Advertisement

4 ಡಿವೈಸ್‌ನಲ್ಲಿ ವಾಟ್ಸ್‌ಆ್ಯಪ್‌ ಲಭ್ಯ: ಮೊಬೈಲ್‌ ಆಫ್ ಆದ್ರೂ, ವಾಟ್ಸ್‌ಆ್ಯಪ್‌ ಚಾಲ್ತಿಯಲ್ಲಿ

11:45 PM Apr 25, 2023 | Team Udayavani |

ವಾಟ್ಸ್‌ಆ್ಯಪ್‌ ತನ್ನ ಬಳಕೆದಾರರ ಬಹುಬೇಡಿಕೆಯ ಫೀಚರ್‌ವೊಂದನ್ನು ಈಗ ಪರಿಚಯಿಸಿದೆ. ಅದರಂತೆ, ಇನ್ನು ಮುಂದೆ ಬಳಕೆದಾರರು ಕೇವಲ ಒಂದು ಮೊಬೈಲ್‌ನಲ್ಲಿ ಮಾತ್ರವಲ್ಲ, 4 ಮೊಬೈಲ್‌ಗ‌ಳಲ್ಲಿ ವಾಟ್ಸ್‌ಆ್ಯಪ್‌ನ ಒಂದೇ ಅಕೌಂಟ್‌ ಬಳಕೆ ಮಾಡಬಹುದು.

Advertisement

ಈಗಾಗಲೇ ವಾಟ್ಸ್‌ಆ್ಯಪ್‌ ವೆಬ್‌ ಮೂಲಕ ಕಂಪ್ಯೂಟರ್‌ನಲ್ಲಿ ಒಂದೇ ಅಕೌಂಟ್‌ನ 2 ಬಳಕೆ ಸಾಧ್ಯವಾಗುತ್ತಿತ್ತು. ಇದರ ನಡುವೆ ಮೊಬೈಲ್‌ನಲ್ಲಿಯೂ ಇಂಥದ್ದೇ ಬಳಕೆಗೆ ಅವಕಾಶ ಕೋರಲಾಗಿತ್ತು. ಈಗ ಆ್ಯಪ್‌ನ ಲಿಂಕ್‌ ಡಿವೈಸ್‌ ಆಪ್ಶನ್‌ ಮೂಲಕ ಈ ಸೌಲಭ್ಯ ಸಿಗಲಿದೆ. ಬಳಕೆದಾರರ ವಾಟ್ಸ್‌ಆ್ಯಪ್‌ ಅಕೌಂಟ್‌ ಇರುವ ಮೊಬೈಲ್‌ ಇನ್ನೇನು ಸ್ವಿಚ್‌ಆಫ್ ಆಗುವಂಥ ಸಂದರ್ಭದಲ್ಲಿ ಇದು ಹೆಚ್ಚು ಸಹಾಯವಾಗಲಿದ್ದು, ಬೇರೊಂದು ಮೊಬೈಲ್‌ನಲ್ಲಿ ಡಿವೈಸ್‌ ಲಿಂಕ್‌ ಮಾಡಿ, ಒಟಿಪಿ ಖಚಿತ ಪಡಿಸಿದರೆ ಸಾಕು.

ಮೂಲ ಮೊಬೈಲ್‌ ಸ್ವಿಚ್‌ಆಫ್ ಆದರೂ, ವಾಟ್ಸ್‌ಆ್ಯಪ್‌ ಅಕೌಂಟ್‌ ಚಾಲ್ತಿಯಲ್ಲಿ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next