Advertisement
ಆದರೆ ಇಲ್ಲಿ ಕೆಲವು ವಿನಾಯಿತಿಗಳನ್ನು ಎನ್‌ಎಂಸಿ ನೀಡಿದೆ. 2018ರ ಡಿಸೆಂಬರ್‌ಗೂ ಹಿಂದೆ ಹಾಗೂ ಆನಂತರದಲ್ಲಿ ಭಾರತೀಯ ವಿದೇಶಾಂಗ ಇಲಾಖೆಯಿಂದ ಒಪ್ಪಿಗೆ ಪಡೆದು ಪಾಕಿಸ್ಥಾನದಲ್ಲಿ ವೈದ್ಯ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಈ ಹೊಸ ನಿಯಮದಿಂದ ವಿನಾಯಿತಿ ನೀಡಲಾಗಿದೆ.
ಇತ್ತೀಚೆಗೆ ಪಾಕಿಸ್ಥಾನದಲ್ಲಿ ಭಾರತೀಯ ವಿದ್ಯಾರ್ಥಿಗಳು ಪಡೆಯುವ ಉನ್ನತ ವ್ಯಾಸಂಗದ ಪದವಿ ಹಾಗೂ ಯಾವುದೇ ಎಂಜಿನಿಯರಿಂಗ್ ಪದವಿಗಳಿಗೆ ಭಾರತದಲ್ಲಿ ಮಾನ್ಯತೆಯಿಲ್ಲ ಎಂದು ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ (ಯುಜಿಸಿ) ಹಾಗೂ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಇತ್ತೀಚೆಗೆ ನೀಡಿದ್ದವು. ಈ ಬಗ್ಗೆ ಪಾಕಿಸ್ಥಾನದ ವಿದೇಶಾಂಗ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅದರ ಬೆನ್ನಲ್ಲೇ ಎನ್‌ಎಂಸಿ ಕೂಡ ಅದೇ ರೀತಿಯ ಪ್ರಕಟನೆಯನ್ನು ನೀಡಿದೆ.