Advertisement
ರಾಜ್ಯ ಬಾರ್ ಕೌನ್ಸಿಲ್‌ನ ಚುನಾಯಿತ ಸದಸ್ಯರಾಗಿರುವ ತಮ್ಮ ಹೆಸರನ್ನು ರಾಜ್ಯ ವಕ್ಫ್ ಮಂಡಳಿ ಚುನಾವಣೆಯ ಕರಡು ಮತದಾರರಪಟ್ಟಿ ಯಿಂದ ತೆಗೆದು ಹಾಕಿರುವುದನ್ನು ಪ್ರಶ್ನಿಸಿ ವಕೀಲ ಆಸೀಫ್ ಅಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನುನ್ಯಾ. ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿತು. ಈ ವೇಳೆ ವಕ್ಫ್ ಕಾಯ್ದೆ ಪ್ರಕಾರ ಚುನಾವಣೆಗೆ
ಪರಿಗಣಿಸಬೇಕಾದ ಕೆಟಗರಿಗಳಲ್ಲಿ ಒಬ್ಬರನ್ನು ಅಥವಾ ಇಬ್ಬರನ್ನು ಮೀರದಂತೆ ಸರ್ಕಾರ ಆಯ್ಕೆ ಮಾಡಬಹುದು ಎಂದಿದೆ. ಆದರೆ, ಸರ್ಕಾರ ಒಬ್ಬರನ್ನು ಆಯ್ಕೆ ಮಾಡುತ್ತೋ ಅಥವಾ ಇಬ್ಬರನ್ನೋ ಎನ್ನುವುದರ ಬಗ್ಗೆ ಖಚಿತ ನಿಲುವು ತಿಳಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ (ನ.23) ಮುಂದೂಡಿತು.