Advertisement

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

03:43 PM Apr 24, 2024 | Team Udayavani |

ತಿರುವನಂತಪುರಂ: ಪ್ರಸ್ತುತ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಕೇರಳದ ಎನ್‌ಆರ್‌ಐಗಳು ಶುಕ್ರವಾರ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸ್ವದೇಶಕ್ಕೆ ಮರಳುತ್ತಿದ್ದಾರೆ. ಹೈವೋಲ್ಟೇಜ್ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಕಳೆದ ಎರಡು ದಿನಗಳಲ್ಲಿ 22,000 ಕ್ಕೂ ಹೆಚ್ಚು ಎನ್‌ಆರ್‌ಐಗಳು ಈಗಾಗಲೇ ಕೇರಳಕ್ಕೆ ಆಗಮಿಸಿದ್ದಾರೆ.

Advertisement

ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಿಸಿದ ಮತದಾರರ ಅಂತಿಮ ಪಟ್ಟಿಯ ಪ್ರಕಾರ ಕೇರಳದಲ್ಲಿ 89,839 ನೋಂದಾಯಿತ ಎನ್‌ಆರ್‌ಐ ಮತದಾರರಿದ್ದಾರೆ. ಎನ್‌ಆರ್‌ಐ ಮತದಾರರಿಗೆ ಕೇರಳಕ್ಕೆ ಪ್ರಯಾಣಿಸಲು ಸುಮಾರು 12 ಚಾರ್ಟರ್ಡ್ ಫ್ಲೈಟ್‌ಗಳನ್ನು ಕಾಯ್ದಿರಿಸಲಾಗಿದೆ. ಕೊನೆಯ ಚಾರ್ಟರ್ಡ್ ವಿಮಾನ ಗುರುವಾರ ಯುಎಇ ನಿಂದ ಹೊರಡಲಿದೆ.

ಕೇರಳದ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಂಯೋಜಿತವಾಗಿರುವ ಅನೇಕ ವಲಸಿಗ ಸಂಘ ಸಂಸ್ಥೆಗಳು ಕೈಗೆಟುಕುವ ದರದಲ್ಲಿ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಲು ಟ್ರಾವೆಲ್ ಏಜೆನ್ಸಿಗಳೊಂದಿಗೆ ಸಹಕರಿಸಿವೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ನೇತೃತ್ವದ UDF ಮೂಲಗಳ ಪ್ರಕಾರ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್‌ಗೆ ಸಂಘಟನೆಗಳು, ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್‌ನಂತಹ  ಗಲ್ಫ್‌ನ ಅತಿದೊಡ್ಡ ಭಾರತೀಯ ಡಯಾಸ್ಪೊರಾ ಸಂಘಟನೆ, ಪ್ರಿಯದರ್ಶಿನಿ ಕಾಂಗ್ರೆಸ್ ಮತ್ತು ಕತಾರ್ ಮೂಲದ INCAS ಮತದಾರರು ಆಗಮಿಸುವಲ್ಲಿ ಸಮನ್ವಯಗೊಳಿಸಿ ಪ್ರಯಾಣ ಸುಗಮಗೊಳಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next