Advertisement

ಮಕ್ಕಳ ನೃತ್ಯಂ ಮೈಸೂರು ಮಂದಿಯ ಸಿನಿಮಾ ಪ್ರೀತಿ

06:00 AM Sep 14, 2018 | |

 ನಾನೆಲ್ಲಾದರೂ ಮೈಸೂರಿಗೆ ಬಂದು ಬಿಟ್ನಾ?’ಹಾಗಂತ ಪದೇಪದೇ ಕೇಳಿದರು ನಿರ್ಮಾಪಕ ಉಮೇಶ್‌ ಬಣಕಾರ್‌. ಅದಕ್ಕೆ ಕಾರಣ ವೇದಿಕೆಯ ಮೇಲೆ, ಕೆಳಗೆ ಮೈಸೂರಿನವರೇ ಇದ್ದರು. ಅದೇ ಕಾರಣಕ್ಕೆ ಉಮೇಶ್‌ ಬಣಕಾರ್‌, “ಯಾರನ್ನ ಕೇಳಿದ್ರೂ ಮೈಸೂರಿನವ್ರು ಅಂತಾರೆ. ನಾನೇನಾದರೂ ಮೈಸೂರಿಗೆ ಬಂದುಬಿಟ್ನಾ ಅಂತ ಕೇಳಿದ್ದೇ ಅದಕ್ಕೆ’ ಎಂದರು.

Advertisement

ಅಂದಹಾಗೆ, ಉಮೇಶ್‌ ಬಣಕಾರ್‌ ಹೀಗೆ ಮಾತಾಡಿದ್ದು “ನೃತ್ಯಂ’ ಎಂಬ ಹೊಸ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ. ಹೆಸರೇ ಹೇಳುವಂತೆ ಇದೊಂದು ನೃತ್ಯದ ಕುರಿತಾದ ಚಿತ್ರ. ಮೈಸೂರು ರಾಜು ಎನ್ನುವವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು ಪ್ರವೀನ್‌ ಲಾಡ್‌ ಎನ್ನುವವರು ಈ ಚಿತ್ರದ ನಿರ್ಮಾಪಕರು. ಅತಿಷಯ್‌ ಜೈನ್‌ ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ. ಚಿನ್ನೇಗೌಡ, ಉಮೇಶ್‌ ಬಣಕಾರ್‌ ಸೇರಿದಂತೆ ಹಲವರು ಆಗಮಿಸಿದ್ದರು.

ತಮ್ಮ ಮಾತು ಮುಂದುವರೆಸಿದ ಉಮೇಶ್‌ ಬಣಕಾರ್‌, “ಸಾಮಾನ್ಯವಾಗಿ ನಿರ್ಮಾಪಕರು ತಮ್ಮ ಮಕ್ಕಳನ್ನೇ ಹೀರೋಗಳನ್ನಾಗಿ ಮಾಡಿ ಸಿನಿಮಾ ಮಾಡುತ್ತಿದ್ದಾರೆ. ಆದರೆ, ಈ ನಿರ್ಮಾಪಕರು ಬೇರೆಯವರ ಮಕ್ಕಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಮಕ್ಕಳಿಗಷ್ಟೇ ಅಲ್ಲ, ನಿರ್ಮಾಪಕರಿಗೂ ಮುಗ್ಧತೆ ಇದೆ. ಆ ಮುಗ್ಧತೆ ಅವರ ಕೈಬಿಡುವುದಿಲ್ಲ. ಚಿತ್ರದಲ್ಲಿ ನಟಿಸಿರುವ ಮಹೇಂದ್ರ ಅವರ ಅಭಿನಯ ನೋಡಿದೆ. ನನಗೆ ಅವರ ಬಾಡಿ ಲಾಂಗ್ವೇಜ್‌ ಇಷ್ಟವಾಯಿತು. ಯಾವ ದೊಡ್ಡ ಕಲಾವಿದರಿಗೂ ಆತ ಕಡಿಮೆ ಇಲ್ಲ. ಚಿತ್ರದಲ್ಲಿ ನಟಿಸಿರುವ ಮಕ್ಕಳು, ಹಂತಹಂತವಾಗಿ ಬೆಳೆಯಲಿ. ಬೆಳೆದ ಮೇಲೆ ನಿರ್ಮಾಪಕರನ್ನು ಕೈ ಬಿಡಬೇಡಿ’ ಎಂದು ಕರೆ ನೀಡಿದರು

ಇದೊಂದು ನೃತ್ಯದ ಕುರಿತಾದ ಚಿತ್ರವಷ್ಟೇ ಅಲ್ಲ, ಮಕ್ಕಳ ಚಿತ್ರವೂ ಹೌದು. ನೃತ್ಯ ಕಲಿಯಬೇಕು ಎಂಬ ಆಸೆ ಇರುವ ಒಂದಿಷ್ಟು ಮಕ್ಕಳು, ಅದನ್ನು ಸವಾಲಾಗಿ ತೆಗೆದುಕೊಂಡು, ಹೇಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ ಎನ್ನುವುದು ಚಿತ್ರದ ಕಥೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next