ಹೊಸದಿಲ್ಲಿ: ಕೊರೊನೋತ್ತರದಲ್ಲಿ ದೇಶದ ವಾಹನೋದ್ಯಮ ಮಾರುಕಟ್ಟೆ ಚಿಗಿತುಕೊಂಡಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ನವೆಂಬರ್ ತಿಂಗಳಿನ ವಾಹನ ಮಾರಾಟ ಪ್ರಮಾಣ ಹೆಚ್ಚಾಗಿದೆ.
ಕಳೆದ ವರ್ಷದ ನವೆಂಬರ್ಗೆ ಹೋಲಿಸಿದರೆ ಈ ಬಾರಿ ವೈಯಕ್ತಿಕ, ಮಧ್ಯಮ ಮತ್ತು ವಾಣಿಜ್ಯ ವಾಹನಗಳ ಮಾರಾಟ ಶೇ. 33ರಷ್ಟು ಏರಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಹಾಗೆಯೇ ದ್ವಿಚಕ್ರ ವಾಹನ ಕ್ಷೇತ್ರದಲ್ಲಿಯೂ ಶೇ. 21ರಷ್ಟು ಹೆಚ್ಚಳ ಕಂಡುಬಂದಿದೆ. ಬಹುತೇಕ ಆಟೋಮೊಬೈಲ್ ಕಂಪೆನಿಗಳು ಗುರುವಾರ ತಮ್ಮ ಮಾರಾಟ ವಹಿವಾಟಿನ ಪ್ರಗತಿ ವರದಿ ಬಿಡುಗಡೆ ಮಾಡಿವೆ.
ಮಹೀಂದ್ರಾ ಮತ್ತು ಮಹೀಂದ್ರಾ: 45%
ಮಾರುತಿ ಸುಜುಕಿ: 14.4%
Related Articles
ಟಾಟಾ ಮೋಟಾರ್ಸ್: 21%
ಟಿವಿಎಸ್ : 02%
ಹುಂಡೈ: 30%
ಕಿಯಾ: 69%
ಹೊಂಡಾ: 29%