Advertisement
ಲಂಡನ್ ಮೂಲದ ತಂತ್ರಜ್ಞಾನ ಕಂಪನಿ ನಥಿಂಗ್ ನ ಉಪ-ಬ್ರಾಂಡ್ ಆದ CMF ತನ್ನ ಚೊಚ್ಚಲ ಸ್ಮಾರ್ಟ್ ಫೋನ್ ಮಾರಾಟದ ಮೊದಲ ದಿನವೇ ಭರ್ಜರಿ ಸೇಲ್ ಮಾಡಿದೆ!
Related Articles
Advertisement
ನಥಿಂಗ್ ಫೋನ್ (2ಎ) ಬಿಡುಗಡೆಯಾಗಿದ್ದಾಗ 24 ಗಂಟೆ ಅವಧಿಯಲ್ಲಿ 1 ಲಕ್ಷ ಫೋನ್ ಮಾರಾಟವಾಗಿದ್ದವು. ಈ ಫೋನು ಆ ಸಾಧನೆಯನ್ನು ಮೂರೇ ಗಂಟೆಯಲ್ಲಿ ಮಾಡಿರುವುದು ವಿಶೇಷ.
ಈ ಪರಿಯ ವೇಗದ ಮಾರಾಟಕ್ಕೆ ಕಾರಣ, ಅದರ ಸ್ಪೆಸಿಫಿಕೇಷನ್ ಗೆ ಹೋಲಿಸಿದರೆ ಅದರ ದರ ಕೈಗೆಟುಕುವಂತಿರುವುದು. ಇದರ ದರ 6 ಜಿಬಿ 128 ಜಿಬಿಗೆ 15999 ರೂ. 8 ಜಿಬಿ 128 ಜಿಬಿಗೆ 17,999 ರೂ. ಇದೆ. ಮೊದಲ ದಿನ 1 ಸಾವಿರ ರೂ. ರಿಯಾಯಿತಿ ಸಹ ಇತ್ತು.
ಈ ದರಕ್ಕೆ ಈ ಫೋನಿನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7300 5G ಪ್ರೊಸೆಸರ್ಇದ್ದು, ಈ ಪ್ರೊಸೆಸರ್ ಹೊಂದಿರುವ ಭಾರತದ ಮೊದಲ ಫೋನ್ ಆಗಿದೆ. 16 GB ವರೆಗಿನ RAM ವಿಸ್ತರಿಸಬಹುದು. ಈ ಪ್ರೊಸೆಸರ್ ನಥಿಂಗ್ನೊಂದಿಗೆ ಸಹ-ಇಂಜಿನಿಯರಿಂಗ್ ಆಗಿದೆ. 5000 mAh ಬ್ಯಾಟರಿ ಹೊಂದಿದ್ದು, 33 ವಾಟ್ಸ್ ವೇಗದ ಚಾರ್ಜಿಂಗ್ ಸೌಲಭ್ಯ ಇದೆ.
ಸೋನಿ 50 MP ಮುಖ್ಯ ಕ್ಯಾಮೆರಾ ಹೊಂದಿದ್ದು,2 ಮೆಪಿ ಡೆಪ್ತ್ ಸೆನ್ಸರ್ ಇದೆ.16 ಮೆ.ಪಿ. ಮುಂಭಾಗದ ಕ್ಯಾಮರಾ ಒಳಗೊಂಡಿದೆ. 15 ಸಾವಿರ ರೂ. ರೇಂಜಿನಲ್ಲಿ 6.67 ಇಂಚಿನ LTPS ಸೂಪರ್ AMOLED ಪರದೆ ಹಾಕಿರುವುದು ವಿಶೇಷ. ಅಲ್ಟ್ರಾ-ಸ್ಮೂತ್ 120 Hz ಅಡಾಪ್ಟಿವ್ ರಿಫ್ರೆಶ್ ರೇಟ್ ಸಹ ಹೊಂದಿದೆ. ಕಪ್ಪು, ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣದ ಆಕರ್ಷಕ ವಿನ್ಯಾಸ ಹೊಂದಿದ್ದು, ಈ ಕೇಸ್ ಗಳನ್ನು ಬದಲಾಯಿಸುವ ಆಯ್ಕೆಯನ್ನೂ ನೀಡಲಾಗಿದೆ.