Advertisement

ಮೌಲ್ಯಯುತ ಬದುಕಿನ ಜ್ಞಾನವನ್ನು ವೃದ್ಧಿಸಿಕೊಳ್ಳಿ: ಸತೀಶ್‌

04:23 PM Jun 09, 2018 | Team Udayavani |

ಪುತ್ತೂರು: ವಿದ್ಯಾರ್ಥಿ ಗಳು ವಿದ್ಯಾರ್ಜನೆಯ ಸಂದರ್ಭ ಸಿಗುವ ಅವಕಾಶಗಳನ್ನು ಬಾಜಿಕೊಳ್ಳಬೇಕು. ಮೌಲ್ಯಯುತ ಬದುಕಿನ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ವಿವೇಕಾನಂದ ಆಂ.ಮಾ. ಶಾಲೆಯ ಮುಖ್ಯಶಿಕ್ಷಕ ಸತೀಶ್‌ ಕುಮಾರ್‌ ರೈ ಹೇಳಿದರು. ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಅವರು ಉದ್ಘಾಟಿಸಿದರು. ಸಂಸ್ಥೆಯಿಂದ ಹೊರ ಬರುವ ಮೊದಲ ಬ್ಯಾಚ್‌ ನ ವಿದ್ಯಾ ರ್ಥಿಗಳು ಮುಂದಿನ ದಿನಗಳಲ್ಲಿ ಕಿರಿಯರಿಗೆ ಆದರ್ಶರಾಗಿ ನಿಲ್ಲಬೇಕು ಎಂದರು.

Advertisement

ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆ ರೂಪಲೇಖಾ ಮಾತನಾಡಿ, ವಿದ್ಯಾರ್ಥಿ ಜೀವನ ಅವಕಾಶಗಳ ಗುತ್ಛ. ವಿವೇಚನೆ, ಆಸಕ್ತಿ ವಿದ್ಯಾರ್ಥಿಗಳನ್ನು ಸಾಧನೆಯ ಕಡೆಗೆ ಒಯ್ಯುತ್ತದೆ ಎಂದರು. ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘದ ಪ್ರಾಮುಖ್ಯತೆ, ವಿದ್ಯಾರ್ಥಿ ನಾಯಕನ ಕರ್ತವ್ಯವನ್ನು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಡಳಿತ ಮಂಡಳಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ತಾವು ವಿದ್ಯಾರ್ಥಿ ಸಂಘದ ನಾಯಕನಾಗಿದ್ದಾಗಿನ ಘಟನೆಯನ್ನು ನೆನಪಿಸಿ, ವಿದ್ಯಾರ್ಥಿ ನಾಯಕನಾದವನು ಇತರರಿಗೆ ಆದರ್ಶನಾಗಿರಬೇಕು
ಎಂದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಸಂಚಾಲಕ ವಿಜಯಕೃಷ್ಣ ಭಟ್‌ ಡಿ., ಸದಸ್ಯರಾದ ಅರುಣ್‌ ಬಿ.ಕೆ., ಡಿ. ಪ್ರೇಮಾನಂದ, ಪ್ರಾಂಶುಪಾಲ ಹರಿಣಿ ಪುತ್ತೂರಾಯ, ವಿದ್ಯಾರ್ಥಿ ಸಂಘದ ಪ್ರತಿನಿಧಿ ತೀರ್ಥರಾಜ್‌ ಕೆ., ಶರತ್‌ ಕುಮಾರ್‌ ಎನ್‌., ವೈಷ್ಣವಿ ಆರ್‌. ರೈ ಉಪಸ್ಥಿತರಿದ್ದರು. ಜೀವ ಶಾಸ್ತ್ರ ಉಪನ್ಯಾಸಕಿ ದೀಕ್ಷಾ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿ
ಸಂಘದ ಅಧ್ಯಕ್ಷ ತೀರ್ಥರಾಜ್‌ ಕೆ. ಸ್ವಾಗತಿಸಿ, ಉಪನ್ಯಾಸಕಿ ಶೈಲಜಾ ರೈ ಕಾರ್ಯಕ್ರಮ ನಿರ್ವಹಿಸಿದರು.ಮುಖ್ಯಶಿಕ್ಷಕ ಸತೀಶ್‌ ಕುಮಾರ್‌ ರೈ ದೀಪ ಬೆಳಗಿಸಿದರು

Advertisement

Udayavani is now on Telegram. Click here to join our channel and stay updated with the latest news.

Next