Advertisement

ಹುಲಿಕೇರಿ ಕೆರೆ ಅಭಿವೃದ್ಧಿ ಕ್ರಿಯಾಯೋಜನೆಗೆ ಸೂಚನೆ

08:56 AM Jun 04, 2019 | Team Udayavani |

ಅಳ್ನಾವರ: ತಾಲೂಕಿನ ಹುಲಿಕೇರಿ ಗ್ರಾಮದ ಕೆರೆಯನ್ನು ಸಮಗ್ರ ಅಭಿವೃದ್ಧಿ ಪಡಿಸಲು ಅಗತ್ಯ ಕ್ರಿಯಾಯೋಜನೆ ತಯಾರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ

Advertisement

ಕೆರೆ ವ್ಯಾಪ್ತಿಯ ಗ್ರಾಮಗಳ ರೈತರು ಸಚಿವರನ್ನು ಧಾರವಾಡದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ, ಕೆರೆಯಲ್ಲಿ ನೀರಿದ್ದರೂ ಜಮೀನುಗಳಿಗೆ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಬರಗಾಲದಂತೆ ಬೆಳೆಗಳು ಹಾಳಾಗುತ್ತಿವೆ. ಕಾಲುವೆಗಳನ್ನು ಸುಧಾರಣೆ ಮಾಡಿದರೆ ಹೊಲಗಳಿಗೆ ನೀರು ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಸ್ಥಳದಲ್ಲಿಯೇ ಇದ್ದ ನೀರಾವರಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಹಿಂದೆ 4.5 ಕೊಟಿ ವೆಚ್ಚದ ಕಾಮಗಾರಿ ಬಗ್ಗೆ ಸರ್ಕಾರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆ ಕೈಬಿಟ್ಟು ಸದ್ಯದ ಪರಿಸ್ಥಿತಿಯಂತೆ ಅಗತ್ಯವಿರುವ ಕಾಮಗಾರಿ ಕೈಕೊಳ್ಳಲು ಏಳರಿಂದ ಎಂಟು ಕೋಟಿ ಮೊತ್ತದ ಕ್ರಿಯಾಯೋಜನೆ ತಯಾರಿಸುವಂತೆ ಹೇಳಿದರು. ತುರ್ತಾಗಿ ಹೊಲಗಳಿಗೆ ನೀರು ಪಡೆಯಲು ಕಾಲುವೆಗಳನ್ನು ಸ್ವಚ್ಛಗೊಳಿಸಿ ರೈತರಿಗೆ ಅನೂಕೂಲ ಮಾಡಿಕೊಡಬೇಕು. ಒಂದು ವಾರದಲ್ಲಿ ಕೆಲಸವನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.

ಅಜ್ಜಪ್ಪ ಕುರುಬರ, ಯಲ್ಲಪ್ಪ ಕುರುಬರ, ಅನ್ವರಖಾನ ಬಾಗೇವಾಡಿ, ಸತ್ತಾರ ಬಾತಖಂಡೆ ಹಾಗೂ ಕಡಬಗಟ್ಟಿ ಗ್ರಾಮದ ರೈತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next