Advertisement

ನೂಲಿನಂಥ ಸೀರೆ, ಜೂಲಿ ಜೂಲಿ ಎಳೆಗಳಿಂದ ಮಾಡಿದ ಸೀರೆ ಉಟ್ಟು ನೋಡು

03:45 AM Feb 01, 2017 | Harsha Rao |

ಓವರ್‌ಕೋಟ್‌, ಟಾಪ್‌, ಪ್ಯಾಂಟ್‌, ಬ್ಯಾಗ್‌ ಮೇಲೆಲ್ಲ ಫ್ರಿಂಜ್‌ ಎಂಬ ಜೂಲು ಜೂಲು ಬಂದು ಕೂತು ಬಹಳ ಕಾಲವಾಯ್ತು. ಆದರೆ ಜೂಲು ಜೂಲಿ ಈಗ ಸೀರೆಯ ಅಂಚಿಗೆ ಅಂಟಿಕೊಂಡಿದೆ. ಫ್ರಿಂಜ್‌ ಸೀರೆಗಳ ಜಮಾನ ಆರಂಭವಾಗಿದೆ, ಈ ಸ್ಟೈಲ್‌ ಮಾಡಕ್ಕೆ ನೀವ್‌ ರೆಡಿನಾ? 
*
ಪ್ಯಾರಿಸ್‌ ಅಂದ್ರೆ ಪ್ರಣಯ ಅಂತಾರೆ ನಾಗತಿಹಳ್ಳಿ. ಈ ಪ್ರಣಯ ನಗರಿಯಲ್ಲಿ ಕುಡಿಯೊಡೆವ ಎಲ್ಲ ಫ್ಯಾಶನ್‌ಗಳ ಅಂತರಾಳದಲ್ಲಿ ಪ್ರೀತಿಯ ನವಿರು ಇಲ್ಲದಿದ್ದೀತೇ? ಇಂಥ ಪ್ರೀತಿಯ ಎಳೆಗಳಿಂದಲೇ ನೇಯ್ದ ನೇಯ್ಗೆ ಈ ಫ್ರಿಂಜ್‌. 
ಕಳೆದ ವರ್ಷದ ಮಧ್ಯಭಾಗ,  ಬೇಸಿಗೆಯ ಅಬ್ಬರ ತಗ್ಗಿ ಹೂ ಮಳೆಯ ಸಿಂಚನದಲ್ಲಿ ಮಿಂದೇಳುತ್ತಿದ್ದ ಫ್ಯಾಶನ್‌ ಜಗತ್ತು. ಎಳೆಹಸಿರು ಬಣ್ಣದ ಬಳ್ಳಿಗಳು, ನಡು ನಡುವೆ ಪುಟ್ಟ ಪುಟ್ಟ ಹೂಗೊಂಚಲುಗಳು, ಅವುಗಳ ಮೇಲೆ ಮಳೆಹನಿಗಳ ಶೃಂಗಾರ ಕಾವ್ಯ. 

Advertisement

ಮೊಣಕಾಲು ಮೀರಿ ಪಾದವನ್ನು ಸೋಕಿ ಕಚಗುಳಿಯಿಟ್ಟಂತೆ ಹಿಂದೆಗೆಯುವ ಉದ್ದ ಗೌನುಗಳು, ಮೊಣಕಾಲ ಮೇಲೆ ಚಿಟ್ಟೆಯಂತೆ ರೆಕ್ಕೆ ಬಡಿಯುವ ಸ್ಕರ್ಟ್‌, ಮಿನಿಗಳು, ಮುದ್ದಿನ ಹುಡುಗಿಯ ಇಷ್ಟದ ಪುಟ್ಟ ರವಿಕೆ ಉದ್ದ ಲಂಗವಿರುವ ಲೆಹೆಂಗಾ, ಅಲೆಮಾರಿ ಹುಡುಗಿಯ ಸಂಗಾತಿಯಂಥ ಪಲಾಝೋ .. ಎಲ್ಲದರಲ್ಲೂ  ಅವವೇ ಪ್ರಿಂಟ್‌ಗಳು, ಚಿತ್ರ ವಿಚಿತ್ರ ಬಣ್ಣಗಳು. ಫ್ಯಾಶನ್‌ ಜಗತ್ತಿನ ಅಂತಃಪುರದೊಳಗೆ ಒಂದು ಸುತ್ತ ಹೊಡೆದರೆ ಕಾಲಿಗೆ ತೊಡರುವ ಹೂ ಬಳ್ಳಿಗಳು ..
ಇಂಥ ಸಂದರ್ಭದಲ್ಲೂ ನೀರೆಯ ಕಣ್ಣು ಎತ್ತೆತ್ತಲೋ ಕಣ್ಣುಹಾಯಿಸುತ್ತಿತ್ತು, ಹೊಸತರ ಕಾತರ ಆ ಕಣ್ಣುಗಳಲ್ಲಿದ್ದವು. ಇದೇ ಟೈಂಗೆ ಪ್ರೀತಿಯ ನಗರಿ ಪ್ಯಾರಿಸ್‌ನಲ್ಲಿ “ಫ್ಯಾಶನ್‌ ವೀಕ್‌’. ಇಡೀ ಜಗತ್ತು ಈ ಫ್ಯಾಶನ್‌ ವೀಕ್‌ನತ್ತ ದೃಷ್ಟಿ ನೆಟ್ಟಿತ್ತು. 

ಮೈಯೆಲ್ಲ ಜೂಲು ಜೂಲಿನ ಅಂಗಿ ತೊಟ್ಟ ಬಳುಕು ನಡಿಗೆ ಸುಂದರಿಯೊಬ್ಬಳು ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕುತ್ತಿದ್ದಳು. ಕ್ಯಾಮರಗಳ ಫ್ಲ್ಯಾಶ್‌ನಲ್ಲಿ ಆಕೆಯ ಬಟ್ಟೆಯ ಜೂಲ್‌ಗ‌ಳು ಮಿರಮಿರ ಮಿಂಚುತ್ತಿದ್ದವು. ಆ ಸಂಜೆ ಕಳೆದು ಬೆಳಗಾದರೆ ಪ್ಯಾರಿಸ್‌ ಬೀದಿಯಲ್ಲಿ ಸುತ್ತಾಡುವ ಹರೆಯದ ಹುಡುಗಿಯರ ಮೈಮೇಲೂ ಜೂಲು ಜೂಲಿನ ಫ್ರಿಂಜ್‌ ಟಾಪ್‌, ನಮ್ಮ ಬಾಲಿವುಡ್‌ನ‌ಲ್ಲೆಲ್ಲ ಜೂಲಿನದೇ ಹಾರಾಟ. 

ಈಗ ಅದಲ್ಲ ಕತೆ ಬಿಡಿ, ಫ್ರಿಂಜ್‌ ಸೀರೆ ಬಗ್ಗೆ ಹೇಳಕ್ಕೆ ಹೊರಟು ಇಷ್ಟೆಲ್ಲ ಪುರಾಣ. ಫ್ರಿಂಜ್‌ ಟಾಪ್‌, ಪ್ಯಾಂಟ್‌, ಬ್ಯಾಗ್‌ಗಳ ಬಗ್ಗೆ ವರ್ಷದ ಹಿಂದೆಯೇ ಕತೆ ಹೇಳಾಗಿದೆ, ಈ ಸೀರೆ ಮೇಲೆ ಫ್ರಿಂಜ್‌ ಬಂದಿದೆ. 2017ರ ಸ್ಟೈಲಿಶ್‌ ಸೀರೆ ಪಟ್ಟಿಯಲ್ಲಿ ಫ್ರಿಂಜ್‌ಸೀರೆಗೆ “ಹೊಸ ವಿನ್ಯಾಸದ ಸೀರೆ’ ಎಂಬ ಹೆಗ್ಗಳಿಕೆ ಸಿಕ್ಕಿದೆ. ಸೀರೆಯಲ್ಲಿ ಫ್ರಿಂಜ್‌ ವಿನ್ಯಾಸ ಭಾರತೀಯರಿಗೆ ಹೊಸತಲ್ಲ. ಸೀರೆಯ ತುದಿಗೆ ಕುಚ್ಚು ಕಟ್ಟುವ ಪದ್ದತಿ ಮೊದಲಿಂದಲೂ ನಮ್ಮಲ್ಲಿತ್ತು. ರೇಶೆ¾ ಸೀರೆಯಲ್ಲಂತೂ ದಪ್ಪ ದಪ್ಪದ ಕುಚ್ಚುಗಳು ಉದ್ದ ಸೀರೆಯ ಜಡೆಯಂತೆ ಆಕೆಯ ಹಿಂಭಾಗ ಕ್ಷಣಕ್ಕೊಮ್ಮೆ ಅತ್ತಿತ್ತ ಸರಿದಾಡುತ್ತಿತ್ತು. ಈಗಲೂ ನಮ್ಮಲ್ಲಿ ಸೀರೆಗೆ ಕುಚ್ಚು ಹಾಕುವವರಿದ್ದಾರೆ. ಚಿಕ್ಕ ಫ್ರಿಂಜ್‌ಗಳು ಸೀರೆಯ ಕುಚ್ಚಿಗಿಂತ ಭಿನ್ನವಲ್ಲ. ಆದರೆ ಫ್ಯಾಶನ್‌ ಜಗತ್ತಿನ ರಿಯಲ್‌ ಫ್ರಿಂಜ್‌ಗಳು ಇನ್ನೂ ಉದ್ದುದ್ದಕ್ಕೆ ನ್ಯೂಡಲ್ಸ್‌ ಥರ ಸೀರೆಯ ಅಂಚಿಗೆ ಅಂಟಿಕೊಂಡಿರುತ್ತವೆ. ಬರೀ ಸೀರೆಯ ಅಂಚಿಗೆ ಮಾತ್ರ ಅಲ್ಲ, ಸೀರೆಯ ಮುಂಭಾಗಕ್ಕೂ ಕುಚ್ಚನ್ನು ವಿನ್ಯಾಸ ಮಾಡೋ ಫ್ಯಾಶನ್‌ 2017ರ ಲೇಟೆಸ್ಟ್‌ ಸ್ಟೈಲ್‌.  ಕಾಂಟ್ರಾಸ್ಟ್‌ ಕಲರ್‌ ಫ್ರಿಂಜ್‌ಗಳು, ಅದೇ ಬಣ್ಣದ ಫ್ರಿಂಜ್‌ಗಳು, ಬಂಗಾರದ ಬಣ್ಣ, ಬೆಳ್ಳಿಯ ಬಣ್ಣ, ಮಿರ ಮಿರ ಮಿರುಗುವ ಲೋಹದ ಬಣ್ಣದ ಫ್ರಿಂಜ್‌ಗಳು ಸೀರೆಯ ಚೆಂದ ಹೆಚ್ಚಿಸುತ್ತಿವೆ. 

ನೀವು ಪಾರ್ಟಿಗೆ ಡೀಸೆಂಟಾಗಿ ಹೋಗ್ಬೇಕು ಅಂದ್ರೆ ಫ್ರಿಂಜ್‌ ಸೀರೆಯೇ ಟ್ರೆಂಡಿ ಹಾಗೂ ಬೆಸ್ಟ್‌ ಆಯ್ಕೆ. ಕೆಂಪು, ಕಪ್ಪು, ನೀಲಿ ಬಣ್ಣದ ಫ್ರಿಂಜ್‌ ಸೀರೆಗಳಲ್ಲಿ ನೀವು ಗಾರ್ಜಿಯಸ್‌ ಆಗಿ ಕಾಣಬಹುದು. ಪೊಲ್ಕಾ ಡಾಟ್ಸ್‌ಗಳಿರೋ ಫ್ರಿಂಜ್‌ ಸೀರೆಯಂತೂ ಸಖತ್‌ ಕ್ಯೂಟಾಗಿರುತ್ತೆ. ಈ ಸೀರೆಗೆ ಮೆಟಲ್‌ ಫ್ರಿಂಜ್‌ನ ನೆಕ್ಲೆಸ್‌ ಹಾಕ್ಕೊಳ್ಳಿ, ಪಾರ್ಟಿಯಲ್ಲಿ ನೀವೇ ಕೇಂದ್ರಬಿಂದುವಾಗ್ತಿàರ. ತೆಳ್ಳಗಿನ ಶಿಫಾನ್‌ ಮೆಟೀರಿಯಲ್‌, ಜಾರ್ಜೆಟ್‌, ಕ್ರೇಪ್‌ ಮೆಟೀರಿಯಲ್‌ ಸೀರೆಗೆಲ್ಲ ಈ ಥರ ಫ್ರಿಂಜ್‌ ಡಿಸೈನ್‌ ಮಾಡಿಕೊಳ್ಳಬಹುದು. 

Advertisement
Advertisement

Udayavani is now on Telegram. Click here to join our channel and stay updated with the latest news.

Next