Advertisement
“ಆಸ್ಟ್ರೇಲಿಯದಲ್ಲಿ ನಿಷೇಧ ಹೇರಲಾದ ಬಳಿಕ ಸರ್ಬಿಯಾಕ್ಕೆ ಹೋದಾಗ ನನ್ನ ಆರೋಗ್ಯದಲ್ಲಿ ಏರುಪೇರಾಗತೊಡಗಿತು. ಪರೀಕ್ಷಿಸಿದಾಗ ನನ್ನ ಆಹಾರದಲ್ಲಿ ವಿಷಕಾರಿ ಪದಾರ್ಥಗಳಾದ ಸೀಸ ಮತ್ತು ಪಾದರಸ ಅಂಶ ಇರುವುದು ಪತ್ತೆಯಾಗಿತ್ತು. ಮೆಲ್ಬರ್ನ್ ಹೊಟೇಲ್‌ನಲ್ಲಿ ತಂಗಿದ್ದ ವೇಳೆ ನೀಡಲಾದ ಆಹಾರದಲ್ಲಿ ಇದನ್ನು ಬೆರೆಸಿರುವ ಸಾಧ್ಯತೆ ಇದೆ. ಈವರೆಗೆ ಇದನ್ನು ನಾನು ಎಲ್ಲಿಯೂ ಹೇಳಲು ಹೋಗಿಲ್ಲ’ ಎಂದು “ಜಿಕ್ಯೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಜೊಕೋವಿಕ್ ಈ ಅಂಶವನ್ನು ಬಿಚ್ಚಿಟ್ಟಿದ್ದಾರೆ.
ಆದರೆ ಗೌಪ್ಯತೆಯ ಕಾರಣಗಳಿಗಾಗಿ ವೈಯಕ್ತಿಕ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯದ ಗೃಹ ವ್ಯವಹಾರಗಳ ಇಲಾಖೆಯ ವಕ್ತಾರರೊಬ್ಬರು ಹೇಳಿದ್ದಾರೆ. ಹೊಟೇಲ್‌ನಲ್ಲಿ ವಿಷಾಹಾರ?!
ಅಂದು ಕೋವಿಡ್-19 ಲಸಿಕೆ ಪಡೆಯದ ಕಾರಣ ನೊವಾಕ್ ಜೊಕೋವಿಕ್ ಅವರಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಲು ಬಿಡದೆ ದೇಶ ಬಿಟ್ಟು ಹೋಗಲು ಸೂಚಿಸಲಾಗಿತ್ತು. ಆಗ ಅವರನ್ನು ಮೆಲ್ಬರ್ನ್ನಲ್ಲಿ ಬಂಧಿಸಿ 4 ದಿನಗಳ ಕಾಲ “ಪಾರ್ಕ್ ಹೊಟೇಲ್’ನಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ನೀಡಲಾದ ಆಹಾರದಲ್ಲಿ ವಿಷಕಾರಿ ಅಂಶವನ್ನು ಬೆರೆಸಿರುವ ಸಾಧ್ಯತೆ ಇದೆ ಎಂಬುದು ಜೊಕೋವಿಕ್ ಆರೋಪ.
Related Articles
Advertisement
2025ರ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ನೊವಾಕ್ ಜೊಕೋವಿಕ್ ನೀಡಿರುವ ಈ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.