Advertisement
ಕೊಳಕಾದ, ಹರಿದ, ನೋಟಿನ ಮೇಲೇ ಲೆಕ್ಕ-ಪತ್ರ ಬರೆದಿಟ್ಟ, ಸುಟ್ಟ,ಎಣ್ಣೆ ಬಿದ್ದ ನೋಟುಗಳೇನಾದರೂ ನಿಮ್ಮ ಕೈಗೆ ಬಂದರೆ… ಮುಖ ಕಿವುಚುವಂತಾಗುತ್ತದೆ. ಅಂಗಡಿಯವರಾಗಲಿ, ಜನಸಾಮಾನ್ಯರಾಗಲಿ ಅಂತಹ ನೋಟುಗಳನ್ನು ಸ್ವೀಕರಿಸುವುದಿಲ್ಲ. ಇದು ನೋಟುಗಳಿಗೆ ಮಾತ್ರವಲ್ಲ, ನಾಣ್ಯಗಳಿಗೂ ಇಂಥ ಸಂಕಷ್ಟವಾಗಿದೆ.
Related Articles
Advertisement
1)ಕೊಳಕಾದ ನೋಟು ಮತ್ತು ಒಂದೇ ನೋಟಿನ ಎರಡು ಭಾಗಗಳನ್ನು ಅಂಟಿಸಿರುವ ನೋಟು (ಸಾಯಿಲ… ನೋಟ್ಸ್),2) ಎರಡಕ್ಕಿಂತ ಹೆಚ್ಚು ಭಾಗಗಳಾಗಿ ಹರಿದ ನೋಟು (ಮ್ಯುಟಿಲೇಟೆಡ್ ನೋಟ್ಸ್) 3) ಹೊಸ ಮತ್ತು ವಿತರಣಾ ನೋಟು ಈ ರೀತಿ ವಿಂಗಡಿಸಿ, ಹೊಸ ಮತ್ತು ವಿತರಣಾ ನೋಟುಗಳನ್ನು ಮಾತ್ರ ಗ್ರಾಹಕರಿಗೆ ಕೊಡಬೇಕು. ಉಳಿದ ಎರಡು ಬಗೆಯ ನೋಟುಗಳನ್ನು ತಮಗೆ ಸಂಬಂದಿಸಿದ ಕರೆನ್ಸಿ ಚೆಸ್ಟುಗಳ ಮೂಲಕ ವಾಪಸ್ಸು ರಿಜರ್ವ್ ಬ್ಯಾಂಕಿಗೆ ಕಳುಹಿಸಲಾಗುತ್ತದೆ. ಹೀಗೆ ವಾಪಸ್ ಬಂದ ನೋಟುಗಳನ್ನು ರಿಜರ್ವ್ ಬ್ಯಾಂಕು ತನಗೆ ವಾಪಸ್ಸು ಬಂದ ನೋಟುಗಳನ್ನು ನಾಶಮಾಡುತ್ತದೆ. ಕೆಲವು ಬ್ಯಾಂಕುಗಳು ಸಣ್ಣ ಸಣ್ಣ ಮೌಲ್ಯದ ನೋಟುಗಳನ್ನು ಬ್ಯಾಂಕಿಗೆ ಜಮೆ ಮಾಡಲು ತಂದಾಗ ಸ್ವೀಕರಿಸಲು ನಿರಾಕರಿಸುತ್ತವೆ. ದೊಡ್ಡ ಮೌಲ್ಯದ ನೋಟುಗಳನ್ನೇ ನೀಡುವಂತೆ ತಿಳಿಸುತ್ತವೆ. ಜೊತೆಗೆ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸುತ್ತವೆ. ಗೊತ್ತಿರಲಿ, ಆರ್‌ಬಿಐ ಬ್ಯಾಂಕಿನ ನಿಯಮಗಳ ಪ್ರಕಾರ, ಬ್ಯಾಂಕುಗಳು ಇಂತಹ ಸಣ್ಣ ಮೊತ್ತದ ನೋಟುಗಳನ್ನು, ನಾಣ್ಯಗಳನ್ನು ನಿರಾಕರಿಸುವಂತಿಲ್ಲ. ಎಲ್ಲಾ ಬ್ಯಾಂಕುಗಳ ಎಲ್ಲಾ ಶಾಖೆಗಳೂ(ಕೋ ಆಪರೇಟಿವ್ ಬ್ಯಾಂಕ್‌ಗಳು,ಗ್ರಾಮೀಣ ಬ್ಯಾಂಕ್‌ಗಳು ಸೇರಿ) ಸಾರ್ವಜನಿಕರು ಕೊಳಕಾದ, ಹರಿದ ನೋಟುಗಳನ್ನು ಹಾಗೂ ನಾಣ್ಯಗಳನ್ನೂ ಬದಲಾವಣೆ ಮಾಡಿಕೊಡುವಂತೆ ಕೇಳಿದಲ್ಲಿ, ಅದನ್ನು ನಿರಾಕರಿಸದೇ ಬದಲಾಯಿಸಿಕೊಡಬೇಕು. ಆದರೆ, ನಾಣ್ಯಗಳನ್ನು ಹೆಚ್ಚಿನ ಮೊತ್ತದಲ್ಲಿ ಸ್ವೀಕರಿಸಲು ಅಥವಾ ವಿನಿಮಯ ಮಾಡಿಕೊಡಲು ಬ್ಯಾಂಕು ನಿರಾಕರಿಸಬಹುದು. ಒಂದು ರೂಪಾಯಿ ನಾಣ್ಯಗಳನ್ನು ಗರಿಷ್ಠ ಒಂದು ಸಾವಿರ, ಐವತ್ತು ಪೈಸೆ ನಾಣ್ಯವನ್ನು ಗರಿಷ್ಠ ಹತ್ತು ರೂಪಾಯಿಗಳಷ್ಟನ್ನು ಸ್ವೀಕರಿಸಬಹುದು. ಆದರೆ ಸುಟ್ಟ, ಕರುಕಲಾದ, ಎಣ್ಣೆ ಮೆತ್ತಿದ, ನೋಟಿನ ಗುಣಲಕ್ಷಣಗಳನ್ನು ಗುರುತಿಸಲಾಗದ ನೋಟುಗಳನ್ನು ಬ್ಯಾಂಕುಗಳು ಬದಲಾಯಿಸುವಂತಿಲ್ಲ. ಅವನ್ನು ರಿಸರ್ವ್ ಬ್ಯಾಂಕಿನ ಶಾಖೆಗಳಲ್ಲಿ ಮಾತ್ರ ಬದಲಾಯಿಸಿಕೊಳ್ಳಬಹುದು. ಎಷ್ಟು ನೋಟುಗಳನ್ನು ಬದಲಾಯಿಸಿಕೊಳ್ಳಬಹುದು?
ಒಬ್ಬರು ಒಂದು ದಿನಕ್ಕೆ 20 ಸಾಯಿಲ… ನೋಟುಗಳನ್ನು, ಗರಿಷ್ಠ 2000ರೂ. ವರೆಗಿನ ಮೊತ್ತದಷ್ಟು, ಮ್ಯುಟಿಲೇಟೆಡ್ ನೋಟುಗಳಾದಲ್ಲಿ ದಿನವೊಂದಕ್ಕೆ 5 ನೋಟುಗಳು ಗರಿಷ್ಠ ಮೊತ್ತ ರೂ.5,000 ರವರೆಗೆ ಬದಲಾಯಿಸಿಕೊಳ್ಳಬಹುದು. ಈ ಬಗೆಯ ನೋಟುಗಳನ್ನು ಹೆಚ್ಚಿನ ಮೊತ್ತದಲ್ಲಿ ಬದಲಾಯಿಸಿಕೊಳ್ಳುವುದಿದ್ದಲ್ಲಿ, ಬ್ಯಾಂಕು ಅವರಿಗೆ ಹಣ ಸ್ವೀಕರಿಸಿದ್ದಕ್ಕೆ ಸ್ವೀಕೃತಿ ನೀಡಿ 30 ದಿನಗಳಲ್ಲಿ ಅವರ ಖಾತೆಗೆ ಹಣ ಹಾಕಬೇಕು ಅಥವಾ ಹತ್ತಿರದ ಕರೆನ್ಸಿ ಚೆಸ್ಟಿಗೆ ಕಳುಹಿಸಿಕೊಡಬೇಕು. ಒಂದೊಮ್ಮೆ ಹೆಚ್ಚಿನ ನೋಟುಗಳನ್ನು ಬದಲಾಯಿಸಿದಲ್ಲಿ ಅದಕ್ಕೆ ಹೆಚ್ಚಿನ ಶುಲ್ಕವನ್ನು ಪಡೆಯುವ ಅಧಿಕಾರವನ್ನು ಆಯಾ ಬ್ಯಾಂಕ್‌ಗಳಿಗೆ ನೀಡಲಾಗಿದೆ. ಇದಲ್ಲದೇ ನೀವು ನೀಡಿರುವ ಹರಿದ ನೋಟುಗಳಲ್ಲಿ ಕೆಲವೊಂದು ಭಾಗವೇ ಇಲ್ಲದಿದ್ದಲ್ಲಿ ಅದಕ್ಕೂ ಶೇಕಡ ಎಷ್ಟು ಭಾಗವಿದೆ ಎಂಬ ಆಧಾರದಲ್ಲಿ ಕರೆನ್ಸಿ ಚೆಸ್ಟು ಬ್ಯಾಂಕ್‌ಗಳು ಹಾಗೂ ಆರ್‌ಬಿಐ ಅದರ ಮೌಲ್ಯವನ್ನು ನಿರ್ಧರಿಸಿ ವಿನಿಮಯ ಮಾಡಿಕೊಡುತ್ತವೆ. ಸ್ಲೋಗನ್ ಇರುವಂತಿಲ್ಲ…
ನೋಟುಗಳ ಮೇಲೆ ರಾಜಕೀಯ ಪಕ್ಷಗಳ ಸ್ಲೋಗನ್ನುಗಳನ್ನು ಬರೆದಲ್ಲಿ, ನೋಟುಗಳ ಗುಣ ಲಕ್ಷಣಗಳು ಹಾಳಾಗುವಂತೆ ಗೀಚಿದ್ದಲ್ಲಿ, ಕತ್ತರಿಯಿಂದ ಕತ್ತರಿಸಿದ್ದು ಉದ್ದೇಶಪೂರ್ವಕವಾಗಿ ಹರಿದಿದ್ದಲ್ಲಿ ಅಂತಹ ನೋಟುಗಳನ್ನು ಬದಲಾಯಿಸಲು ಹಾಗೂ ಸ್ವೀಕರಿಸಲು ಬರುವುದಿಲ್ಲ. ಯಾರಾದರೂ ಹೀಗೆ ಮಾಡಿದ ಹೆಚ್ಚಿನ ನೋಟುಗಳನ್ನು ಬದಲಾಯಿಸುವಂತೆ ತಂದಲ್ಲಿ ಅವರ ಮೇಲೆ ಪೊಲೀಸಿಗೆ ದೂರು ನೀಡುವುದಲ್ಲದೇ, ಆರ್‌ಬಿಐಗೆ ವರದಿ ಸಲ್ಲಿಸಬೇಕು ಎನ್ನುವ ಕಾನೂನೂ ಜಾರಿಯಲ್ಲಿದೆ. ರಾಮಸ್ವಾಮಿ ಕಳಸವಳ್ಳಿ