ಕಳೆದರೂ ಅನಾಥ ವಯೋವೃದ್ಧರು, ಬುದ್ಧಿಮಾಂಧ್ಯರು ಹಾಗೂ ಭೀಕ್ಷುಕರ ಪುನರ್ವಸತಿ ಕೇಂದ್ರಗಳಿಲ್ಲ. ದೂರದ ಬಳ್ಳಾರಿ, ರಾಯಚೂರು ಗದಗ ಹಾಗೂ ಬಾಗಲಕೋಟೆಯ ಪುನರ್ವಸತಿ ಕೇಂದ್ರಗಳಿಗೆ ಇವರನ್ನು ಕಳುಹಿಸಲು ಸ್ಥಳೀಯ ಅಧಿಕಾರಿಗಳು ಹೆಣಗಾಡಬೇಕಾದ ಸ್ಥಿತಿಯುಂಟಾಗಿದೆ.

ಅನಾಥ ವಯೋವೃದ್ಧರು ಭಿಕ್ಷುಕರನ್ನು ನೋಡಿಕೊಳ್ಳಲು ರಾಜ್ಯ ಸರಕಾರ ಪ್ರತಿ ಜಿಲ್ಲಾ ಅಥವಾ ಆಯ್ದ ತಾಲೂಕುಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ತೆರೆದಿದ್ದು ಇದುವರೆಗೂ ಕೊಪ್ಪಳ ಜಿಲ್ಲೆಯಲ್ಲಿ ಒಂದು ಕೇಂದ್ರವೂ ಇಲ್ಲ. ಸರಕಾರ ಅನಾಥ ವಯೋವೃದ್ಧರು ಭಿಕ್ಷುಕರ ಪುನರ್ವಸತಿ ಕಲ್ಪಿಸಲು ಯೋಜನೆ ರೂಪಿಸಿ ಇದಕ್ಕೆ ಗ್ರಾ.ಪಂ.ನಗರಸಭೆ, ಪುರಸಭೆ ಮತ್ತು ಪಟ್ಟಣಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜನರಿಂದ ಶೇ.3 ರಷ್ಟು ಶುಲ್ಕ ವಸೂಲಿ ಮಾಡಿ ಪ್ರತಿ ವರ್ಷ ಸರಕಾರಕ್ಕೆ ಕಳಿಸುವ ಯೋಜನೆ ಹಲವು ದಶಕಗಳಿಂದ ಜಾರಿ ಇದ್ದು ಕೊಪ್ಪಳ ಜಿಲ್ಲೆಯಿಂದ ಕೋಟ್ಯಾಂತರ ರೂ.ಗಳ ಶುಲ್ಕ ವಸೂಲಿಯಾದರೂ ಜಿಲ್ಲೆಯಲ್ಲಿ ಒಂದು ಪುನರ್ವಸತಿ ಕೇಂದ್ರವಿಲ್ಲ.

ಗಂಗಾವತಿಯಲ್ಲಿ ಇತ್ತೀಚಿನ ಕೆಲವು ತಿಂಗಳುಗಳಲ್ಲಿ  ಅನಾಥ ವಯೋವೃದ್ಧರು, ಭಿಕ್ಷುಕರು ಮತ್ತು ಬುದ್ದಿಮಾಂಧ್ಯರ ಸಂಖ್ಯೆ ಹೆಚ್ಚಳವಾಗಿದ್ದು ನಗರದ ಜಗಜೀವನರಾಂ ವೃತ್ತ, ಸಿಬಿಎಸ್.ಮಹಾವೀರ, ಗಾಂಧಿಚೌಕ್, ಎಪಿಎಂಸಿ ಯಾರ್ಡ್, ಬಯಲು ರಂಗಮಂದಿರ, ಗುಂಡಮ್ಮ ಕ್ಯಾಂಪಿನ ಇಂದಿರಾ ಕ್ಯಾಂಟೀನ್  ಬಳಿ ಹಲವು ಅನಾಥ ವಯೋವೃದ್ದರು ಕಂಡು ಬರುತ್ತಾರೆ. ಇವರಿಗೆ ದಾರಿಯಲ್ಲಿ ಹೋಗುವವರು ಮತ್ತು ಕೆಲ ಸಂಘ ಸಂಸ್ಥೆಯವರು ಅಗಾಗ ಅನ್ನ ನೀರಿನ ಪಾಕೇಟ್ ವಿತರಿಸುತ್ತಿದ್ದಾರೆ. ನಗರಸಭೆಯಿಂದ ಹಳೆ ಐಬಿಯಲ್ಲಿ ನಿರ್ಗತಿಕರಿಗೆ ತಂಗಲು ವ್ಯವಸ್ಥೆ ಮಾಡಿದ್ದರೂ ಅನಾಥ ವಯೋವೃದ್ಧರು ಅಲ್ಲಿಗೆ ತೆರಳಲು ಒಪ್ಪುತ್ತಿಲ್ಲ. ನಿರ್ಗತಿಕರು ತಂಗಲು ಕೇಂದ್ರದಲ್ಲಿ ಒಂದು ದಿನ ಮಾತ್ರ ಅವಕಾಶವಿದೆ.

ರೈಲ್ವೆಯಲ್ಲಿ ಬರುವ ಅನಾಥ ವಯೋವೃದ್ಧರು: ಕಳೆದ ವರ್ಷದ ಹಿಂದೆ ನಗರಕ್ಕೆ ರೈಲ್ವೆ ಸಂಚಾರ ಆರಂಭವಾಗಿದೆ ಕೆಲ ಅನಾಥ ವಯೋವೃದ್ಧರನ್ನು ರೈಲಿನ ಮೂಲಕ ಇಲ್ಲಿಗೆ ಕರೆ ತಂದು ಬಿಡಲಾಗುತ್ತಿದೆ. ಈ ಕುರಿತು ನಗರಸಭೆಯ ಕೆಲ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ಸ್ಥಳೀಯ ಪೊಲೀಸ್ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಖ ಗಮನಕ್ಕೂ ತಂದಿದ್ದಾರೆ ಎನ್ನಲಾಗುತ್ತಿದೆ.

Advertisement

ಗಂಗಾವತಿ ನಗರದಲ್ಲಿ ಅನಾಥ ವಯೋವೃದ್ಧರು ಮತ್ತು ಭಿಕ್ಷುಕರು ಮತ್ತು ಬುದ್ದಿಮಾಂಧ್ಯರ ಸಂಖ್ಯೆ ಹೆಚ್ಚಳವಾಗಿದೆ. ಕೇಂದ್ರ ಬಸ್ ನಿಲ್ದಾಣ, ಪಾರ್ಕ್ ಬಯಲು ರಂಗಮಂದಿರ  ಹಾಗೂ ನಗರದ ವಿವಿಧ ವೃತ್ತಗಳಲ್ಲಿ ಇವರನ್ನು ಕಾಣಬಹುದಾಗಿದೆ. ರಾಜ್ಯ ಸರಕಾರ ಇವರನ್ನು ಸಂರಕ್ಷಣೆ ಚಿಕಿತ್ಸೆ ನೀಡಲು ಪುನರ್ವಸತಿ ಕೇಂದ್ರಗಳನ್ನು ಸ್ಥಳೀಯವಾಗಿ ಆರಂಭಿಸಬೇಕಾಗಿದೆ. ವಯೋವೃದ್ಧರು ಮಳೆ ಬಿಸಿಲು ಚಳಿ ಎನ್ನದೇ ರಸ್ತೆ ಬದಿಯಲ್ಲಿ ಬಿದ್ದಿರುವ ದೃಶ್ಯ ಮನಕಲಕುತ್ತಿದೆ.

ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಹಾಲಪ್ಪ ಆಚಾರ್ ಯವರು ಕೊಪ್ಪಳ ಜಿಲ್ಲೆಯ ಎದುರಾಗಿರುವುದರಿಂದ ಕೊಪ್ಪಳ ಜಿಲ್ಲೆಯಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪನೆ ಮಾಡುವ ಮೂಲಕ ಅನಾಥ ವಯೋವೃದ್ಧರೂ ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಬೇಕಿದೆ .

ಪತ್ರ ಬರೆಯಲಾಗಿದೆ : ಅನಾಥ ವಯೋವೃದ್ಧರು,ಭೀಕ್ಷುಕರು ಮತ್ತು ಬುದ್ಧಿಮಾಂಧ್ಯ ಇರುವವರನ್ನು ನಿರ್ಗತಿಕ ಕೇಂದ್ರಕ್ಕೆ ಕರೆ ತರಲಾಗುತ್ತಿದೆ. ಪುನಹ ಅವರೆಲ್ಲ ನಗರದಲ್ಲಿ ತೆವಲಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಜಿಲ್ಲಾಡಳಿತಕ್ಕೆ ಸ್ಥಳೀಯವಾಗಿ ಪುನರ್ವಸತಿ ಕೇಂದ್ರವನ್ನು ಆರಂಭಿಸುವಂತೆ  ಕೋರಲಾಗಿದೆ. ಮಹಿಳಾ ಮಕ್ಕಳ ಕಲ್ಯಾಣ,ಪೊಲೀಸ್ ಮತ್ತು ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿ ಮತ್ತೊಮ್ಮೆ ಪುನರ್ವಸತಿ ಕೇಂದ್ರ ಆರಂಭಕ್ಕೆ  ಪತ್ರ ಬರೆಯಲಾಗುತ್ತದೆ. ಕೆಲವರು ಅನಾಥ ವಯೋವೃದ್ಧರನ್ನು ರೈಲಿನ ಮೂಲಕ ಕರೆ ತಂದು ಬಿಟ್ಟು ಹೋಗುತ್ತಿರುವ ಕುರಿತು ಮಾಹಿತಿ ಇದ್ದು ನಗರಸಭೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ನಗರಸಭೆ ಪೌರಾಯುಕ್ತ  ಅರವಿಂದ ಬಿ ಜಮಖಂಡಿ ಉದಯವಾಣಿ ಗೆ ತಿಳಿಸಿದ್ದಾರೆ.

ಕೆ. ನಿಂಗಜ್ಜ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next