Advertisement

Movies: ಈಗ ಎಲ್ಲೆಡೆ ಸಿಎಂ ಸಿನಿಮಾ ಹವಾ!

11:38 PM Oct 17, 2023 | Team Udayavani |

ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಬಳಿ ಆಕಾಂಕ್ಷಿಗಳು ಟಿಕೆಟ್‌ಗಾಗಿ ಮುಗಿಬೀಳುವುದನ್ನು ಕೇಳಿರುತ್ತೀರಿ. ಆದರೆ, ಆಂಧ್ರದ ಸ್ಟೈಲೇ ಬೇರೆ! ಅಲ್ಲಿ ಸಿನಿಮಾ ನಿರ್ಮಾಪಕರೆಲ್ಲ ಸಿಎಂ ಜಗನ್‌ ಮೋಹನ್‌ ರೆಡ್ಡಿಯ ಹಿಂದೆ ಬಿದ್ದಿದ್ದಾರಂತೆ. ಹೌದು, ಮುಂದಿನ ವರ್ಷದ ಪ್ರಥಮಾರ್ಧದಲ್ಲಿ ವಿಧಾನ ಸಭೆ ಚುನಾವಣೆ ಎದುರಿಸಲಿರುವ ಆಂಧ್ರ ಪ್ರದೇಶದಲ್ಲೀಗ ಸಿನಿಮಾಗಳದ್ದೇ ದರ್ಬಾರ್‌! ಜಗನ್‌ ಕುರಿತು ಸಿನಿಮಾ ಮಾಡಲು ನಿರ್ದೇಶಕರ ನಡುವೆಯೇ ರೇಸ್‌ ಶುರುವಾಗಿದೆಯಂತೆ.

Advertisement

ಹಿಂದಿನ ಚುನಾವಣೆ ವೇಳೆ ಬಿಡುಗಡೆ ಯಾಗಿದ್ದ ಸಿಎಂ ಜಗನ್‌ ಕುರಿತ ಸಿನಿಮಾ “ಯಾತ್ರಾ”ದ ಎರಡನೇ ಭಾಗವಾದ “ಯಾತ್ರಾ 2” ಮುಂದಿನ ಫೆ.8ರಂದು ತೆರೆಗೆ ಬರಲಿದೆ. ಇನ್ನು, ಇದೇ ನ.10ರಂದು “ವ್ಯೂಹಂ” ಸಿನಿಮಾ ಬಿಡುಗಡೆಯಾಗಲಿದ್ದು, ಜ.25ರಂದು “ಶಪಥಂ” ತೆರೆ ಕಾಣಲಿದೆ ಎಂದು ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next