Advertisement

ಎನ್‌ಆರ್‌ಸಿ, ಸಿಎಎ ವಿವಾದ: ಗಣತಿಗೂ ಜನರ ಅಸಹಕಾರ

10:08 AM Jan 12, 2020 | mahesh |

ಮಂಗಳೂರು: ಎನ್‌ಆರ್‌ಸಿ ಮತ್ತು ಸಿಎಎ ಕುರಿತಾಗಿ ಉಂಟಾಗಿರುವ ವಿವಾದವು ಈಗ ಸರಕಾರದ ಇತರ ಗಣತಿ ಮತ್ತು ಸಮೀಕ್ಷೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಾರಂಭಿಸಿದೆ. ಇದ ರಿಂದಾಗಿ ಗಣತಿದಾರರು ಸಂಕಷ್ಟಕ್ಕೆ ಗುರಿ ಯಾಗುತ್ತಿದ್ದಾರೆ. ವಿಶೇಷವಾಗಿ ಈಗ ನಡೆಯುತ್ತಿರುವ ಆರೋಗ್ಯ ಇಲಾಖೆಯ “ನಾಗರಿಕರಿಗೆ ಒಂದು ಸವಾಲು’ ಕಾರ್ಯಕ್ರಮದ ಅನುಷ್ಠಾನಕ್ಕೆ ಹಲವು ರೀತಿಯ ತೊಂದರೆ ಎದುರಾಗಿದೆ.

Advertisement

ಈ ಕಾರ್ಯಕ್ರಮದ ಬಗ್ಗೆ ತಿಳಿವಳಿಕೆ ನೀಡಲು ಮನೆ ಮನೆಗೆ ತೆರಳುವ ಆಶಾ ಕಾರ್ಯಕರ್ತೆಯರಿಗೆ ಕೆಲವರು ಮಾಹಿತಿ ನೀಡಲು ನಿರಾಕರಿಸಿಸುತ್ತಿದ್ದಾರೆ. “ಮಾಹಿತಿ ಕಲೆ ಹಾಕಲು ಬರುವ ಆಶಾ ಅಥವಾ ಅಂಗನವಾಡಿ ಕಾರ್ಯ ಕರ್ತೆಯರಿಗೆ ಮಾಹಿತಿ ಕೊಡದಿರಿ’ ಎಂಬುದಾಗಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಸಂದೇಶ ವೈರಲ್‌ ಆಗಿದ್ದು, ಕೆಲವು ಪ್ರದೇಶಗಳಲ್ಲಿ ಕಾರ್ಯಕರ್ತೆಯರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.

ಒಂದು ವಾರದಿಂದೀಚೆಗೆ ಬಂಟ್ವಾಳ ತಾಲೂಕಿನ ಸಜಿಪ, ಮಂಚಿ, ಮಂಗಳೂರು ತಾಲೂಕಿನ ಪಾಲಡ್ಕ, ಬೆಂಗ್ರೆ ಮತ್ತಿತರ ಕಡೆ ಆಶಾ ಕಾರ್ಯಕರ್ತೆಯರಿಗೆ ಈ ಕಹಿ ಅನುಭವ ಆಗಿದೆ. ಪಾಲಡ್ಕ ಪ್ರದೇಶದಲ್ಲಿ ಮಾಹಿತಿ ಪಡೆದುಕೊಂಡು ಬಂದ ಬಗ್ಗೆ ಗುರುವಾರ ಬೆದರಿಕೆ ಕರೆಯೂ ಬಂದಿದೆ. “ಮಾಹಿತಿ ಪಡೆದು ಭರ್ತಿ ಮಾಡಿದ ಪ್ರಶ್ನಾವಳಿ ಪತ್ರವನ್ನು ವಾಪಸ್‌ ಕೊಡಿ, ಇಲ್ಲದಿದ್ದರೆ ನಿಮ್ಮ ಕಚೇರಿಗೆ ಬರಬೇಕಾಗುತ್ತದೆೆ’ ಎಂಬುದಾಗಿ ಪಾಲಡ್ಕದಿಂದ ಕರೆ ಮಾಡಿದವರು ಹೇಳಿದ್ದಾರೆ ಎಂದು ಆರೋಗ್ಯ ಇಲಾಖೆಯ ಓರ್ವ ಅಧಿಕಾರಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಏನಿದು “ನಾಗರಿಕರಿಗೊಂದು ಸವಾಲು’ ಕಾರ್ಯಕ್ರಮ?
ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿ ಈ ಕಾಯಿಲೆಗಳ ಬಗ್ಗೆ ವಹಿಸಬೇಕಾದ ಮುಂಜಾಗ್ರತೆಗಳ ಕುರಿತು ಜಾಗೃತಿ ಮೂಡಿಸುವುದು “ನಾಗರಿಕರಿ ಗೊಂದು ಸವಾಲು’ ಕಾರ್ಯ ಕ್ರಮದ ಮುಖ್ಯ ಉದ್ದೇಶ. ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ ಇದು ನಡೆಯುತ್ತಿದೆ. ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೆಲಸ ಮಾಡುತ್ತಾರೆ. ಓರ್ವ ಆಶಾ ಕಾರ್ಯಕರ್ತೆ ಡಿಸೆಂಬರ್‌ ಮತ್ತು ಜನವರಿ ತಿಂಗಳಲ್ಲಿ 100 ಮನೆಗಳಿಗೆ ಭೇಟಿ ನೀಡ ಬೇಕಾಗಿದ್ದು, ಸೂಕ್ತ ಸಂಭಾವನೆ ನೀಡಲಾಗುತ್ತದೆ. ಮನೆ ಭೇಟಿ ಸಂದರ್ಭದಲ್ಲಿ ಅವರು 13 ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನಾವಳಿ ಒಯ್ಯುತ್ತಿದ್ದು, ಮನೆ ಸುತ್ತಮುತ್ತ ಪರಿಶೀಲಿಸಿ, ಮನೆಮಂದಿಯಿಂದ ಮಾಹಿತಿ ಪಡೆಯಬೇಕು. ಆದರೆ ಮುಖ್ಯವಾಗಿ ಆಧಾರ್‌ ನಂಬರ್‌ ನೀಡಲು ಮತ್ತು ಸಹಿ ಮಾಡಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ಕಾರ್ಯಕರ್ತೆಯರ ಅಳಲು.

ಆಶಾ ಕಾರ್ಯಕರ್ತೆಯರಿಗೆ ಕೆಲವರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ “ನಾಗರಿಕರಿಗೊಂದು ಸವಾಲು’ ಕಾರ್ಯಕ್ರಮದ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ನೀಡಿ ಮನವರಿಕೆ ಮಾಡಲು ಪ್ರಯತ್ನಿಸುತ್ತೇವೆ.
– ಡಾ| ಆರ್‌. ಸೆಲ್ವಮಣಿ, ದ.ಕ. ಜಿ.ಪಂ. ಸಿಇಒ

Advertisement

- ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next