Advertisement

ನೋಟು ಅಮಾನ್ಯ ತೆರಿಗೆ ಅಪರಾಧ ಪತ್ತೆ

12:03 AM Apr 01, 2019 | Team Udayavani |

ಹೊಸದಿಲ್ಲಿ: ನರೇಂದ್ರ ಮೋದಿ ಸರಕಾರ ಕೈಗೊಂಡಿದ್ದ ನೋಟು ಅಮಾನ್ಯದಿಂದಾಗಿ 14 ಲಕ್ಷ ಅನುಮಾನಾಸ್ಪದ ವಹಿವಾಟುಗಳ ವರದಿಯಾಗಿದ್ದು, ಇದು ದೇಶದ ಇತಿಹಾಸದಲ್ಲೇ ಅತಿ ಹೆಚ್ಚಿನದಾಗಿದೆ ಎಂದು ಹಣಕಾಸು ವಿಚಕ್ಷಣಾ ದಳ (ಎಫ್ಐಯು) ವರದಿ ಮಾಡಿದೆ.

Advertisement

ಖೋಟಾನೋಟು ಬ್ಯಾಂಕ್‌ಗೆ ಬಂದಿರುವುದು ಸೇರಿದಂತೆ ಹಲವು ರೀತಿಯ ಪ್ರಕರಣಗಳು 2017-18ರ ವಿತ್ತ ವರ್ಷದಲ್ಲಿ ದಾಖಲಾಗಿವೆ. ದಶಕದ ಹಿಂದೆ ಎಫ್ಐಯು ಆರಂಭವಾದಾಗಿನಿಂದ ಈ ಮಟ್ಟದ ಅನುಮಾನಾಸ್ಪದ ವಹಿವಾಟುಗಳು ವರದಿಯಾಗಿರಲಿಲ್ಲ. ನೋಟು ಅಮಾನ್ಯ ಘೋಷಣೆಗೂ ಮುನ್ನ ವರದಿಯಾದ ಪ್ರಕರಣಗಳಿಗೆ ಹೋಲಿಸಿದರೆ ಇದು 14 ಪಟ್ಟು ಹೆಚ್ಚಿನದಾಗಿದೆ. 2015-16 ರಲ್ಲಿ ಕೇವಲ 1 ಲಕ್ಷ ಇಂತಹ ಪ್ರಕರಣಗಳು ವರದಿಯಾಗಿದ್ದವು.

2018 ನವೆಂಬರ್‌ 8 ರಂದು ನೋಟು ಅಮಾನ್ಯ ಘೋಷಣೆ ಯಾದ ನಂತರದಲ್ಲಿ ಭಾರಿ ಮೊತ್ತ ನಗದು ಬ್ಯಾಂಕ್‌ನಲ್ಲಿ ಜಮೆಯಾಗಿದೆ. ಕೇಂದ್ರ ಹಣಕಾಸು ಸಚಿವಾಲಯದ ಅಡಿಯಲ್ಲಿ ರುವ ಈ ಎಫ್ಐಯು ಹಣಕಾಸು ಅವ್ಯವಹಾರ, ಉಗ್ರರಿಗೆ ಹಣಕಾಸಿನ ನೆರವು ಹಾಗೂ ಇತರ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡುತ್ತದೆ ಮತ್ತು ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳು ಯಾವುದೇ ಅನುಮಾನಾಸ್ಪದ ವಹಿವಾಟುಗಳನ್ನು ಎಫ್ಐಯುಗೆ ವರದಿ ಮಾಡುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next