Advertisement

ಚೀನಾದ ಕೊರೊನಾ ವೈರಸ್ ಬಗ್ಗೆ 40 ವರ್ಷದ ಹಿಂದೆಯೇ “ಈ” ಕಾದಂಬರಿ ಭವಿಷ್ಯ ನುಡಿದಿತ್ತು!

07:56 PM Mar 20, 2020 | Nagendra Trasi |

ಬೀಜಿಂಗ್: ಚೀನಾದಲ್ಲಿ ಈಗಾಗಲೇ 1,700ಕ್ಕೂ ಅಧಿಕ ಜನರನ್ನು ಬಲಿಪಡೆದಿರುವ ಕೊರೊನಾ ವೈರಸ್ ಭೀತಿ ಮುಂದುವರಿದಿದೆ. ಚೀನಾದ ವುಹಾನ್ ನಗರ ಕೊರೊನಾ ವೈರಸ್ ನ ತವರಾಗಿದ್ದು, ಈಗಾಗಲೇ 25ಕ್ಕೂ ಅಧಿಕ ದೇಶಗಳಿಗೆ ಹಬ್ಬಿದೆ. ಆದರೆ ಕುತೂಹಲದ ವಿಷಯ ಏನೆಂದರೆ ವುಹಾನ್ ವೈರಸ್ ಬಗ್ಗೆ 40ವರ್ಷಗಳ ಹಿಂದೆಯೇ ಪ್ರಕಟಗೊಂಡಿದ್ದ ಕಾದಂಬರಿಯಲ್ಲಿ ಉಲ್ಲೇಖಿಸಲಾಗಿದೆ!

Advertisement

ಈ ಥ್ರಿಲ್ಲರ್ ಕಾದಂಬರಿ ಹೆಸರು “The Eyes of Darkness”, ಇದರ ಲೇಖಕ ಡೆಯಾನ್ ಕೋನ್ಟಾಝ್. 1981ರಲ್ಲಿ ಬರೆದ ಕಾದಂಬರಿಯಲ್ಲಿ ವುಹಾನ್-400 ಎಂದು ವೈರಸ್ ಹೆಸರನ್ನು ಉಲ್ಲೇಖಿಸಿದ್ದರು. ಅಲ್ಲದೇ ಈ ವೈರಸ್ ಅನ್ನು ಪ್ರಯೋಗಾಲಯದಲ್ಲಿ ಆಯುಧವನ್ನಾಗಿ ಬಳಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದರು.

ವುಹಾನ್ ವೈರಸ್ ಕುರಿತು ಕಾದಂಬರಿಯಲ್ಲಿ ಉಲ್ಲೇಖವಾಗಿರುವ ಬಗ್ಗೆ ಟ್ವೀಟರ್ ಬಳಕೆದಾರ ಡ್ಯಾರ್ರೆನ್ ಪ್ಲೇಮೌಥ್ ಗಮನಸೆಳೆಯುವ ಮೂಲಕ ಟ್ವೀಟರ್ ನಲ್ಲಿ ಟ್ರೆಂಡ್ ಆಗಿದೆ. ಈ ಅಚ್ಚರಿಯ ಜಗತ್ತಿನೊಳಗೆ ನಾವು ಬದುಕುತ್ತಿದ್ದೇವೆ ಎಂದು ಟ್ವೀಟ್ ಮಾಡಿರುವುದಾಗಿ ವರದಿ ವಿವರಿಸಿದೆ.

ಕಾಲ್ಪನಿಕ ಕಥೆ ಇಂತಹ ಸಮಯದಲ್ಲಿ ನಿಜಕ್ಕೂ ಅಚ್ಚರಿಗೆ ಕಾರಣವಾಗುತ್ತದೆ. ವುಹಾನ್ ವೈರಸ್ ಬಗ್ಗೆ 40ವರ್ಷದ ಹಿಂದೆಯೇ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂಬ ಸಾಂದರ್ಭಿಕ ಉಲ್ಲೇಖ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಕಾರಣವಾಗಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next