Advertisement

Notifiable disease: ಹಾವು ಕಡಿತ: 8 ತಿಂಗಳಲ್ಲಿ 58 ಜನ ಸಾವು

12:27 AM Sep 07, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡಿದರೂ ಸಾವಿನ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಒಂದು ವಾರದಲ್ಲಿ 387 ಜನರಿಗೆ ಹಾವು ಕಚ್ಚಿದ್ದು ಐವರು ಹಾವಿನ ವಿಷದಿಂದ ಪ್ರಾಣ ಕಳೆದುಕೊಂಡಿದ್ದಾರೆ.

Advertisement

2024ರ ಜ. 1ರಿಂದ ಸೆ. 5ರ ವರೆಗೆ ರಾಜ್ಯದಲ್ಲಿ 8,171 ಜನರಿಗೆ ಹಾವು ಕಚ್ಚಿದ್ದು, 58 ಜನ ಮೃತಪಟ್ಟಿದ್ದರು. ಕಳೆದ ವರ್ಷ 5,316 ಮಂದಿ ಹಾವಿನ ಕಡಿತಕ್ಕೆ ಒಳಗಾಗಿದ್ದು, ಅವರಲ್ಲಿ 13 ಮಂದಿ ಮೃತಪಟ್ಟಿದ್ದಾರೆ. 2024ರ ಫೆಬ್ರವರಿ ಯಲ್ಲಿ ಕರ್ನಾಟಕದಲ್ಲಿ ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ರಾಜ್ಯ ಸರಕಾರ ಘೋಷಣೆ ಮಾಡಿತ್ತು.

ಹಾವು ಬಂತೆಂದು ಕಚೇರಿಯೇ ಸ್ಥಳಾಂತರ!
ಅಥಣಿ ಪಟ್ಟಣದಲ್ಲಿರುವ ಬ್ರಿಟಿಷರ ಕಾಲದ ಹಳೆ ತಹಶೀಲ್ದಾರ್‌ ಕಚೇರಿ ಆವರಣದಲ್ಲಿರುವ ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಹಾವು ಕಾಣಿಸಿಕೊಂಡದ್ದರಿಂದ ಸಿಬಂದಿ ಇಡೀ ದಿನ ಹೊರಗೆ ಕುಳಿತು ಕಾರ್ಯ ನಿರ್ವಹಿಸಿದ್ದಲ್ಲದೇ ನೂತನ ಸರಕಾರಿ ಕಟ್ಟಡ ಆಗುವವರೆಗೂ ಇಲ್ಲಿರಲು ಸಾಧ್ಯವಿಲ್ಲ ಎಂದು ನಿರ್ಣಯಿಸಿ ಸಂಜೆ ವೇಳೆಗೆ ಕಚೇರಿಯನ್ನೇ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡಿದ ಘಟನೆ ಗುರುವಾರ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next