ಬೆಂಗಳೂರು: ರಿಲಯನ್ಸ್ ಜಿಯೋ ಇಂದು (ಜ. 24, ಮಂಗಳವಾರ) 50 ನಗರಗಳಲ್ಲಿ ತನ್ನ ಟ್ರೂ 5ಜಿ ಸೇವೆಗಳ ಅತಿದೊಡ್ಡ ಬಿಡುಗಡೆಯನ್ನು ಘೋಷಿಸಿದೆ. ಇದರೊಂದಿಗೆ 184 ನಗರಗಳಲ್ಲಿ ಜಿಯೋ ಬಳಕೆದಾರರು ಈಗ ಜಿಯೋ ಟ್ರೂ 5ಜಿ ಸೇವೆಗಳನ್ನು ಪಡೆಯುತ್ತಿದ್ದಾರೆ.
ರಿಲಯನ್ಸ್ ಜಿಯೋ ಈ ಹೆಚ್ಚಿನ ನಗರಗಳಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಇಂದಿನಿಂದ ಪ್ರಾರಂಭ ಆಗುವ ಸೇವೆಯೊಂದಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಈ ನಗರಗಳಲ್ಲಿನ ಜಿಯೋ ಬಳಕೆದಾರರನ್ನು ಜಿಯೋ ವೆಲ್ ಕಂ ಆಫರ್ ಮೂಲಕ ಆಹ್ವಾನಿಸಲಾಗುತ್ತದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, “ಕರ್ನಾಟಕದ ಬಾಗಲಕೋಟೆ, ಚಿಕ್ಕಮಗಳೂರು, ಹಾಸನ, ಮಂಡ್ಯ ಮತ್ತು ತುಮಕೂರು ಹಾಗೂ 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 45 ಹೆಚ್ಚುವರಿ ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸುತ್ತಿರುವುದನ್ನು ಘೋಷಿಸಲು ನಾವು ರೋಮಾಂಚನಗೊಂಡಿದ್ದೇವೆ, ಇದರೊಂದಿಗೆ ಒಟ್ಟು ಸಂಖ್ಯೆಯನ್ನು ಭಾರತದ 184 ನಗರಗಳಿಗೆ ಕೊಂಡೊಯ್ಯುತ್ತೇವೆ. ಇದು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಎಲ್ಲೆಡೆ 5ಜಿ ಸೇವೆಗಳ ಅತಿದೊಡ್ಡ ಜಾರಿಗಳಲ್ಲಿ ಒಂದಾಗಿದೆ.
“2023ರ ಹೊಸ ವರ್ಷದಲ್ಲಿ ಜಿಯೋ ಟ್ರೂ 5ಜಿ ತಂತ್ರಜ್ಞಾನದ ರೂಪಾಂತರದ ಪ್ರಯೋಜನಗಳನ್ನು ಪ್ರತಿಯೊಬ್ಬ ಜಿಯೋ ಬಳಕೆದಾರರು ಆನಂದಿಸಬೇಕೆಂದು ನಾವು ಬಯಸುತ್ತೇವೆ. ಏಕೆಂದರೆ ನಾವು ರಾಷ್ಟ್ರದಾದ್ಯಂತ ಟ್ರೂ 5ಜಿ ಜಾರಿಯ ವೇಗ ಮತ್ತು ತೀವ್ರತೆಯನ್ನು ಹೆಚ್ಚಿಸಿದ್ದೇವೆ. 2023ರ ಡಿಸೆಂಬರ್ ಒಳಗೆ ಇಡೀ ರಾಷ್ಟ್ರವು ಜಿಯೋ ಟ್ರೂದಿಂದ 5ಜಿ ಸೇವೆಗಳು ಆನಂದಿಸಲು ಮತ್ತು ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.