Advertisement

ಗನ್ ಡಿಪಾಸಿಟ್ ಮಾಡಿದವರು ವಾಪಾಸ್ ಪಡೆಯಲು ಸೂಚನೆ

05:59 PM May 22, 2023 | Suhan S |

ತೀರ್ಥಹಳ್ಳಿ : ಚುನಾವಣೆ ಹಿನ್ನಲೆಯಲ್ಲಿ ಪರವಾನಗಿ ಗನ್ ಮತ್ತು ಬಂದೂಕುಗಳನ್ನು ಡಿಪಾಸಿಟ್ ಮಾಡಿಕೊಳ್ಳಲಾಗಿತ್ತು. ತೀರ್ಥಹಳ್ಳಿಯಲ್ಲಿ ಈಗ ವಾಪಾಸ್ ಕೊಡಲು ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.

Advertisement

ತೀರ್ಥಹಳ್ಳಿಯಲ್ಲಿ ಇದುವರೆಗೂ 880 ಗನ್ ಗಳ ಡಿಪಾಸಿಟ್ ಮಾಡಿಕೊಳ್ಳಲಾಗಿತ್ತು. ಈ 880 ಗನ್ ಗಳನ್ನ ನಾಳೆಯಿಂದ ವಾಪಾಸ್ ನೀಡುವುದಾಗಿ ಇಲಾಖೆ ತಿಳಿಸಿದೆ. ಗನ್ ಡಿಪಾಸಿಟ್ ಮಾಡಿದವರೇ ಬಂದು ಗನ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಹೀಗೆ ಗನ್ ವಾಪಾಸ್ ಪಡೆಯಲು ಬರುವವರು ಆಧಾರ್ ಕಾರ್ಡ್ ನಂಬರ್, ಒಂದು ಪಾಸ್ ಪೋರ್ಟ್ ಸೈಜ್ ನ ಫೋಟೊಗಳನ್ನು ಹಿಡಿದುಕೊಂಡು ಬರಬೇಕಿದೆ. ಈ ಬಾರಿ ಡಿಜಿಟಲ್ ಡಿಪಾಸಿಟ್ ಮಾಡಿಕೊಳ್ಳಲಾಗಿತ್ತು. ಹೊಸ ಮಾದರಿಯಲ್ಲಿ ತಯಾರಿ ಮಾಡಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next