Advertisement

ಎಸ್‌.ಪಿ.ಸಿ.ಯಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರಜ್ಞೆ ಜಾಗೃತ

09:55 AM Apr 13, 2018 | Karthik A |

ಬದಿಯಡ್ಕ: ಶಿಬಿರಗಳು ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಉಂಟುಮಾಡುತ್ತವೆ. ಪರಸ್ಪರ ಹೊಂದಾಣಿಕೆಯಿಂದ ಬದುಕುವ ಪಾಠವನ್ನು ಕಲಿಸಿ ಮುಂದಿನ ಜೀವನಕ್ಕೆ ಅನುಕೂಲಕರವಾದ ಅನುಭವಗಳನ್ನು ನೀಡುತ್ತವೆ. ಎಸ್‌.ಪಿ.ಸಿ.ಯಿಂದಾಗಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ, ರಾಷ್ಟ್ರಪ್ರಜ್ಞೆ ಜಾಗೃತವಾಗುತ್ತದೆ. ದುಶ್ಚಟಗಳಿಗೆದುರಾಗಿ ಹೋರಾಡುವ ಪುಟ್ಟ ಮನಸ್ಸುಗಳು ನಾಳೆಯ ಸುಭದ್ರ ಸಮಾಜದ ರಾಯಭಾರಿಗಳು ಎಂದು ಜಿಲ್ಲಾಧಿಕಾರಿ ಜೀವನ್‌ಬಾಬು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ನಡೆಯುವ ಎಂಟನೇ ಎಸ್‌.ಪಿ.ಸಿ. ಜಿಲ್ಲಾ ಶಿಬಿರವನ್ನು ಬದಿಯಡ್ಕ ಪಂಚಾಯತ್‌ ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಿ ಮಾತನಾಡಿದರು.

Advertisement

ಕಾಸರಗೋಡು ಡಿಸಿಆರ್‌ಬಿ ಡಿವೈ ಎಸ್‌ಪಿ ಜೈಸನ್‌ ಕೆ. ಅಬ್ರಹಾಂ, ಶಾಲಾ ಮುಖ್ಯೋಪಾಧ್ಯಾಯ ಶಂಕರ ನಾರಾಯಣ ಭಟ್‌, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್‌, ಇನ್‌ಸ್ಪೆಕ್ಟರ್‌ ಆಫ್‌ ಪೊಲೀಸ್‌ ಆದೂರು ಮಾಥ್ಯೂ, ಪ್ರಾಂಶುಪಾಲ ರಾಮಚಂದ್ರ ನಾಯರ್‌ ಪಿ., ಕೃಷ್ಣ ಪ್ರಸಾದ್‌ ರೈ, ಮಹಿಳಾ ಸೆಲ್‌  ಸಿ.ಐ. ವನಿತಾ,  ಎ.ಡಿ.ಎನ್‌.ಒ. ಥೋಮಸ್‌, ಎಡಿಎಸ್‌ಪಿಸಿ ಭಾಸ್ಕರನ್‌ ಡಿ.ಐ., ಅಸಿಸ್ಟೆಂಟ್‌ ಕಮಾಂಡೆಂಟ್‌ ಪ್ರೇಮ ಕುಮಾರ್‌ ಕೆ.ಕೆ., ಶಾಲಾ ಮೆನೇಜರ್‌ ಸೂರ್ಯ ಎನ್‌. ಶಾಸ್ತ್ರಿ, ಸೋಯಲ್‌ ಫಾರೆಸ್ಟ್ರಿ ಕಾಸರಗೋಡು ಪಿ. ಬಿಜು ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ನೋಡಲ್‌ ಆಫೀಸರ್‌ ಎಸ್‌. ಪಿ.ಸಿ. ಪ್ರೊಜೆೆಕ್ಟ್ ಜ್ಯೋತಿಕುಮಾರ್‌ ಸ್ವಾಗತಿಸಿದರು. ಐ.ಪಿ. ವಿಮೆನ್‌ ಸೆಲ್‌ ಕಾಸರಗೋಡು ನಿರ್ಮಲ ಪಿ.ವಿ. ವಂದಿಸಿದರು. ಎ.ಎಸ್‌.ಪಿ. ಕಾಸರಗೋಡು ವಿಶ್ವನಾಥ್‌ ಆರ್‌. ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next