Advertisement

ಗಮನಿಸಿ; ಇನ್ನು ಯೂಟ್ಯೂಬ್ ನಲ್ಲೂ Live Stream ಮಾಡಬಹುದು!

03:46 PM Feb 09, 2017 | Team Udayavani |

ಹೊಸದಿಲ್ಲಿ : ವಿಡಿಯೋ ತಯಾರಿಸುವವರು ಈಗಿನ್ನು ತಮ್ಮ ವಿಡಿಯೋಗಳನ್ನು ಯೂ ಟ್ಯೂಬ್‌ನಲ್ಲಿ ಲೈವ್‌ ಸ್ಟ್ರೀಮ್‌ ಮಾಡಬಹುದಾಗಿದೆ.

Advertisement

ಇದಕ್ಕಾಗಿ ಯೂ ಟ್ಯೂಬ್‌ ತನ್ನ ತಾಣದಲ್ಲಿ  ಕನಿಷ್ಠ 10,000 ಬಳಕೆದಾರರನ್ನು ಹೊಂದಿರುವ ವಾಹಿನಿಗಳಿಗೆ ಮೊಬೈಲ್‌ ಲೈವ್‌ ಸ್ಟ್ರೀಮಿಂಗ್‌  ಸೌಕರ್ಯವನ್ನು ಕಲ್ಪಿಸಿದೆ.

ಮೊಬೈಲ್‌ ಲೈವ್‌ ಸ್ಟ್ರೀಮ್‌ ಸೌಕರ್ಯ ಈ ತನಕ ಆಯ್ದ ಬಳಕೆದಾರರಾದ ದಿ ಯಂಗ್‌ ಟರ್ಕ್‌, ಎಐಬಿ, ಅಲೆಕ್ಸ್‌ ವಸಾಬಿ, ಪ್ಲಾಟಿಕಾ ಪಾಲಿನೇಶ್ಯ ಮತ್ತು ಸ್ಯಾಕನ್‌ಜೊಲೀಸ್‌ ಗೆ ಮಾತ್ರವೇ ಲಭ್ಯವಿತ್ತು.

ಈಗಿನ್ನು  10,000ಕ್ಕೂ ಅಧಿಕ ಬಳಕೆದಾರರನ್ನು ಹೊಂದಿರುವ ಎಲ್ಲ ಅಪ್‌ಲೋಡರ್‌ಗಳು ಯೂ ಟ್ಯೂಬ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಮಾಡಬಹುದಾಗಿದೆ. ಶೀಘ್ರವೇ ಈ ಸೌಕರ್ಯವನ್ನು ಇತರ ಬಳಕೆದಾರರಿಗೆ ಕೂಡ ದೊರಕಿಸಲಾಗುವುದು ಎಂದು ಕಂಪೆನಿಯು ಹೇಳಿದೆ.

ಕಂಪೆನಿಯ ಮೊಬೈಲ್‌ ಆಪ್ಲಿಕೇಶನ್‌ ಮೂಲಕ ಪಡೆಯಬಹುದಾದ ಲೈವ್‌ ಸ್ಟ್ರೀಮ್‌ ತಾಂತ್ರಿಕ ಸೌಕರ್ಯವು ಈಗಿನ ಯೂ ಟ್ಯೂಬ್‌ ವಿಡಿಯೋಗಳಲ್ಲಿ ಇರುವ ತಾಂತ್ರಿಕ ಸೌಕರ್ಯದ ನಮೂನೆಯಲ್ಲೇ ಇದೆ. 

Advertisement

ಮೊಬೈಲ್‌ ಲೈವ್‌ ಸ್ಟ್ರೀಮಿಂಗ್‌ ಅನ್ನು ಯೂ ಟ್ಯೂಬ್‌ ಮೊಬೈಲ್‌ ಆ್ಯಪ್‌ನಲ್ಲಿ ನೇರವಾಗಿ ಅಂತರ್ಗತಗೊಳಿಸಲಾಗಿದೆ. ಅಪ್‌ಲೋಡರ್‌ಗಳು ಸ್ಟ್ರೀಮಿಂಗ್‌ ಆರಂಭಿಸಲು ಯೂ ಟ್ಯೂಬ್‌ ಓಪನ್‌ ಮಾಡಿ, CAPTURE ಬಟನ್‌ ಅನ್ನು ಒತ್ತಿದಾಗ “ಯೂ ಆರ್‌ ಲೈವ್‌’ ಆಗಿರುವುದನ್ನು ಕಾಣಬಹುದು. ಸ್ಟ್ರೀಮ್‌ ಮಾಡಲ್ಪಟ್ಟ ವಿಡಿಯೋಗಳು ಯೂ ಟ್ಯೂಬ್‌ನಲ್ಲಿನ ಇತರ ಯಾವುದೇ ವಿಡಿಯೋಗಳ ಗುಣಲಕ್ಷಣಗಳನ್ನೇ ಹೊಂದಿರುತ್ತವೆ ಎಂದು ಕಂಪೆನಿಯು ಹೇಳಿದೆ. 

ಭಾರತ ಸಹಿತ ಇಪ್ಪತ್ತು ದೇಶಗಳ ವಿಡಿಯೋ ತಯಾರಕರು “ಸೂಪರ್‌ ಚ್ಯಾಟ್‌’ ಎಂಬ ಹೊಸ ನಗದೀಕರಣ ಸಲಕರಣೆಯನ್ನು ಬಳಸಿಕೊಂಡು ತಮ್ಮ ಲೈವ್‌ ಸ್ಟ್ರೀಮಿಂಗ್‌ ಗಾಗಿ ಸಂಪಾದನೆಯನ್ನೂ ಮಾಡಬಹುದಾಗಿದೆ ಎಂದು ಕಂಪೆನಿ ಹೇಳಿದೆ.

ವಿಡಿಯೋ ವೀಕ್ಷಕರಿಗೆ ಈ ಸಲಕರಣೆಯಿಂದ ತಾವು ಸಮೂಹದಿಂದ ಹೊರಗೆ ನಿಂತುಕೊಂಡು, ಕಡುಬಣ್ಣದಲ್ಲಿ ಹೈಲೈಟ್‌ ಮಾಡಲಾಗುವ ಚ್ಯಾಟ್‌ ಮ್ಯಾಸೇಜ್‌ ಗಳನ್ನು ಖರೀದಿಸುವ ಮೂಲಕ ವಿಡಿಯೋ ತಯಾರಕರ ಗಮನಕ್ಕೆ ಪಾತ್ರರಾಗಬಹುದಾಗಿದೆ. ಆಗ ಚ್ಯಾಟ್‌ ಮ್ಯಾಸೇಜ್‌ ಐದು ತಾಸುಗಳ ಕಾಲ ಮೇಲ್ಗಡೆಯ ಭಾಗದಲ್ಲಿ ಕಾಣಿಸುತ್ತಿರುತ್ತದೆ ಎಂದು ಕಂಪೆನಿ ಹೇಳಿದೆ. 

40ಕ್ಕೂ ಹೆಚ್ಚು ದೇಶಗಳಲ್ಲಿನ ಬಳಕೆದಾರರಿಗೆ ಚ್ಯಾಟ್‌ ಮೆಸೇಜ್‌ ಖರೀದಿಸಲು ಮಾನಿಟೈಸೇಶನ್‌ ಟೂಲ್‌ (ನಗದೀಕರಣ ಸಲಕರಣೆ) ವೀಕ್ಷಕರಿಗೆ ಕಾಣುವಂತಿರುತ್ತದೆ ಎಂದು ಕಂಪೆನಿಯು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next