Advertisement
ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಜನವರಿ 19 ರಂದು ನಡೆಯುವ ಪಲ್ಸ್ ಪೋಲಿಯೋ ಬಗ್ಗೆ ಮಾಹಿತಿ ನೀಡಿದರೆ ಮಕ್ಕಳು ಪೋಷಕರಿಗೆ ತಿಳಿಸುತ್ತಾರೆ. ಇದರಿಂದ ಹೆಚ್ಚು ಪ್ರಚಾರವಾಗಲಿದೆ. ಜನವರಿ 19,20 ಹಾಗೂ 21 ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯುವುದರಿಂದ 3 ದಿನಗಳ ಕಾಲ ಊಟದ ವ್ಯವಸ್ಥೆ ಆಗಬೇಕಾಗಿದೆ. ಈ ಬಗ್ಗೆ ತಾಲೂಕಿನ 14 ಗ್ರಾಮ ಪಂಚಾಯ್ತಿಗಳ ಪಿಡಿಒಗಳಿಗೆ ಸೂಚಿಸಬೇಕು ಎಂದು ತಾಲೂಕು ಪಂಚಾಯ್ತಿ ಅಧಿಕಾರಿಗಳಿಗೆ ಸೂಚಿಸಿದರು.
ನಿರಂತರವಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಆರೋಗ್ಯ ಇಲಾಖೆಗೆ ಎಲ್ಲಾ ಇಲಾಖೆಯವರು ಸಹಕಾರ ನೀಡುತ್ತಾ ಬಂದಿದ್ದಾರೆ. ಜನವರಿ 19 ರಂದು ಹುಟ್ಟಿದ ಮಗುವಿನಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ 2 ಹನಿ ಲಸಿಕೆ ಹಾಕಲಾಗುವುದು. 20 ರಂದು ಲಸಿಕೆ ಬಿಟ್ಟು ಹೋದ ಮಕ್ಕಳನ್ನು ಹುಡುಕಿ ಲಸಿಕೆ ಹಾಕಲಾಗುವುದು. 21 ರಂದು ಬಸ್ಸು ನಿಲ್ದಾಣ ಹಾಗೂ ಇತರೆ ಕಡೆಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂದರು. ತಾಲೂಕಿನ 95 ಪಲ್ಸ್ ಪೋಲಿಯೋ ಬೂತ್ ಗಳಿವೆ. ಪಟ್ಟಣ ವ್ಯಾಪ್ತಿಯಲ್ಲಿ ಬಸ್ಸು ನಿಲ್ದಾಣ, ಆಸ್ಪತ್ರೆ ಹಾಗೂ ಗಣಪತಿ ಪೆಂಡಾಲ್ ಸೇರಿ 3 ಲಸಿಕಾ ಕೇಂದ್ರಗಳಿವೆ. ಒಟ್ಟು 380 ವ್ಯಾಕ್ಸಿಲೀಟರ್ ಗಳಿದ್ದಾರೆ. 20 ಜನ ಮೇಲ್ವಿಚಾರಕರಿದ್ದಾರೆ. 5274 ಮಕ್ಕಳನ್ನು ಗುರುಸಲಾಗಿದೆ. ಪಲ್ಸ್ ಪೋಲಿಯೋ
ಕಾರ್ಯಕ್ರಮದಲ್ಲಿ 69 ಆಶಾ ಕಾರ್ಯಕರ್ತರು, 131 ಅಂಗನವಾಡಿ ಕಾರ್ಯಕರ್ತೆಯರು, 180 ಸೇವಾ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. 15 ಸರ್ಕಾರಿವಾಹನಗಳನ್ನು ಬಳಸಿಕೊಳ್ಳುತ್ತೇವೆ ಎಂದರು.
Related Articles
Advertisement