Advertisement

ಎನ್ನೆಸ್ಸೆಸ್‌ ಆಶಯ ನಮ್ಮ ಧ್ಯೇಯವಾಗಲಿ: ಕಾರ್ಣಿಕ್‌

10:46 PM Sep 27, 2019 | Team Udayavani |

ಕಾರ್ಕಳ: ಸಮಾಜದ ಏಳಿಗೆ ಪ್ರಕ್ರಿಯೆಯಲ್ಲಿ ನನ್ನ ಪಾತ್ರವೇನಿದೆ ಎಂಬು ದನ್ನು ಪ್ರತಿಯೊಬ್ಬರೂ ಚಿಂತಿಸಿ ಬದುಕಬೇಕು. ರಾಷ್ಟ್ರೀಯ ಸೇವಾ ಯೋಜನೆಯ ಆಶಯ ದಂತೆ ರಾಷ್ಟ್ರಾಭಿವೃದ್ಧಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಕ್ಯಾ| ಗಣೇಶ್‌ ಕಾರ್ಣಿಕ್‌ ಹೇಳಿದರು.

Advertisement

ಅವರು ಸೆ. 25ರಂದು ಸಂಜೆ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎನ್ನೆಸ್ಸೆಸ್‌ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಹೆತ್ತವರಿಗೆ ಒಳ್ಳೆಯ ಮಕ್ಕಳಾಗಿದ್ದು, ಪ್ರಾಧ್ಯಾಪಕರಿಗೆ ವಿಧೇಯ ವಿದ್ಯಾರ್ಥಿಗಳೆನಿಸಿಕೊಂಡು, ವಿವಿಧ ಬಗೆಯ ಕೌಶಲಗಳನ್ನು ಬೆಳೆಸಿಕೊಂಡು ಸಮಾಜ ಹಾಗೂ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ಪಠ್ಯದಿಂದ ಹೊರತಾಗಿಯೂ ಇತಿಹಾಸ, ಸಾಹಿತ್ಯ, ಆರ್ಥಿಕತೆಯೇ ಮೊದಲಾದ ವಿಷಯಗಳಲ್ಲಿ ಜ್ಞಾನ ಸಂಪಾದಿಸಿ ಕೊಂಡು ಆದರ್ಶ ವ್ಯಕ್ತಿಗಳನ್ನು ಅನುಕರಣೆ ಮಾಡಿಕೊಂಡು ಮುಂದುವರಿಯಬೇಕು ಎಂದರು.

ನಿಟ್ಟೆ ತಾಂತ್ರಿಕ ಕಾಲೇಜಿನ ಉಪ ಪ್ರಾಂಶುಪಾಲ ಡಾ| ಐ. ರಮೇಶ್‌ ಮಿತ್ತಂತಾಯ ಮಾತನಾಡಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ನಿರಂಜನ್‌ ಎನ್‌. ಚಿಪ್ಳೂಣRರ್‌ ಅಧ್ಯಕ್ಷತೆ ವಹಿಸಿದ್ದರು.

ಎನ್ನೆಸ್ಸೆಸ್‌ ಸುವರ್ಣ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಎನ್ನೆಸ್ಸೆಸ್‌ ಘಟಕದ ವಿದ್ಯಾರ್ಥಿ ಕಾರ್ಯದರ್ಶಿ ನವ್ಯಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ| ಶೇಖರ್‌ ಪೂಜಾರಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಕೃಷ್ಣರಾಜ ಜೋಯಿಸ ಉಪಸ್ಥಿತರಿದ್ದರು.

Advertisement

ಘಟಕದ ಮುಖ್ಯಸ್ಥ ಡಾ| ಜನಾರ್ದನ ನಾಯಕ್‌ ಸ್ವಾಗತಿಸಿ, ಹಿತೇಂದ್ರ ಸಿಂಗ್‌ ಅವರು ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಸ್ವಾತಿ ಶೆಣೈ ಕಾರ್ಯ ಕ್ರಮ ನಿರೂಪಿಸಿ, ಪ್ರಶಾಂತ್‌ ನಾಯಕ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next