Advertisement

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

09:43 AM Nov 15, 2024 | Team Udayavani |

ಹೈದರಾಬಾದ್: ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ಅವರು ತಮ್ಮ ದಿಲ್-ಲುಮಿನಾಟಿ ಸಂಗೀತ ಕಚೇರಿಯ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಅವರ ಸಂಗೀತ ಕಚೇರಿಗಳ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ಇದರೊಂದಿಗೆ ದಿಲ್ಜಿತ್ ದೋಸಾಂಜ್ ಅವರಿಗೆ ಎಷ್ಟೊಂದು ಅಭಿಮಾನಿಗಳು ಇದ್ದಾರೆ ಎಂಬುದನ್ನು ಕಾಣಬಹುದು. ಏತನ್ಮಧ್ಯೆ, ಅವರ ಮುಂದಿನ ಸಂಗೀತ ಕಚೇರಿ ಇಂದು ಅಂದರೆ ನವೆಂಬರ್ 15 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ, ಅದರ ಬಗ್ಗೆ ಅವರ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಆದರೆ, ಈ ಸಂಗೀತ ಕಾರ್ಯಕ್ರಮಕ್ಕೂ ಮುನ್ನವೇ ತೆಲಂಗಾಣ ಸರ್ಕಾರ ಗಾಯಕನಿಗೆ ನೋಟಿಸ್ ಜಾರಿ ಮಾಡಿದೆ.

Advertisement

ತೆಲಂಗಾಣ ಸರ್ಕಾರ ದಿಲ್ಜಿತ್ ದೋಸಾಂಜ್ ಅವರಿಗೆ ನೀಡಿದ ನೋಟಿಸ್ ನಲ್ಲಿ ದಿಲ್ಜಿತ್ ಅವರ ಮೂರು ಹಾಡುಗಳನ್ನು ನಿಷೇಧಿಸಿದೆ. ಅವರ ತಂಡ ಮತ್ತು ಹೋಟೆಲ್ ನೊವೊಟೆಲ್‌ಗೆ ರಾಜ್ಯ ಸರ್ಕಾರ ಈ ಸೂಚನೆ ನೀಡಿದ್ದು. ಮದ್ಯ, ಮಾದಕ ದ್ರವ್ಯ ಅಥವಾ ಹಿಂಸೆಯನ್ನು ಉತ್ತೇಜಿಸುವ ಯಾವುದೇ ಹಾಡುಗಳನ್ನು ಹಾಡಬಾರದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ದೆಹಲಿಯಲ್ಲಿ ನಡೆದ ದಿಲ್ಜಿತ್ ಅವರ ಕೊನೆಯ ಸಂಗೀತ ಕಚೇರಿಯಲ್ಲಿ ಇಂತಹ ವಿಷಯಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೇ ಮಕ್ಕಳನ್ನು ವೇದಿಕೆ ಮೇಲೆ ಕರೆತರದಂತೆ ಹಾಗೂ ಹೆಚ್ಚು ಸದ್ದು ಮಾಡದಂತೆ ಸೂಚನೆಗಳನ್ನು ನೀಡಲಾಗಿದ್ದು, ಯುವ ಪ್ರೇಕ್ಷಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಮಾಧ್ಯಮಗಳ ವರದಿಗಳ ಪ್ರಕಾರ, ತೆಲಂಗಾಣದ ಜಿಲ್ಲಾ ಕಲ್ಯಾಣ ಅಧಿಕಾರಿ ದಿಲ್ಜಿತ್ ದೋಸಾಂಜ್ ಅವರಿಗೆ ಕಳುಹಿಸಲಾದ ನೋಟಿಸ್‌ನಲ್ಲಿ ‘ಪಟಿಯಾಲ ಪೆಗ್,’ ‘ಪಂಜ್ ತಾರಾ,’ ಮತ್ತು ‘ಕೇಸ್’ ಈ ಮೂರೂ ಹಾಡುಗಳನ್ನು ಹಾಡದಂತೆ ನೋಟಿಸ್ ನೀಡಿದೆ. ನವದೆಹಲಿಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಮಕ್ಕಳನ್ನು ವೇದಿಕೆ ಮೇಲೆ ಕರೆಸಿದ ಕುರಿತು ಚಂಡೀಗಢ ನಿವಾಸಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು ಮಕ್ಕಳನ್ನು ಸಂಗೀತ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕರೆಯುವುದು ಸರಿಯಲ್ಲ ಅಲ್ಲದೆ ಮಾದಕ ದ್ರವ್ಯ ಉತ್ತೇಜಿಸುವ ಹಾಡುಗಳನ್ನು ಮಕ್ಕಳ ಮುಂದೆ ಹಾಡುವುದು ಸರಿಯಾದ ಕ್ರಮವಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು ಅದರಂತೆ ತೆಲಂಗಾಣ ಸರಕಾರ ಇಂದು ನಡೆಯುವ ಸಂಗೀತ ಕಾರ್ಯಕ್ರಮಕ್ಕೂ ಮೊದಲು ದಿಲ್ಜಿತ್ ದೋಸಾಂಜ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

Advertisement

Udayavani is now on Telegram. Click here to join our channel and stay updated with the latest news.

Next