Advertisement

ಜಲಕ್ಷಾಮ ಆವರಿಸದಂತೆ ಕ್ರಮ ಕೈಗೊಳ್ಳಲು ಸೂಚನೆ

05:59 AM Mar 01, 2019 | |

ಸಿಂದಗಿ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಹಣವಿದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಿ ಎಂದು ಸಚಿವ ಎಂ.ಸಿ. ಮನಗೂಳಿ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

Advertisement

ತಾಪಂ ಸಭಾ ಭವನದಲ್ಲಿ ಸಿಂದಗಿ ಮತಕ್ಷೇತ್ರದಕ್ಕೆ ಸಂಬಂ ಧಿಸಿದಂತೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಕೈಗೊಳ್ಳುವ ಕ್ರಮದ ಕುರಿತು ಅಧಿಕಾರಿಗಳಿಗೆ ಗುರುವಾರ ಕರೆದ ತುರ್ತುಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಟ್ಟಣದ ಪುರಸಭೆಯ 23 ವಾರ್ಡ್‌ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಪಟ್ಟಣದಲ್ಲಿರುವ ಕೊಳವೆ ಬಾವಿಗಳನ್ನು
ಕೊರೆಸಿರಿ. ಪಟ್ಟಣದಲ್ಲಿರುವ ಖಾಸಗಿ ಮತ್ತು ಪುರಸಭೆ ಮಾಲಿಕತ್ವದಲ್ಲಿರುವ ತೆರೆದ ಬಾವಿಯಿಂದ ಹತ್ತಿರದ ವಾರ್ಡ್‌ಗಳಿಗೆ ಕುಡಿಯುವ ನೀರಿನನ್ನು ಸರಬರಾಜು ಮಾಡಿ ಎಂದು ಹೇಳಿದರು.

ಪಟ್ಟಣದ ಸುತ್ತಲಿನ 2 ಕಿ.ಮೀ. ವ್ಯಾಪ್ತಿಯಲ್ಲಿರುವ ತೆರೆದ ಬಾವಿಗಳಲ್ಲಿ ನೀರಿದ್ದರೆ ಅಲ್ಲಿಂದ ಪೈಪ್‌ಲೈನ್‌ ಮೂಲಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು. ಪ್ರತಿ ವಾರ್ಡ್‌ನಲ್ಲಿ ಕೊಳವೆಬಾವಿ ಕೊರೆಸಿರಿ. ಹೆಚ್ಚು ನೀರು ಬಿದ್ದರೆ ಮೊಟರ್‌ ಕೊಡಿಸಿ. ಅಲ್ಪಸ್ವಲ್ಪ ಬಿದ್ದರೆ ಕೈಪಂಪ್‌ ಕೊಡಿಸಿ. ಪಟ್ಟಣದಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸಂಗ್ರಹಿಸಿ ವಾರ್ಡ್‌ಗಳಿಗೆ ಸರಬರಾಜು ಮಾಡಿ. ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ಬೇಕಾಗಿರುವ ನೀರನ್ನು ಸಂಗ್ರಹಿಸಿ. ಸಂಗ್ರಹಿಸಲು ಟ್ಯಾಂಕರಗಳ ಸಂಖ್ಯೆ ಹೆಚ್ಚಿಸಿ. ನೀರಿನ ಸಮಸ್ಯೆ ಪರಿಹರಿಸಲು
ಹಣವಿದೆ. ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸಿ ಎಂದರು.

ತಹಶೀಲ್ದಾರ್‌ ಬಸವರಾಜ ಕಡಕಬಾವಿ ಮಾತನಾಡಿ, ಪಟ್ಟಣದಲ್ಲಿರುವ ತೆರೆದ ಮತ್ತು ಕೊಳವೆ ಬಾವಿಗಳ ಸ್ಥಿತಿಗತಿಯ ಬಗ್ಗೆ ವರದಿ ನೀಡಿ. ಅವಶ್ಯಕತೆಯಿದ್ದಲ್ಲಿ ತೆರೆದ ಬಾವಿಯಲ್ಲಿನ ತ್ಯಾಜ್ಯವನ್ನು ತೆಗೆದು ನೀರಿನ ಸೌಕರ್ಯ ಮಾಡೋಣ ಎಂದರು. 

Advertisement

ಗ್ರಾಮೀಣ ನೀರು ಸರಬರಜು ಇಲಾಖೆಯ ಎಇಇ ಸೂರ್ಯವಂಶಿ ಮಾತನಾಡಿ, ಕ್ಷೇತ್ರದ ಚಾಂದಕವಠೆ, ಹಿಕ್ಕಣಗುತ್ತಿ, ಬಬಲೇಶ್ವರ, ಕಲಹಳ್ಳಿ ಮತ್ತು ಸೋಮಜಾಳ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಅಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಚಿವರಿಗೆ ಮನವಿ ಸಲ್ಲಿಕೆ: ವಾರ್ಡ್‌ ನಂ.17ರಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಶೀಘ್ರದಲ್ಲಿ ನೀರು ಸರಬರಾಜು ಮಾಡಬೇಕು ಎಂದು ಸಭೆ ಮುಗಿದ ನಂತರ ಸಚಿವ ಎಂ.ಸಿ. ಮನಗೂಳಿ ಅವರಿಗೆ ವಾರ್ಡ್‌ನ ಮಹಿಳೆಯರು ಮನವಿ ಸಲ್ಲಿಸಿದರು.

ಪಟ್ಟಣದ ಜನಸಂಖ್ಯೆ 42 ಸಾವಿರಕ್ಕೂ ಹೆಚ್ಚಿದೆ. ಪ್ರತಿ ದಿನ 4 ಲಕ್ಷ ಲೀ. ನೀರು ಬೇಕಾಗುತ್ತದೆ. 23 ವಾರ್ಡ್‌ಗಳಲ್ಲಿ 99 ಕೊಳವೆಬಾವಿಗಳಿಗೆ, 17 ಕೈಪಂಪ್‌ಗಳಿವೆ. ಅಂತರ್ಜಲ ಕಡಿಮೆಯಾಗಿದ್ದ ಪರಿಣಾಮ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿವೆ. ಟ್ಯಾಂಕರ್‌ ಮೂಲಕ ನೀರು ಶುದ್ಧೀಕರಣ ಘಟಕದಲ್ಲಿ ಸಂಗ್ರಹಿಸಲಾಗುತ್ತಿದೆ. ಇಲ್ಲಿ ಸಂಗ್ರಹಿಸಿದ ನೀರನ್ನು ವಾರ್ಡ್‌ಗಳಿಗೆ ಬಿಡಲಾಗುತ್ತಿದೆ. ಈಗ 10 ಟ್ಯಾಂಕರ್‌ ಮೂಲಕ ನೀರು ಸಂಗ್ರಹಿಸಲಾಗುತ್ತಿದೆ. ವಾರ್ಡ್‌ ನಂ. 1, 3, 4, 7, 13 ವಾರ್ಡ್‌ಗಳಲ್ಲಿ ಕೊಳವೆ ಬಾವಿ ಕೊರೆಯಲಾಗಿದೆ. ಇನ್ನು ಎಲ್ಲಿ ಅವಶ್ಯಕತೆಯಿದೆ ಅಲ್ಲಿ ಕೊಳವೆಬಾವಿ ಕೊರೆಯಲಾಗುವುದು.
ಸೈಯದ್‌ಅಹ್ಮದ, ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next