ಬಂಟ್ವಾಳ: ಬಿ.ಸಿ. ರೋಡ್ ಎಸ್‌ಬಿಐ, ಭೂ ಅಭಿವೃದ್ಧಿ ಬ್ಯಾಂಕ್, ಕೃಷಿ ಸಹಕಾರಿ ಬ್ಯಾಂಕ್ ಎದುರು ಮಳೆಗಾಲದಲ್ಲಿ ನೀರು ನಿಲ್ಲುವ ಮೂಲಕ ಯಾವುದೇ ಬ್ಯಾಂಕಿಗೆ ಹೋಗಲು ಸಾಧ್ಯವಿಲ್ಲದ ಸಮಸ್ಯೆಯನ್ನು ಗಮನಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಪುರಸಭೆ ಎಂಜಿನಿಯರ್ ಡೊಮೆನಿಕ್ ಡಿ’ಮೆಲ್ಲೊ ಅವರನ್ನು ಕರೆಸಿ ಸಮಸ್ಯೆಯ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಸಿಮೆಂಟ್ ಹಾಕಲು ಸೂಚನೆ ನೀಡಿದ್ದಲ್ಲದೆ, ಶೀಘ್ರವಾಗಿ ಕೆಲಸ ಮಾಡು ವಂತೆಯೂ ತಿಳಿಸಿದ್ದಾರೆ.
ಬಿ.ಸಿ. ರೋಡ್‌ನಿಂದ ಮಂಗಳೂರು ಕಡೆಗೆ ಪ್ರಯಾಣಿಸಲು ಪ್ರಯಾಣಿಕರು ನಿಲ್ಲುವ ಬಸ್ ಬೇ ಮತ್ತು ಇಲ್ಲಿನ ಬ್ಯಾಂಕ್‌ಗಳ ಎದುರು ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನಿಂತು ಬಹಳಷ್ಟು ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದರು.ಕಳೆದ ಮಳೆಗಾಲದ ವೇಳೆ ಇಲ್ಲಿ ನೀರು ನಿಂತು ಸಾರ್ವಜನಿಕರು, ಪ್ರಯಾಣಿಕರು ಅನೇಕ ತೊಂದರೆ ಅನುಭವಿಸಿದ್ದರು. ಈ ಬಾರಿ ಸಮಸ್ಯೆ ಪರಿಹರಿಸದಿದ್ದರೆ ನಿರಂತರ ಧರಣಿ ಸತ್ಯಾಗ್ರಹ ನಡೆಸುವುದಾಗಿ ಟೂರಿಸ್ಟ್ ಕಾರು ಚಾಲಕರ ಸಂಘಟನೆ ಎಚ್ಚರಿತ್ತು.
ಎ.ಸಿ. ರವಿಚಂದ್ರ ನಾಯಕ್, ಪುರಸಭಾ ಮುಖ್ಯಾಧಿಕಾರಿ ಮೇಬಲ್ ಡಿ’ಸೋಜಾ, ಬಂಟ್ವಾಳ ಎ.ಎಸ್.ಪಿ. ಸೈದುಲು ಅಡಾವತ್, ಬಂಟ್ವಾಳ ನಗರ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಚಂದ್ರಶೇಖರ್, ಬಿಜೆಪಿ ಪ್ರಮುಖರಾದ ದೇವದಾಸ್ ಶೆಟ್ಟಿ, ಗೋವಿಂದ ಪ್ರಭು, ಜನಾರ್ದನ ಬೊಂಡಾಲ, ಸುರೇಶ್ ಕುಲಾಲ್, ಪವನ್, ಮಂಜು, ರಮಾನಾಥ ರಾಯಿ, ಮನೋಜ್ ಮತ್ತಿತರರು ಉಪಸ್ಥಿತರಿದ್ದರು.