Advertisement

ರೈಲ್ವೇ: ಲಗೇಜು ಮಿತಿ ಇಲ್ಲ

07:05 AM Jun 08, 2018 | Team Udayavani |

ಹೊಸದಿಲ್ಲಿ : ನಿಗದಿತ ಮಿತಿಗಿಂತ ಹೆಚ್ಚು ಭಾರದ ಲಗೇಜನ್ನು ತರುವ ಪ್ರಯಾಣಿಕರಿಗೆ ದಂಡ ವಿಧಿಸುವ ನಿರ್ಧಾರದಿಂದ ರೈಲ್ವೇ ಇಲಾಖೆ ಹಿಂದೆ ಸರಿದಿದೆ. 30 ವರ್ಷಗಳ ಹಿಂದಿದ್ದ ಇಂಥದ್ದೊಂದು ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರೈಲ್ವೇ ಇಲಾಖೆ ಚಿಂತನೆ ನಡೆಸಿದ್ದು, ಸಾರ್ವಜನಿಕ ವಲಯದಿಂದ ಭಾರೀ ಟೀಕೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ, ಈ ಚಿಂತನೆಯನ್ನು ಕೈಬಿಟ್ಟಿರುವುದಾಗಿ ಹೇಳಿರುವ ರೈಲ್ವೇ ಇಲಾಖೆ, ದಂಡ ವಿಧಿಸುವ ಚಿಂತನೆ ಮೂಲಕ ಪ್ರಯಾಣಿಕರಲ್ಲಿ ಜಾಗೃತಿ ತರಲು ಉದ್ದೇಶಿಸಲಾಗಿತ್ತು ಎಂದು ಜಾಣ್ಮೆಯ ಉತ್ತರ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next