ಮಣಿಪಾಲ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ(NPR) ಗೆ ಮಾಹಿತಿ ನೀಡಲು ನಿರಾಕರಿಸಿದರೆ ದಂಡ ವಿಧಿಸುವ ಪ್ರಕ್ರಿಯೆಯ ಕುರಿತಾಗಿ ನಿಮ್ಮ ಅನಿಸಿಕೆಯೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ
ನಾಗರಾಜ ಕೆ ಎಸ್: ದಂಡ ವಿಧಿಸುವುದರ ಜೊತೆಗೆ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ನಿಲ್ಲಿಸಬೇಕು ನೀರು ವಿದ್ಯುತ್ ಇತರೆ ಎಲ್ಲ ಸೌಲಭ್ಯಗಳನ್ನು ನಿಲ್ಲಿಸಬೇಕು
ರಾಜೇಶ್ ಅಂಚನ್ ಎಂ ಬಿ: ಖಂಡಿತಾ ಬಹಳ ಸೂಕ್ತವಾಗಿದೆ. ಒಂದು ದೇಶ ಒಂದು ಕಾನೂನು ಅಂತಾ ತಂದಾಗ ಅದನ್ನು ಗೌರವಿಸೋದು ಆ ದೇಶದ ಪ್ರತಿಯೊಬ್ಬ ನಾಗರೀಕನ ಆಧ್ಯ ಕರ್ತವ್ಯ. ಎನ್ ಪಿ ಆರ್ ದೇಶದ ಎಲ್ಲಾ ಪ್ರಜೆಗಳ ಬಗ್ಗೆ ಕೂಲಂಕುಷವಾದ ಮಾಹಿತಿಯನ್ನು ಸಂಗ್ರಹ ಮಾಡುವ ಒಂದು ಉತ್ತಮ ಕೆಲಸ..ಇದರಲ್ಲಿ ಎಲ್ಲಾ ಭಾರತೀಯರು ಸಕ್ರೀಯವಾಗಿ ಪಾಲ್ಗೊಳ್ಳಲೇಬೇಕು. ತಮ್ಮ ವೈಯಕ್ತಿಕ ಹಿತಾಸಕ್ತಿ ಗಳಿಗಾಗಿ ವಿರೋಧ ಪಕ್ಷಗಳು ಮಾಡುತ್ತಿರುವ ವಿರೋಧವನ್ನು ಇದಕ್ಕೆ ಜೋಡಿಸಿ ಮಾಹಿತಿ ಒದಗಿಸದಿರೋದು ಅಕ್ಷಮ್ಯ ಅಪರಾದವಾಗುತ್ತೆ. ಈ ನಿಟ್ಟಿನಲ್ಲಿ ದಂಡ ವಿಧಿಸುವ ಸರ್ಕಾರದ ನಡೆ ಬಹಳ ಉತ್ತಮವಾದದ್ದು. ಅಷ್ಟೇ ಅಲ್ಲ ದಂಡದ ಜೊತೆಗೆ ಎಲ್ಲಾ ಸೌಲಭ್ಯಗಳನ್ನು ನಿಲ್ಲಿಸಬೇಕು
ರಾಘವೇಂದ್ರ ಬಿಲ್ಲವ: ಪ್ರತಿಯೊಬ್ಬ ಪ್ರಜೆಯು ನೆಲದ ಕಾನೂನನ್ನು ಪಾಲಿಸಬೆಕಾದದ್ದು ಆದ್ಯ ಕರ್ತವ್ಯ. ಪಾಲಿಸದಿದ್ದರೆ ಅದು ನನ್ನ ಪ್ರಕಾರ ಶಿಕ್ಷಾರ್ಹ ಅಪರಾಧ.
ದೇವರಾಜ: ದೇಶದ ರಕ್ಷಣೆ ಸಂಬಂಧ ಮಾಹಿತಿ ನೀಡುವುದು ಅತ್ಯಗತ್ಯ. ನೀಡದಿದ್ದಲ್ಲಿ ಶಿಕ್ಷೆ ಕೊಡಿ ಇದು ಉತ್ತಮ ನಡೆ.
ಮಹದೇವ ಗೌಡ: ಮನೆಯ ಮಾಲಿಕನ ಜವಬ್ದಾರಿಯಲ್ಲಿ ಸಮೀಕ್ಷೆ ಮಾಡಿದರೇ ತಪ್ಪು ಮಹಿತಿ ಬರಲು ಹೆಗೆ ಸಾದೄ ಅವರ ಮಾಹಿತಿ ಮತ್ತು ಅವರ ಮನೆಯಲ್ಲಿರುವ ಬಾಡಿಗೆದಾರನ ಮಾಹಿತಿ ಕೊಡಲೆಬೇಕು ಅಲ್ವಾ ಯಾವ ಯಾವ ಮಾಹಿತಿ ಕೊಡಬೇಕು ? ದಂಡ ಮನೆ ಮಾಲಿಕರಿಗೆ ಹಾಕುವದು ಸರಿ ಅಲ್ವಾ
ರಮೇಶ್ ಬಿವಿ: ಬೇಕಾದರೆ ಎರಡು ಅಥವಾ ಮೂರು ಅವಕಾಶಗಳನ್ನು ಕೊಡಲಿ. ನಂತರವೂ ನಿರಾಕರಿಸಿದರೆ ಮುಲಾಜಿಲ್ಲದೆ ದಂಡ ವಿಧಿಸಲೇಬೇಕು. ಮತ ಚೀಟಿಯನ್ನು ಕೂಡ ರದ್ದು ಮಾಡಬೇಕು.