ಪ್ಯಾರಿಸ್: ಟೆನ್ನಿಸ್ ಪ್ರಿಯರ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಫ್ರೆಂಚ್ ಓಪನ್ ಪುರುಷರ ಸೆಮಿ ಫೈನಲ್ ಪಂದ್ಯದಲ್ಲಿ ನೊವಾಕ್ ಜೋಕೊವಿಕ್ ಅವರು ರಫೆಲ್ ನಡಾಲ್ ವಿರುದ್ದ ಜಯ ಗಳಿಸಿ ಫೈನಲ್ ಪ್ರವೇಶ ಪಡೆದಿದ್ದಾರೆ.
ವಿಶ್ವದ ನಂಬರ್ 1 ಟೆನ್ನಿಸಿಗ ಜೋಕೊವಿಕ್ ಮತ್ತು ಕ್ಲೇ ಕೋರ್ಟ್ ಕಿಂಗ್ ನಡಾಲ್ ನಡುವೆ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಜೋಕೋವಿಕ್ 3-6 6-3 7-6(4) 6-2 ಸೆಟ್ ಗಳ ಅಂತರದಲ್ಲಿ ಗೆಲುವು ಸಾಧಿಸಿದರು.
2017ರಿಂದ ಸತತವಾಗಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವ ನಡಾಲ್, ಮೊದಲ ಸೆಟ್ ಗೆದ್ದರಾದರೂ ನಂತರ ಜೋಕೊವಿಕ್ ಬಿರುಸಿನ ಹೊಡೆತಗಳ ಮುಂದೆ ಸೋಲನುಭವಿಸಿದರು.
ಇದನ್ನೂ ಓದಿ:ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ವರೆಗೆ ಭಾರತ ತಂಡದ ಪಯಣ ಹೇಗಿತ್ತು?
ಆಟವೆಂದರೆ ಹಾಗೆ, ಕೆಲವೊಮ್ಮೆ ಗೆಲ್ಲುತ್ತೀರಿ, ಕೆಲವೊಮ್ಮೆ ಸೋಲನುಭವಿಸುತ್ತೀರಿ. ನಾನು ನನ್ನ ಉತ್ತಮ ಆಟವನ್ನೇ ಆಡಿದ್ದೆ. ಆದರೆ ಇದು ನನ್ನ ದಿನವಾಗಿರಲಿಲ್ಲ ಎಂದು ಸೋಲಿನ ಬಳಿಕ 13 ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ನಡಾಲ್ ಹೇಳಿದರು.
ಫ್ರೆಂಚ್ ಓಪನ್ ನಲ್ಲಿ ಇದುವರೆಗೆ 111 ಪಂದ್ಯವಾಡಿರುವ ನಡಾಲ್ ಸೋಲನುಭವಿಸಿರುವುದು ಕೇವಲ ಮೂರರಲ್ಲಿ ಮಾತ್ರ. ನಡಾಲ್ ರನ್ನು ಎರಡು ಪಂದ್ಯದಲ್ಲಿ ಸೋಲಿಸಿದ ಏಕೈಕ ಆಟಗಾರನೆಂದರೆ ಅದು ಜೋಕೊವಿಕ್.