Advertisement
ಗುರುವಾರ ನಡೆದ ಪಂದ್ಯದಲ್ಲಿ ಜೊಕೋವಿಕ್ ಅಮೆರಿಕದ ಟೇಲರ್ ಫ್ರಿಟ್ಸ್ ವಿರುದ್ಧ 6-3, 6-0 ಜಯ ಸಾಧಿಸಿ ಇಲ್ಲಿ 9ನೇ ಕ್ವಾರ್ಟರ್ ಫೈನಲ್ ಪಂದ್ಯವನ್ನಾಡಲು ಸಿದ್ಧರಾಗಿದ್ದಾರೆ. ಜೊಕೋವಿಕ್- ಟೇಲರ್ ನಡುವಿನ ಆಟ 68 ನಿಮಿಷಗಳ ಆಟದಲ್ಲಿ ಮುಗಿಯಿತು.
6ನೇ ಶ್ರೇಯಾಂಕಿತ, ಗ್ರೀಕ್‌ನ ಸ್ಟೆಫನಸ್ ಸಿಸಿಪಸ್ 2-6, 6-1, 4-6 ಸೆಟ್‌ಗಳಿಂದ ರಶ್ಯದ ಡೇನಿಯಲ್ ಮೆಡ್ವಡೇವ್ ಅವರ ವಿರುದ್ಧ ಸೋತು ಆಘಾತ ಅನುಭವಿಸಿದರು. ಈ ಕೂಟದಲ್ಲಿ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಮೆಡ್ವಡೇವ್ ಮುಂದಿನ ಪಂದ್ಯದಲ್ಲಿ ಜೊಕೋವಿಕ್ ಅವರನ್ನು ಎದುರಿಸಲಿದ್ದಾರೆ. ನಡಾಲ್‌ಗೆ ಜಯ
ಸ್ಪೇನಿನ ರಫೆಲ್ ನಡಾಲ್ ಕೂಡ ಸುಲಭ ಜಯದೊಂದಿಗೆ ಮುನ್ನಡೆದರು. ಅವರು ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲ್ಗೇರಿಯದ ಗ್ರಿಗರ್ ಡಿಮೆಟ್ರೋವ್ ವಿರುದ್ಧ 6-4, 6-1 ನೇರ ಸೆಟ್‌ಗಳ ಗೆಲುವು ಸಾಧಿಸಿದರು.