ಕುಷ್ಟಗಿ: ಶಾಲೆಗೆ ಗೈರಾಗಿ ಕುಡಿದು ತೂರಾಡಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್ ಜಾರಿ ಮಾಡಿ ಗುರುವಾರ ಶಾಲೆಗೆ ಹಾಜರಾಗಲು ಸೂಚ್ಯವಾಗಿ ತಿಳಿಸಿದ್ದರಾದರೂ ಶಿಕ್ಷಕ ಶಾಲೆಗೆ ಅನಧಿಕೃತ ಗೈರಾಗಿರುವುದು ಬೆಳಕಿಗೆ ಬಂದಿದೆ.
ಬುಧವಾರ ಶಿಕ್ಷಕ ಕುಡಿದು ತೂರಾಡುವ ವೇಳೆ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದ. ಸದರಿ ಶಿಕ್ಷಕನ ಅವಸ್ಥೆಗೆ 108 ಕ್ಕೆ ಕರೆ ಮಾಡಿ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮದ್ಯ ವ್ಯಸನಿ ಶಿಕ್ಷಕ ಚಿಕಿತ್ಸೆ ಪಡೆಯಲು ನಿರಾಕರಿಸಿ ಆಸ್ಪತ್ರೆಯಿಂದ ನಿರ್ಗಮಿಸಿದ್ದ. ಈ ಪ್ರಕರಣದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳಿ ಅವರು, ಸಿಆರ್ ಪಿ ಶರಣಪ್ಪ ಉಪ್ಪಾರ ಅವರಿಗೆ ಸ್ಥಾನಿಕ ಭೇಟಿ ನೀಡಿ ವಿಚಾರಣೆ ಕಳುಹಿಸಿದ್ದರು.
ಗುರುವಾರ ಶಿಕ್ಷಕ ಸಂಜೆಯಾದರೂ ಶಾಲೆಗೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಅವರು, 24 ಗಂಟೆಯ ಗಡವು ವಿಧಿಸಿದ್ದು ಖುದ್ದು ಹಾಜರಾಗಿ ಭೇಟಿ ನೀಡಿ ಸ್ಪಷ್ಟನೆ ನೀಡದೇ ಇದ್ದಲ್ಲಿ ಅಮಾನತಿಗೆ ಡಿಡಿಪಿಐ ಅವರಿಗೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದ್ದಾರೆ. ಖುದ್ದಾಗಿ ಹೋಗಿ ನೋಟಿಸ್ ತಲುಪಿಸಲು ಚಿಕ್ಕನಂದಿಹಾಳ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚಿಸಿದ್ದಾರೆ.