Advertisement

ಕೇಂದ್ರ ಸರಕಾರದ ಗುಜರಿ ನೀತಿ ಯಥಾವತ್‌ ಜಾರಿಗೆ ಅಧಿಸೂಚನೆ

10:23 PM Aug 04, 2022 | Team Udayavani |

ಬೆಂಗಳೂರು: ಕೇಂದ್ರ ಸರಕಾರ ಘೋಷಿಸಿದ ಮಹತ್ವಾಕಾಂಕ್ಷಿ ವಾಹನಗಳ ಗುಜರಿ ನೀತಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ರಾಜ್ಯ ಸರಕಾರ ಮುಂದಾಗಿದ್ದು, ಈ ಸಂಬಂಧ ಈಚೆಗೆ ಅಧಿಸೂಚನೆಯನ್ನು ಹೊರಡಿಸಿದೆ.

Advertisement

2021ರ ಸೆಪ್ಟೆಂಬರ್‌ನಲ್ಲಿ ಘೋಷಿಸಿದ ಉದ್ದೇಶಿತ ನೀತಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ನೀತಿಯ ಜಾರಿ ಮತ್ತು ಸಂಬಂಧಿಸಿದ ಯಾವುದೇ ವಿಚಾರಣೆಗಳಿಗಾಗಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳ ನೇತೃತ್ವದಲ್ಲಿ ಮೇಲ್ಮನವಿ ಪ್ರಾಧಿಕಾರವನ್ನಾಗಿ ಅಧಿಸೂಚಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಶೀಘ್ರದಲ್ಲೇ ನೀತಿ ಜಾರಿ ಕುರಿತಂತೆ ಸರಕಾರ ರಾಜ್ಯಪತ್ರ ಹೊರಡಿಸಲಿದ್ದು, ಅನಂತರದಲ್ಲಿ ಅನುಷ್ಠಾನಗೊಳ್ಳಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next