ನವ ದೆಹಲಿ : ವಿಜಯ್ ಶೇಖರ್ ಶರ್ಮಾ ಒಡೆತನದ ಪೇಟಿಎಂ, ತನ್ನ ಗ್ರಾಹಕರಿಗೆ 5 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ (ನಿಖರವಾಗಿ 2 ನಿಮಿಷಗಳು) 2 ಲಕ್ಷ ರೂ.ಗಳವರೆಗೆ ತ್ವರಿತ ಸಾಲ ಪಡೆಯುವ ಅವಕಾಶವನ್ನು ಒದಗಿಸುತ್ತಿದೆ.
ಸಾಲದ ಅರ್ಜಿಯ ಸಂಪೂರ್ಣ ಪ್ರಕ್ರಿಯೆಯು ಆನ್ ಲೈನ್‌ನಲ್ಲಿ ನಡೆಯುವುದರಿಂದ ಸಾಲವನ್ನು ಡಿಜಿಟಲ್ ರೀತಿಯಲ್ಲಿ ವಿತರಿಸಲಾಗುತ್ತದೆ.
ಈ ಸೌಲಭ್ಯ ವರ್ಷದ 365 ದಿನಗಳು 24×7 ಲಭ್ಯವಿದೆ, ಗ್ರಾಹಕರು 2 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು ಮತ್ತು ಸಾಲದ ಮೊತ್ತವನ್ನು ವಿತರಿಸಲು ಸಂಪೂರ್ಣ ಪ್ರಕ್ರಿಯೆಯನ್ನು ಮಾಡಲು 2 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
ಓದಿ : ಪ್ರಾಯೋಜಿತ :ರಾಘು…ಭಾವನಾತ್ಮಕ ಫೋಟೋ ಕ್ಯಾನ್ವಾಸ್ ಸೆರೆ ಹಿಡಿಯುವ ನಿಪುಣ
ಪೇಟಿಎಂ ನಿಂದ ತತ್ ಕ್ಷಣದ ವೈಯಕ್ತಿಕ ಸಾಲ ಯೋಜನೆ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು ಮತ್ತು ಮರುಪಾವತಿ ಅವಧಿಯು 18-36 ತಿಂಗಳುಗಳ ಕಾಲ ಇರಲಿದೆ ಎಂದು ತಿಳಿಸಿದೆ. ಆದಾಗ್ಯೂ, ಮರುಪಾವತಿ ಒಂದು ವೇಳೆ ವಿಳಂಬವಾದಲ್ಲಿ ಏನು ಕ್ರಮ ಕೈಗೊಳ್ಳಲಿದೆ ಎನ್ನುವುದರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸಾಲಕ್ಕಾಗಿ, ಗ್ರಾಹಕರು ಹಣಕಾಸು ಸೇವೆಗಳ ವಿಭಾಗದ(Financial Services section)ಅಡಿಯಲ್ಲಿ ಒದಗಿಸಲಾದ ಪೇಟಿಎಂನಲ್ಲಿನ ವೈಯಕ್ತಿಕ ಸಾಲ ಆಯ್ಕೆಗೆ ಹೋಗಬೇಕಾಗುತ್ತದೆ ಮತ್ತು ನಂತರ ಅವರು ತಮ್ಮ ಸಾಲದ ಖಾತೆಯನ್ನು ಪೇಟಿಂ ಅಪ್ಲಿಕೇಶನ್‌ನಿಂದ ನೇರವಾಗಿ ನಿರ್ವಹಿಸಬಹುದಾಗಿದೆ.
ಪೇಟಿಎಂ ತನ್ನ ಸಾಲ ಸೇವೆಗಾಗಿ ಹಲವಾರು ಬ್ಯಾಂಕುಗಳು ಮತ್ತು NBFC ಗಳೊಂದಿಗೆ ಪಾಲುದಾರಿಕೆ ಹೊಂದಿದೆ.
ಓದಿ : ತೆಲಂಗಾಣದಲ್ಲಿ ಹೊಸ ಪಕ್ಷ ಕಟ್ಟಲು ಹೊರಟ ವೈಎಸ್ ಜಗನ್ ಮೋಹನ್ ರೆಡ್ಡಿ ಸಹೋದರಿ ವೈಎಸ್ ಶರ್ಮಿಳಾ