Advertisement
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1245 ರೈತರಿಂದ 4.35 ಲಕ್ಷ ಮೆಟ್ರಿಕ್ ಟನ್ ಕಬ್ಬು ಖರೀದಿಸಿ 27 ಕೋಟಿ ರೂ.ಪಾವತಿಸಿದ್ದು, ಇನ್ನು 95 ಕೋಟಿ ಪಾವತಿಸಬೇಕಿದೆ. ಆದಷ್ಟು ಬೇಗ ಈ ಹಣವನ್ನು ವತಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ರೈತರು ಬೆಳೆದ ಕಬ್ಬು ನಿಗದಿತ ಅವಧಿಯಲ್ಲಿ ಕಟಾವು ಮಾಡುತ್ತಿಲ್ಲ ಎಂಬ ದೂರುಗಳಿದ್ದು, ಸಕ್ಕರೆ ಕಾರ್ಖಾನೆಯವರು 3 ದಿನಗಳಲ್ಲಿ ಕಬ್ಬು ಕಟಾವು ಮಾಡುವ ಟೋಲಿ ಹೆಚ್ಚಿಸಿ ಈಗಿರುವ ಹಾಗೂ ಹೆಚ್ಚಿಸಿರುವ ಟೋಳಿಗಳ ವರದಿ ನೀಡಬೇಕು. ಟೋಳಿ ಹೆಚ್ಚಿಸಿ ಹೆಚ್ಚಿನ ಪ್ರಮಾಣದ ಕಬ್ಬು ಕಟಾವಿಗೆ ಮುಂದಾಗಬೇಕು.
Related Articles
Advertisement
ಬೆಳಗಾವಿ ಜಿಲ್ಲೆಯಲ್ಲಿ ಸಹ ಹೆಚ್ಚು ಪ್ರಮಾಣದ ಕಬ್ಬು ಬೆಳೆಯುತ್ತಾರೆ. ಅಲ್ಲಿ ಸ್ವತಃ ರೈತರೇ ಕಟಾವು ಮಾಡಿ ಕಾರ್ಖಾನೆಗಳಿಗೆ ಸಾಗಿಸುತ್ತಾರೆ. ಆದರೆ ಈ ಭಾಗದಲ್ಲಿ ಕಬ್ಬು ಕಟಾವಿಗೆ ಮಹಾರಾಷ್ಟ್ರದ ಟೋಳಿಗಳನ್ನು ಅವಲಂಬಿಸಬೇಕಿದೆ. ರೈತರೇ ಸ್ವತಃ ಕಬ್ಬು ಕಟಾವು ಮಾಡಿಕೊಂಡಲ್ಲಿ ತುಂಬಾ ಅನುಕೂಲವಾಗಲಿದೆ ಎಂದು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಹೇಳಿದರು.
ಉಗಾರ್ ಶುಗರ್ನ ಕಬ್ಬು ಅಭಿವೃದ್ಧಿ ಅಧಿಕಾರಿ ಅನೀಲಕುಮಾರ ಪಾಟೀಲ, ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆ ಮ್ಯಾನೇಜರ್ ಶಿವಾನಂದ ನಂದಗಿರಿ, ಎನ್‌ಎಸ್‌ಎಲ್ ಭೂಸನೂರ ಸಕ್ಕರೆ ಕಾರ್ಖಾನೆ ಉಪ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ, ರೇಣುಕಾ ಸಕ್ಕರೆಕಾರ್ಖಾನೆ ಉಪ ವ್ಯವಸ್ಥಾಪಕ ಅನೀಲಕುಮಾರ ಎಸ್. ವಾಲಿಕಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಅರುಣಕುಮಾರ ಸಂಗಾವಿ ಹಾಗೂ ಇತರರು ಭಾಗವಹಿಸಿದ್ದರು.