Advertisement

ಬಂಗಾಲಕೊಲ್ಲಿಯಲ್ಲಿ ದೇಶಿ ಕ್ಷಿಪಣಿ “ಅಸ್ತ್ರ’ಪರೀಕ್ಷೆ ಯಶಸ್ವಿ

09:39 AM Sep 16, 2017 | Team Udayavani |

ಬಾಲಸೋರ್‌ (ಒಡಿಶಾ): ಆಗಸದಿಂದ ಆಗಸಕ್ಕೆ ಚಿಮ್ಮುವ ಹಾಗೂ ಗೋಚರ ಸಾಮರ್ಥ್ಯ ಮೀರಿದ ಅಸಾಧಾರಣ ದೇಶಿ ಕ್ಷಿಪಣಿ “ಅಸ್ತ್ರ’ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ನಾಲ್ಕು ದಿನಗಳ ಕಾಲ ಬಂಗಾಲಕೊಲ್ಲಿಯಲ್ಲಿ ನಡೆಸಲಾದ ಪರೀಕ್ಷೆ ಯಾವುದೇ ಸಮಸ್ಯೆಗಳಿಲ್ಲದೆ ನೆರವೇರಿದೆ ಎಂದು ಸರಕಾರ ಹೇಳಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವಾಲಯ, “ಅಸ್ತ್ರ ಸರಣಿ ಕ್ಷಿಪಣಿಗಳ ಪೈಕಿ ಅಂತಿಮವಾಗಿ ಸಿದ್ಧಗೊಂಡಿರುವ “ಅಸ್ತ್ರ ಬಿವಿಆರ್‌ಎಎಎಂ’ ಉಡಾವಣೆ ಯಶಸ್ವಿಯಾಗಿ ನಡೆದಿದೆ. ಆಗಸದಿಂದ ಆಗಸಕ್ಕೆ ಚಿಮ್ಮುವಂಥ ಅತ್ಯಾಧುನಿಕ ಕ್ಷಿಪಣಿ ಇದಾಗಿದ್ದು, ಒಡಿಶಾದ ಸಾಗರ ತೀರ ಪ್ರದೇಶ ಚಾಂಡೀಪುರದಲ್ಲಿ ಸೆಪ್ಟೆಂಬರ್‌ 11-14ರ ತನಕ ಪರೀಕ್ಷೆಗೆ ಒಳಪಡಿಸಲಾಯಿತು. ಒಟ್ಟು 7 ಕ್ಷಿಪಣಿಗಳನ್ನು ಪೈಲೆಟ್‌ ಇಲ್ಲದ ಯುದ್ಧ ವಿಮಾನಗಳ ಮೇಲೆ ಪರೀಕ್ಷೆಗೊಳಪಡಿಸಲಾಯಿತು. ಪರೀಕ್ಷೆ ಯಶಸ್ವಿಯಾಗಿ ನಡೆದಿದೆ’ ಎಂದು ತಿಳಿಸಿದೆ.

Advertisement

ಭಾರತೀಯ ವಾಯುಪಡೆ ಬಲ ಹೆಚ್ಚಿಸುವಲ್ಲಿ ನಮ್ಮ ನೆಲದಲ್ಲೇ ಅಭಿವೃದ್ಧಿಯಾದ “ಅಸ್ತ್ರ’ ಕ್ಷಿಪಣಿ ಮಹತ್ವದ ಪಾತ್ರ ವಹಿಸಲಿದೆ ಎಂದು ರಕ್ಷಣಾ ಸಚಿವಾಲಯ ಅಭಿಪ್ರಾಯಪಟ್ಟಿದೆ. ರಕ್ಷಣಾ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಈ ಕ್ಷಿಪಣಿ ಅಭಿವೃದ್ಧಿಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next