Advertisement
ಪರೀಕ್ಷೆ ಬರೆಯಲು ಭಾರತದ ಹೊರಗೆ ಯಾವುದೇ ಕೇಂದ್ರಗಳನ್ನು ನಿಯೋಜಿಸದೇ ಇರುವ ಬಗ್ಗೆ ಹಲವು ಪರೀಕ್ಷಾರ್ಥಿಗಳು ಎನ್‌ಟಿಎ ಗಮನಕ್ಕೆ ತಂದಿದ್ದರು. ಜತೆಗೆ, ವಿದೇಶಿ ಕೇಂದ್ರಗಳನ್ನು ಸೇರ್ಪಡೆಗೊಳಿಸಿದರೆ ಅನುಕೂಲವಾಗುತ್ತದೆ ಎಂದೂ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ, 12 ದೇಶಗಳ 14 ನಗರಗಳಲ್ಲಿ ನೀಟ್ ಪರೀಕ್ಷೆ ನಡೆಸಲು ತೀರ್ಮಾನಿಸಲಾಯಿತು ಎಂದು ಎನ್‌ಟಿಎ ಹಿರಿಯ ನಿರ್ದೇಶಕ ಸಾಧನಾ ಪರಾಶರ್ ಹೇಳಿದ್ದಾರೆ.
ದುಬಾೖ, ಅಬುಧಾಬಿ ಮತ್ತು ಶಾರ್ಜಾ(ಯುಎಇ), ಕುವೈಟ್ ಸಿಟಿ (ಕುವೈಟ್), ಬ್ಯಾಂಕಾಕ್ (ಥೈಲ್ಯಾಂಡ್), ಕೊಲೊಂಬೋ(ಶ್ರೀಲಂಕಾ), ದೋಹಾ (ಕತಾರ್), ಕಠ್ಮಂಡು (ನೇಪಾಲ), ಕೌಲಾಲಂಪುರ (ಮಲೇಷ್ಯಾ), ಲಾಗೋಸ್ (ನೈಜೀರಿಯಾ), ಮನಾಮಾ(ಬಹ್ರೈನ್), ಮಸ್ಕತ್(ಒಮನ್), ರಿಯಾದ್ (ಸೌದಿ ಅರೇಬಿಯಾ) ಮತ್ತು ಸಿಂಗಾಪುರದಲ್ಲಿ ಪರೀಕ್ಷೆಗಳು ನಡೆಯಲಿವೆ. ಇದರ ಜತೆಗೆ, ಭಾರತದ 554 ಕೇಂದ್ರಗಳಲ್ಲಿ ನೀಟ್ ನಡೆಯಲಿದೆ. ಯುಕೆ, ಕೆನಡಾದ ಸಿಎಗಳಿಗೆ ಭಾರತದಲ್ಲಿ ಅವಕಾಶ?
ಇದೇ ಮೊದಲ ಬಾರಿಗೆ ಯುಕೆ, ಕೆನಡಾದ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಭಾರತದಲ್ಲಿ ಪ್ರಾಕ್ಟೀಸ್ ಮಾಡಲು ಅವಕಾಶ ನೀಡಲು ಯೋಚಿಸಲಾಗಿದೆ. ಅದೇ ರೀತಿ ಭಾರತದ ಸಿಎಗಳು ಯುಕೆ, ಕೆನಡಾದಲ್ಲಿ ಪ್ರಾಕ್ಟೀಸ್ ಮಾಡಬಹುದಾಗಿದೆ. ಈ ರೀತಿಯ ಒಂದು ಪ್ರಸ್ತಾವವನ್ನು ಐಸಿಎಐ ಅಧ್ಯಕ್ಷ ರಂಜಿತ್ ಕುಮಾರ್ ಅಗರ್ವಾಲ್‌ಸಲ್ಲಿಸಿದ್ದಾರೆ. ಯುಕೆ, ಕೆನಡಾ ಜತೆಗೆ ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದದ ಭಾಗವಾಗಿ ಈ ಪ್ರಸ್ತಾವನೆ ಸಲ್ಲಿಕೆ ಯಾಗಿದೆ. ಇದೇ ರೀತಿಯ ಪ್ರಸ್ತಾವವನ್ನು ಐಸಿಎಐ ಅಧ್ಯಕ್ಷರು ಆಸ್ಟ್ರೇಲಿಯಾದ ಮುಂದೆಯೂ ಇರಿಸಿದ್ದಾರೆ. ಒಪ್ಪಂದ ಅಂತಿಮಗೊಂಡರೆ ಉಭಯ ದೇಶಗಳ ಸಿಎಗಳು ಪರಸ್ಪರ ದೇಶಗಳಲ್ಲಿ ಪ್ರಾಕ್ಟೀಸ್ ಮಾಡಬಹುದಾಗಿದೆ.