Advertisement
ಶುಕ್ರವಾರ ನಗರ ಪೊಲೀಸ್ ಉಪಾಧೀಕ್ಷರ ಕಚೇರಿಯಲ್ಲಿ ಟ್ರಾಫಿಕ್ ಎನ್‌ಫೋರ್ಸ್ ಮೆಂಟ್ ಆಟೋಮೇಷನ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ಸಂಚಾರ ವ್ಯವಸ್ಥೆಯಲ್ಲಿ ಪಾರದರ್ಶಕತ್ವ, ಸುಧಾರಣೆ, ಸುಗಮ ಸಂಚಾರ… ಮುಂತಾದ ಉದ್ದೇಶದಿಂದ ದಾವಣಗೆರೆಯಲ್ಲಿ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯ ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್ ಪ್ರಾರಂಭಿಸಲಾಗಿದೆ ಎಂದರು.
Related Articles
Advertisement
ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್ ಕೆಲಸ ಮಾಡುವುದರಿಂದ ಇನ್ನು ಮುಂದೆ ರಸ್ತೆಯಲ್ಲಿ ಸಂಚಾರಿ ಪೊಲೀಸರು ವಾಹನ ತಡೆದು, ನಿಲ್ಲಿಸುವುದು. ಸ್ಥಳದಲ್ಲೇ ದಂಡ ವಸೂಲು ಮಾಡುವುದಕ್ಕೆ ಬ್ರೇಕ್ ಬೀಳಲಿದೆ. ಸದ್ಯಕ್ಕೆ ಹಿಂದಿನ ವ್ಯವಸ್ಥೆಯೇ ಮುಂದುವರೆಸಲಾಗುವುದು. 2 ವರ್ಷದಲ್ಲಿ ರಸ್ತೆಯಲ್ಲಿ ಹೊಸ ವ್ಯವಸ್ಥೆ ಜಾರಿಬರಲಿದೆ.
ಅತಿ ವೇಗ, ಕುಡಿದು ಚಾಲನೆ ಮಾಡುವವರ ತಪಾಸಣೆ ಮುಂದುವರೆಯಲಿದೆ. ಮುಂದಿನ ದಿನಗಳಲ್ಲಿ ಕಾರ್‌ನಲ್ಲಿ ಸೀಟ್ ಬೆಲ್ಟ್ ಕಡ್ಡಾಯ ಮಾಡಲಾಗುವುದು ಎಂದು ತಿಳಿಸಿದರು. ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್ ಕಾರ್ಯಾರಂಭದಿಂದ ಸಂಚಾರಿ ಪೊಲೀಸರಿಂದ ಕಿರುಕುಳ ಆಗುತ್ತಿದೆ.
ಸಕಾರಣ ಇಲ್ಲದೆ ವಾಹನ ತಡೆಯುತ್ತಾರೆ. ದಂಡ ವಸೂಲು ಮಾಡುತ್ತಾರೆ… ಎಂಬಿತ್ಯಾದಿ ಸಾರ್ವಜನಿಕರ ಆಕ್ಷೇಪಣೆ ಕೇಳಿ ಬರುವುದಿಲ್ಲ. ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ನೇರವಾಗಿ ನೋಟಿಸ್ ಕಳಿಸಲಾಗುತ್ತದೆ. ಅವರು ನ್ಯಾಯಾಲಯದಲ್ಲಿ ದಂಡ ಕಟ್ಟಬೇಕಾಗುತ್ತದೆ ಎಂದು ತಿಳಿಸಿದರು.
2003ರಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಟ್ರಾಫಿಕ್ ಎನ್‌ಫೋಸ್ ìಮೆಂಟ್ ಆಟೋಮೇಷನ್ ಸೆಂಟರ್ ಪ್ರಾರಂಭಿಸಲಾಯಿತು. ಬೆಂಗಳೂರಿನ ಥಿಮ್ಯಾಟಿಕ್ಸ್ ಐಟಿ ಸಲ್ಯೂಷನ್ ಸಂಸ್ಥೆಯವರು ಉಚಿತವಾಗಿ ಸಾಫ್ಟ್‌ವೇರ್ ಸಿದ್ದಪಡಿಸಿಕೊಟ್ಟಿದ್ದರು.
ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ವರ್ಷಕ್ಕೆ ದಾಖಲಾಗುವ 90 ಲಕ್ಷದಷ್ಟು ಕೇಸ್‌ಗಳಲ್ಲಿ ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಆಟೋಮೇಷನ್ ಸೆಂಟರ್‌ನಿಂದಲೇ 40-50 ಲಕ್ಷ ಕೇಸ್ ದಾಖಲಾಗುತ್ತವೆ. ಆಧುನಿಕ ತಂತ್ರಜ್ಞಾನ ವ್ಯವಸ್ಥೆಯಿಂದ ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಆಗಿದೆ ಎಂದು ತಿಳಿಸಿದರು.
ಸ್ಮಾರ್ಟ್‌ಸಿಟಿ ದಾವಣಗೆರೆಯಲ್ಲೂ ಆಧುನಿಕ ತಂತ್ರಜ್ಞಾನದ ಅಳವಡಿಕೆ ಅಗತ್ಯವಾಗಿರುವುದ ಮನಗಂಡು ಟ್ರಾಫಿಕ್ ಎನ್‌ಫೋಸ್ ìಮೆಂಟ್ ಆಟೋಮೇಷನ್ ಸೆಂಟರ್ ಗೆ ಚಾಲನೆ ನೀಡಲಾಗಿದೆ. 15 ಡಿಜಿಟಲ್, 10 ಬಾಡಿ ಹಾಗೂ 2 ಹ್ಯಾಂಡಿ ಕ್ಯಾಮೆರಾ ನೀಡಲಾಗಿದೆ. 15 ಸರ್ವಲೈನ್ ಕ್ಯಾಮೆರಾ ಸಹ ಬಂದಿವೆ.
ಮುಂದಿನ ದಿನಗಳಲ್ಲಿ ಪಬ್ಲಿಕ್ ಐ… ವ್ಯವಸ್ಥೆ ಮಾಡುವ ಚಿಂತನೆ ಇದೆ. ಅಂದರೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದನ್ನು ಸಾರ್ವಜನಿಕರೇ ಚಿತ್ರಿಸಿ, ಸೆಂಟರ್‌ಗೆ ಕಳಿಸುವ ವ್ಯವಸ್ಥೆ ಮಾಡಲಾಗುವುದು. ಒಟ್ಟಾರೆಯಾಗಿ ಸ್ಮಾರ್ಟ್‌ಸಿಟಿಗೆ ತಕ್ಕಂತೆ ದಾವಣಗೆರೆಯಲ್ಲಿ ಅಚ್ಚುಕಟ್ಟಾದ ಸಂಚಾರಿ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ದಾವಣಗೆರೆಯ ಪ್ರಮುಖ ರಸ್ತೆ, ವೃತ್ತದಲ್ಲಿ ಪೊಲೀಸ್ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ 150 ಗೃಹರಕ್ಷಕ ದಳ ಸಿಬ್ಬಂದಿ ಸೇವೆ ಪಡೆಯಲಾಗುವುದು. ತಿರುವನಂತಪುರ ಮಾದರಿಯಲ್ಲಿ ದಾವಣಗೆರೆಯಲ್ಲೂ ಸಿ-ಡಾಟ್ ಸಂಚಾರಿ ವ್ಯವಸ್ಥೆ ಆಗಲಿದೆ. ಸಾರ್ವಜನಿಕರು ಸಹ ಬದಲಾವಣೆಗೆ ಅತಿ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಸುಗಮ ಸಂಚಾರ ವ್ಯವಸ್ಥೆಗೆ ಸಾರ್ವಜನಿಕರು ಸಹ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ದಾವಣಗೆರೆಯಲ್ಲಿ ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಸುವ ಸಂಬಂಧ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆದು, ದರ ನಿಗದಿ ಮಾಡಿದ ನಂತರವೇ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್, ಹೆಚ್ಚುವರಿ ಅಧೀಕ್ಷಕಿ ಯಶೋಧಾ ಎಸ್. ವಂಟಿಗೋಡಿ, ಥಿಮ್ಯಾಟಿಕ್ಸ್ ಐಟಿ ಸಲ್ಯೂಷನ್‌ನ ಸುಮಂತ್ ಇತರರು ಇದ್ದರು.