ನವದೆಹಲಿ : ಬ್ಲೂ ಫಿಲ್ಮ್ ಗಳನ್ನು ತಯಾರು ಮಾಡುತ್ತಿದ್ದ ಆರೋಪದ ಮೇಲೆ ಬಂಧಿತರಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಮೇಲೆ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿ ಬರುತ್ತಿದೆ. ಸದ್ಯ ಮಾಡೆಲ್ ಒಬ್ಬಳು ಆರೋಪ ಮಾಡುತ್ತಿದ್ದು, ಬೆತ್ತಲೆ ಆಡಿಷನ್ ಮಾಡಲು ನನ್ನನ್ನು ಕರೆದಿದ್ದರು ಎಂದು ಹೇಳಿಕೊಂಡಿದ್ದಾಳೆ.
ಕಳೆದ ಲಾಕ್ ಡೌನ್ ವೇಳೆ ರಾಜ್ ಕುಂದ್ರಾ ಸಹಾಯಕ ಉಮೇಶ್ ಕಾಮತ್ ನನಗೆ ಕರೆ ಮಾಡಿ ತಮ್ಮ ವೆಬ್ ಸಿರೀಸ್ ನಲ್ಲಿ ನಟಿಸುವಂತೆ ಕೇಳಿದ್ದರು. ಅಲ್ಲದೆ ವಿಡಿಯೋ ಕಾಲ್ ಮೂಲಕ ನನ್ನ ಸಂದರ್ಶನ ಮಾಡಿದ್ದರು. ಸಂದರ್ಶನದ ವೇಳೆ ಬಟ್ಟೆ ಬಿಚ್ಚುವಂತೆ ಕೇಳಿದ್ದರು. ಈ ವೇಳೆ ಮತ್ತೊಬ್ಬ ವ್ಯಕ್ತಿ ವಿಡಿಯೋ ಕಾಲ್ ನಲ್ಲಿ ಕಾಣಿಸಿದ್ದು, ಆ ವ್ಯಕ್ತಿ ರಾಜ್ ಕುಂದ್ರಾ ಆಗಿರಬಹುದು ಎಂದು ಮಾಡೆಲ್ ಆರೋಪ ಮಾಡಿದ್ದಾಳೆ.
ಇದೇ ವೇಳೆ ಮುಂಬೈ ಪೊಲೀಸರು ಮತ್ತು ನ್ಯಾಯಾಲಯಕ್ಕೆ ಕೇಳಿರುವ ಮಾಡೆಲ್, ರಾಜ್ ಕುಂದ್ರಾ ಬಗ್ಗೆ ಸರಿಯಾದ ವಿಚಾರಣೆ ಆಗಬೇಕು. ರಾಜ್ ಕುಂದ್ರಾ. ಆತನ ಫ್ಯಾಮಿಲಿ ಮತ್ತು ಆಸ್ತಿಯ ವಿಚಾರವಾಗಿ ತನಿಖೆ ನಡೆಯಬೇಕು ಎಂದಿದ್ದಾರೆ.
ಬಾಲಿವುಡ್ ನಲ್ಲಿ ಇದೀಗ ದಂಧೆ ಶುರುವಾಗಿದ್ದು ಮಹಿಳೆಯರನ್ನು ಬಿಕಿನಿ ಶೂಟ್ ಮಾಡಲು, ನೀಲಿ ಚಿತ್ರಗಳನ್ನು ಶೂಟ್ ಮಾಡಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಿಂದ ದೂರ ಇಡಲಾಗುತ್ತದೆ ಎಂಬ ಕಾರಣಕ್ಕೆ ಹಲವು ಮಹಿಳೆಯರು ಇದಕ್ಕೆ ಬಲಿಯಾಗುತ್ತಿದ್ದಾರೆ ಎಂದು ಮಾಡೆಲ್ ಆರೋಪ ಮಾಡಿದ್ದಾಳೆ.