Advertisement
ಎಸ್‌ಐಟಿ ಅಧಿಕಾರಿಗಳು 8 ಸಂತ್ರಸ್ತೆಯರನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಪೈಕಿ ಮೂವರು ಸಂತ್ರಸ್ತೆಯರು ತಮಗಾದ ಅನ್ಯಾಯದ ವಿರುದ್ಧ ದೂರು ನೀಡುವ ಚಿಂತನೆಯಲ್ಲಿದ್ದಾರೆ. ಆದರೆ ಇನ್ನೂ ದೂರು ನೀಡಿಲ್ಲ. ಕೆಲವು ಸಂತ್ರಸ್ತೆಯರಿಂದ ಗೌಪ್ಯವಾಗಿ ಹೇಳಿಕೆ ದಾಖಲಿಸಲು ಎಸ್‌ಐಟಿ ಮುಂದಾಗಿದ್ದು, ಇನ್ನಷ್ಟು ಎಫ್ಐಆರ್ ದಾಖಲಾಗುವ ಸಾಧ್ಯತೆಗಳಿವೆ.
Related Articles
ಬೆಂಗಳೂರು: ಅಶ್ಲೀಲ ವೀಡಿಯೋಗಳಲ್ಲಿ ಇದ್ದಾರೆ ಎನ್ನಲಾದ ಸಂತ್ರಸ್ತೆಯರು ಹಾಗೂ ಬಾತ್ಮೀದಾರರ ನೆರವಿಗಾಗಿ ಎಸ್‌ಐಟಿ ಸಹಾಯವಾಣಿ 6360938947 ತೆರೆದಿದ್ದು, ಸಂತ್ರಸ್ತೆಯರು ತಮಗಾದ ಅನ್ಯಾಯದ ಬಗ್ಗೆ ಹೇಳಿಕೊಂಡರೆ ಅವರ ಮಾಹಿತಿಯನ್ನು ಗೌಪ್ಯ ವಾಗಿಡುವುದಾಗಿ ತಿಳಿಸಿದೆ. ಜತೆಗೆ ಕಾನೂನಿನ ನೆರವು ಮತ್ತು ರಕ್ಷಣೆಯನ್ನೂ ನೀಡುವುದಾಗಿ ಪತ್ರಿಕಾ ಪ್ರಕಟನೆಯಲ್ಲಿ ಎಸ್‌ಐಟಿ ಹೇಳಿದೆ.
Advertisement