Advertisement

ನ. 27ರಿಂದ ಕೆಪಿಎಸ್‌ಸಿ ಪರೀಕ್ಷೆ

02:43 AM Oct 27, 2021 | Team Udayavani |

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ವಿವಿಧ 990 ಎಂಜಿನಿಯರ್‌ ಹುದ್ದೆಗಳ ನೇಮಕಕ್ಕೆ ಕರ್ನಾಟಕ ಲೋಕಸೇವಾ ಆಯೋಗ ನ. 27ರಿಂದ 29ರ ವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.

Advertisement

ನ. 27ರಂದು 330 ಕಿರಿಯ ಅಭಿಯಂತರ ಹುದ್ದೆಗಳಿಗೆ ಬೆಳಗ್ಗೆ 10ರಿಂದ 11.30ರ ವರೆಗೆ ಸಾಮಾನ್ಯ ಪತ್ರಿಕೆ, ಅಪರಾಹ್ನ 2ರಿಂದ 4ರ ವರೆಗೆ ನಿರ್ದಿಷ್ಟ ಪತ್ರಿಕೆಯ ಪರೀಕ್ಷೆ ನಡೆಯಲಿದೆ.

660 ಸಹಾಯಕ ಅಭಿಯಂತರ (ಗ್ರೇಡ್‌-1 ಸಿವಿಲ್‌) ಹುದ್ದೆಗಳಿಗೆ ನ. 28ರಂದು ಬೆಳಗ್ಗೆ 10ರಿಂದ 11.30ರ ವರೆಗೆ ಸಾಮಾನ್ಯ ಪತ್ರಿಕೆ, ಅಪರಾಹ್ನ 2ರಿಂದ 4ರ ವರೆಗೆ ನಿರ್ದಿಷ್ಟ ಪತ್ರಿಕೆಯ ಪರೀಕ್ಷೆ ನಡೆಯಲಿದೆ.

ನ. 29ರಂದು ಬೆಳಗ್ಗೆ 10ರಿಂದ 11.30ರ ವರೆಗೆ ಕನ್ನಡ ಪರೀಕ್ಷೆ ನಡೆಯಲಿದೆ ಎಂದು ಕೆಪಿಎಸ್‌ಸಿ ಪ್ರಕಟನೆ ತಿಳಿಸಿದೆ.

ಇದನ್ನೂ ಓದಿ:2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

Advertisement

 

Advertisement

Udayavani is now on Telegram. Click here to join our channel and stay updated with the latest news.

Next