Advertisement

ನ. 10 ರಿಂದ ದುಬಾರಿಯಾಗಲಿದೆ ನಥಿಂಗ್‍ ಇಯರ್ (1)

05:18 PM Nov 06, 2021 | Team Udayavani |

ನವದೆಹಲಿ: ಒನ್‍ ಪ್ಲಸ್‍ ಕಂಪೆನಿಯ ಮಾಜಿ ಸಹ ಸ್ಥಾಪಕ ಕಾರ್ಲ್‍ ಪೇ ಸ್ಥಾಪಿಸಿರುವ ನೂತನ ಕಂಪೆನಿ ನಥಿಂಗ್‍ ಹೊರತಂದಿರುವ,  ಬಜೆಟ್‍ ದರದಲ್ಲಿ ಪ್ರೀಮಿಯಂ ಫೀಚರ್‍ ಗಳನ್ನುಳ್ಳ  ನಥಿಂಗ್‍ ಇಯರ್(1) ಹೆಸರಿನ ಇಯರ್ ಬಡ್‍ ಅನ್ನು ಕೊಳ್ಳುವ ಯೋಜನೆ ನಿಮ್ಮದಾಗಿದ್ದರೆ ನವೆಂಬರ್‍ 10 ರೊಳಗೆ ಖರೀದಿಸಿ! ಯಾಕೆ ಗೊತ್ತಾ? ನ. 10ರಿಂದ ಅದರ ದರ ಏರಿಕೆಯಾಗಲಿದೆ!

Advertisement

ಹೌದು!  ಕೆಲವು ಬಿಡಿಭಾಗಗಳ ದರ ಏರಿಕೆಯಾಗಿರುವುದರಿಂದ  ಈ ನಥಿಂಗ್ ಇಯರ್ ಬಡ್‍ನ  ಬೆಲೆಯನ್ನು ಏರಿಸುವುದು ಅನಿವಾರ್ಯವಾಗಿದೆ ಎಂದು ನಥಿಂಗ್‍ ಟೀಮ್‍ ತಿಳಿಸಿದೆ.

ಪ್ರಸ್ತುತ ಭಾರತದಲ್ಲಿ ನಥಿಂಗ್‍ ಇಯರ್ (1) ಫ್ಲಿಪ್‍ ಕಾರ್ಟ್ ನಲ್ಲಿ ಮಾತ್ರ ಲಭ್ಯವಿದೆ. ಪ್ರಸ್ತುತ ಅದರ ಮಾರಾಟ ದರ 5,999 ರೂ. ಆಗಿದ್ದು, ಈಗ ದೀಪಾವಳಿ ಆಫರ್ ಇರುವುದರಿಂದ 5,500 ರೂ. ಗೆ ಲಭ್ಯವಿದೆ.

ಬರುವ ನವೆಂಬರ್  10 ರಿಂದ ಅದರ ದರ 6,999 ರೂ. ಆಗಲಿದೆ! ಅಂದರೆ ಬರೋಬ್ಬರಿ 1 ಸಾವಿರ ರೂ. ದರ ಹೆಚ್ಚಳವಾಗುತ್ತಿದೆ! ಆದಾಗ್ಯೂ ಈ ದರ ಅಂತಾರಾಷ್ಟ್ರೀಯ ಮಾರುಕಟ್ಟೆ ದರಕ್ಕಿಂತ ಕಡಿಮೆ ಇದೆ ಎಂದು ಕಂಪೆನಿ ತಿಳಿಸಿದೆ.

ನಥಿಂಗ್‍ ಇಯರ್‍ (1) ಪಾರದರ್ಶಕ ವಿನ್ಯಾಸ ಹಾಗೂ ಪ್ರೀಮಿಯಮ್‌ ಬಳಕೆಯ ಅನುಭವ ನೀಡುವ, ಟ್ರೂ ವೈರ್‌ಲೆಸ್‌ ಇಯರ್‌ಬಡ್‌ ಆಗಿದೆ.  ಕೇಸ್‌ 34 ಗಂಟೆಗಳ ಬ್ಯಾಟರಿ ಹೊಂದಿದೆ ಇದರ ಶಕ್ತಿಶಾಲಿ 11.6 ಎಂಎಂ ಡ್ರೈವರ್‌ ಮತ್ತು ಆಕ್ಟೀವ್‍ ನಾಯ್ಸ್ ಕ್ಯಾನ್ಸಲೇಷನ್‍ ಹೊಂದಿದೆ. ಈ ಫೀಚರ್‍ ಗಳುಳ್ಳ ಪ್ರತಿಸ್ಪರ್ಧಿ ಕಂಪೆನಿಗಳ ಇಯರ್ ಬಡ್‍ಗಳ ದರ 10 ಸಾವಿರ ರೂ. ನಿಂದ 20 ಸಾವಿರದವರಗೂ ಇದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next