Advertisement

Pakistan: ಈಗ ಪಾಕಿಸ್ಥಾನದಲ್ಲೂ ನೋಟು ಅಮಾನ್ಯ ಕ್ರಮ- 5000 ರೂ. ಮೀರಿದ ನೋಟು ನಿಷೇಧ

12:56 AM Jan 31, 2024 | Team Udayavani |

ಕರಾಚಿ:  ಭಾರತದಲ್ಲಿ ಕಳ್ಳ ನೋಟುಗಳನ್ನು ಎಗ್ಗಿಲ್ಲದೆ ಚಲಾಯಿಸಲು ಯತ್ನಿಸುತ್ತಿರುವ, ಉಗ್ರರನ್ನು ಛೂ ಬಿಡುವ ಪಾಕಿಸ್ಥಾನ ಹದಗೆಟ್ಟಿರುವ ತನ್ನ ಅರ್ಥ ವ್ಯವಸ್ಥೆಗೆ ಸರ್ಜರಿ ಮಾಡಲು ಮುಂದಾಗಿದೆ. ಅದಕ್ಕಾಗಿ ಭಾರತ ಸರಕಾರ 2016ರಲ್ಲಿ ಜಾರಿಗೆ ತಂದಿದ್ದ ನೋಟು ಅಮಾನ್ಯ ನಿಯಮವನ್ನು ನಕಲು ಮಾಡಲು ಮುಂದಾಗಿದೆ.

Advertisement

ಸ್ಟೇಟ್‌ ಬ್ಯಾಂಕ್‌ ಆಫ್ ಪಾಕಿಸ್ಥಾನ‌ ಪ್ರಕಾರ ದೇಶದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ.  5000 ಪಾಕಿಸ್ಥಾನ ರೂ.ಮತ್ತು ಅದಕ್ಕಿಂತ ಹೆಚ್ಚಿನ ಮುಖ ಬೆಲೆಯ ನೋಟುಗಳನ್ನು ನಿಷೇಧಿಸಲು ತೀರ್ಮಾನಿಸಲಾಗಿದೆ. ಜನರಿಗೆ ತೊಂದರೆ ಆಗದಂತೆ ಅನುಷ್ಠಾನಗೊಳಿಸಲಾಗುತ್ತದೆ ಎನ್ನುವುದು ಸ್ಟೇಟ್‌ ಬ್ಯಾಂಕ್‌ ಆಫ್ ಪಾಕಿಸ್ಥಾನದ ಹೇಳಿಕೆ.

ತಜ್ಞರ ಅಚ್ಚರಿ: ಅಗತ್ಯ ವಸ್ತುಗಳಿಗೆ ಬೆಲೆ ಏರಿಕೆ ಆಗಿರುವಾಗ ನೋಟು ಅಮಾನ್ಯ ಕ್ರಮ ಹೇಗೆ ನೆರವಾದೀತು ಎಂದು ಆ ದೇಶದ ಆರ್ಥಿಕ ತಜ್ಞರು ಪ್ರಶ್ನಿಸಿದ್ದಾರೆ. ಹಣದ ಹರಿವು ಇಲ್ಲದಿದ್ದರೆ ಪಾಕಿಸ್ಥಾನದ ಅರ್ಥ  ವ್ಯವಸ್ಥೆ ಇನ್ನೂ ಕುಸಿದು ಹೋಗಿ ಅನಾಹುತಗಳು ಉಂಟಾಗಲಿದೆ ಎಂದು ಅವರು ಸರಕಾರಕ್ಕೆ ಎಚ್ಚರಿ ಕೆಯನ್ನೂ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next