Advertisement
ಥಾಣೆ ಬಂಟ್ಸ್, ಮುಲುಂಡ್ ಬಂಟ್ಸ್, ಮುಲುಂಡ್ ಹೊಟೇಲಿಯರ್ಸ್, ಥಾಣೆ ಹೊಟೇಲ್ ಓನರ್ಸ್ ಅಸೋಸಿಯೇಶನ್ ಹಾಗೂ ತಿರುಪತಿ ಬಳಗ ಇನ್ನಿತರ ಸಂಘಟನೆಗಳ ಆಶ್ರಯದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಪಾಲ್ಗೊಂಡು ಸಂತಾಪ ಸೂಚಿಸಿದರು. ನಗರದ ಗಾಯಕ ಗಣೇಶ್ ಎರ್ಮಾಳ್ ಅವರಿಂದ ಪ್ರಾರಂಭದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.
Related Articles
Advertisement
ಮುಲುಂಡ್ ಬಂಟ್ಸ್‌ನ ಮಾಜಿ ಅಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ ಮಾತನಾಡಿ, ಓರ್ವ ಮನುಷ್ಯನಿಗೆ 56 ವರ್ಷ ಸಾಯುವ ಪ್ರಾಯವಲ್ಲ. ತನ್ನ ಗೃಹಸ್ಥ ಜೀವನದಲ್ಲಿ ಸಾಧನೆ ಮಾಡುವ ಕಾಲವದು. ಅರುವತ್ತರ ಬಳಿಕ ತಾನು ಮಾಡಿದ ಸಾಧನೆಯನ್ನು ಅನುಭವಿಸುವ ಕಾಲ. ಆದರೆ ಸುರೇಶ್ ಶೆಟ್ಟಿ ಅವರಿಗೆ ಮಾತ್ರ ಆ ಭಾಗ್ಯ ಸಿಗಲಿಲ್ಲ. ಜೀವನ ಪೂರ್ತಿ ಸಾಧನೆಗೈದು ನಮ್ಮಿಂದ ಮರೆಯಾಗಿದ್ದಾರೆ. ದಾನಿಯಾಗಿ, ಕಲಾ ಪೋಷಕರಾಗಿ ಸಲ್ಲಿಸಿರುವ ಅವರ ಸೇವೆ ಸ್ವರಣೀಯವಾಗಿದೆ ಎಂದರು.
ಉದ್ಯಮಿ ರತ್ನಾಕರ್ ಜಿ. ಶೆಟ್ಟಿ ಮಾತನಾಡಿ, ಸುರೇಶ್ ಶೆಟ್ಟಿ ಮುಂಬಯಿ ಮಾತ್ರವಲ್ಲ ಊರಲ್ಲೂ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರು ತಮ್ಮದೇ ಆದ ಅಭಿಮಾನಿ ವರ್ಗವನ್ನು ಹೊಂದಿದ್ದರು ಎಂಬುವುದಕ್ಕೆ ಅವರ ಅಂತಿಮ ಯಾತ್ರೆಯಲ್ಲಿ ಸೇರಿದ ಜನಸಾಗರ ಸಾಕ್ಷಿಯಾಗಿದೆ ಎಂದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ದಯಾನಂದ ಪೂಜಾರಿ, ಜಾಸ್ಮಿàನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಡಾ| ಸುರೇಂದ್ರ ಶೆಟ್ಟಿ, ರಂಗಕರ್ಮಿ ಲೀಲಾಧರ ಶೆಟ್ಟಿ ಕಾಪು, ಪತ್ರಕರ್ತ ದಯಾಸಾಗರ್ ಚೌಟ ಅವರು ನುಡಿನಮನ ಸಲ್ಲಿಸಿದರು. ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಸುರೇಶ್ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಠಿ ಗೈದು ಶ್ರದ್ಧಾಂಜಲಿ ಸಲ್ಲಿಸಿದರು. ಉದ್ಯಮಿಗಳಾದ ಕರಿಯಣ್ಣ ಶೆಟ್ಟಿ, ಅಶೋಕ್ ಅಡ್ಯಂತಾಯ, ಉದಯ ಶೆಟ್ಟಿ, ಜಯ ಶೆಟ್ಟಿ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಉದ್ಯಮಿ ಸುರೇಶ್ ಶೆಟ್ಟಿ, ಥಾಣೆ ಬಂಟ್ಸ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೇವತಿ ಶೆಟ್ಟಿ, ಮುಲುಂಡ್ ಬಂಟ್ಸ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಶಿಕಾಂತಿ ಶೆಟ್ಟಿ ಮೊದಲಾದವರು ನುಡಿನಮನ ಸಲ್ಲಿಸಿದರು.
ಕಲಾ ಸಂಘಟಕ ಕರ್ನೂರು ಮೋಹನ್ ರೈ ಅವರು ಮರಾಠ ಸುರೇಶ್ ಶೆಟ್ಟಿ ಅವರ ಸಾಧನೆಗಳನ್ನು ವಿವರಿಸಿ ಕಾರ್ಯಕ್ರಮ ನಿರ್ವಹಿಸಿದರು. ಮೌನ ಪ್ರಾರ್ಥನೆಯ ಮೂಲಕ ಸೇರಿದ ನೂರಾರು ಮಂದಿ ಶ್ರದ್ಧಾಂಜಲಿ ಸಲ್ಲಿಸಿದರು. ಸಂಗೀತ ಕಾರ್ಯಕ್ರಮದಲ್ಲಿ ತಬಲಾದಲ್ಲಿ ಜನಾರ್ದನ ಸಾಲ್ಯಾನ್ ಸಹಕರಿಸಿದರು. ಸಭೆಯಲ್ಲಿ ಥಾಣೆಯ ಉದ್ಯಮಿ ಶಿವರಾಮ್ ಶೆಟ್ಟಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು, ಮುಂಬಯಿ, ಥಾಣೆ, ನವಿಮುಂಬಯಿ ಪರಿಸರದ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಳೆದ ಸುಮಾರು 30 ವರ್ಷಗಳಿಂದ ನನ್ನ ಜತೆಗಿದ್ದ ಓರ್ವ ಆತ್ಮೀಯ ಮಿತ್ರ ಎನ್ನುವುದಕ್ಕಿಂತ ನನ್ನ ಸಹೋದರನ ಸ್ಥಾನದಲ್ಲಿದ್ದ ಜತೆಗಾರನನ್ನು ನಾನಿಂದು ಕಳೆದುಕೊಂಡಿದ್ದೇನೆ. ನಮ್ಮ ತಿರುಪತಿ ಬಳಗದ ಓರ್ವ ಸಕ್ರಿಯ ಸದಸ್ಯರಾಗಿ ಅವರ ಕೊಡುಗೆ ಅಪಾರ. ಅವರ ಆತ್ಮಕ್ಕೆ ಪರಮಾತ್ಮ ಚಿರಶಾಂತಿಯನ್ನು ಕರುಣಿಸಲಿ. –ಪಲಿಮಾರು ವಸಂತ್ ಎನ್. ಶೆಟ್ಟಿ ಅಧ್ಯಕ್ಷರು, ಮುಲುಂಡ್ ಬಂಟ್ಸ್
ತ್ಯಾಗದ ಸಾಕಾರ ಮೂರ್ತಿಯನ್ನು ನಾವಿಂದು ಕಳೆದುಕೊಂಡಿದ್ದೇವೆ. ತನ್ನ ಸ್ವಂತ ಐಶ್ವರ್ಯವನ್ನು ನಿಸ್ವಾರ್ಥ ಮನಸ್ಸಿನಿಂದ ಸಮಾಜಕ್ಕೆ ದಾನ ಮಾಡಿದ ಓರ್ವ ಮಹಾನ್ ವ್ಯಕ್ತಿ ಮರಾಠ ಸುರೇಶ್ ಶೆಟ್ಟಿ. ಅವರು ಇನ್ನಷ್ಟು ಕಾಲ ಬಾಳಿ ಬದುಕಬೇಕಿತ್ತು. 56ರ ಹರೆಯದಲ್ಲೇ ವಿಧಿ ಅವರನ್ನು ನಮ್ಮಿಂದ ದೂರ ಮಾಡಿದೆ. –ಪೊಲ್ಯ ಉಮೇಶ್ ಶೆಟ್ಟಿ , ಅಧ್ಯಕ್ಷರು, ಥಾಣೆ ಹೊಟೇಲ್ ಓನರ್ಸ್ ಅಸೋಸಿಯೇಶನ್
ಸುಮಾರು 32 ವರ್ಷಗಳಿಂದ ಒಡನಾಡಿಯಾಗಿದ್ದ ಆಪ್ತಮಿತ್ರನನ್ನು ನಾನು ಕಳೆದುಕೊಂಡಿದ್ದೇನೆ. ನಾನಿಂದು ಅದೇನೇ ಸಮಾಜಪರ ಸೇವೆ ಮಾಡಿದ್ದರೂ ಸುರೇಶ್ ಶೆಟ್ಟಿ ಅವರು ಅದರ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು. ವೈಯಕ್ತಿಕವಾಗಿ ಮತ್ತು ಬಂಟರ ಸಂಘ ಮುಂಬಯಿ ವತಿಯಿಂದ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ. –ಶಾಂತಾರಾಮ್ ಶೆಟ್ಟಿ , ಕಾರ್ಯಾಧ್ಯಕ್ಷರು, ಬಂಟರ ಸಂಘ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ