Advertisement
ತಾಲೂಕು ಆಸ್ಪತ್ರೆಗಳು ಆರಂಭವಾಗಿ ಹಲವಾರುವರ್ಷಗಳಾದರೂ ವೆಂಟಿಲೇಟರ್ ಹಾಗೂ ಆಕ್ಸಿಜನ್‌ಹಾಸಿಗೆಗಳಿಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದವು. ಕಳೆದಬಾರಿ ಕೊರೊನಾ ಅಬ್ಬರದ ಸಂದರ್ಭದಲ್ಲಿ ಜಿಲ್ಲಾಡಳಿತಗ್ರಾಮೀಣ ಪ್ರದೇಶದ ಸೋಂಕಿತರಿಗೆ ಅನುಕೂಲಮಾಡಿಕೊಡುವ ದೃಷ್ಟಿಯಿಂದ ತಾಲೂಕಿನ ಎಲ್ಲಆಸ್ಪತ್ರೆಗಳಿಗೂ ತಲಾ 04ರಿಂದ 06 ವೆಂಟಿಲೇಟರ್‌ಅಳವಡಿಸಿತ್ತು.
Related Articles
Advertisement
ಹೆಚ್ಚಿದ ಒತ್ತಡ: ವೆಂಟಿಲೇಟರ್ ಅಗತ್ಯವಿರುವರೋಗಿಗಳು ತಾಲೂಕು ಆಸ್ಪತ್ರೆಗೆ ಹೋದರೂ, ಅವರಿಗೆವೆಂಟಿಲೇಟರ್ ಬೆಡ್‌ಗಳಿಲ್ಲ ಎಂದು ಸಬೂಬು ಹೇಳಿಮೈಸೂರು ನಗರಕ್ಕೆ ಕಳುಹಿಸುತ್ತಿರುವುದರಿಂದ ತುರ್ತುಚಿಕಿತ್ಸೆ ಅಗತ್ಯವಿರುವ ನೂರಕ್ಕೂ ಹೆಚ್ಚು ಕೊರೊನಾರೋಗಿಗಳು ನಿತ್ಯ ಮೈಸೂರಿಗೆ ಆಗಮಿಸುತ್ತಿದ್ದಾರೆ.ಈಗಾಗಲೇ ಎಲ್ಲ ಆಸ್ಪತ್ರೆಗಳಲ್ಲೂ ವೆಂಟಿಲೇಟರ್ ಹಾಗೂಆಕ್ಸಿಜನ್ ಬೆಡ್‌ಗಳ ಕೊರತೆ ಎದುರಾಗಿರುವುದರಿಂದನಗರದ ಆಸ್ಪತ್ರೆಗಳಿಗೆ ಹೆಚ್ಚು ಒತ್ತಡ ಬಿದ್ದಂತಾಗಿದೆ.
ಜಿಲ್ಲಾ ಹೆಡ್ಕ್ವಾಟ್ರಸ್ನಲ್ಲಿ ವೈದ್ಯರು: ಜಿಲ್ಲೆಯ ಎಲ್ಲತಾಲೂಕು ಆಸ್ಪತ್ರೆಗಳ ಬಹುಪಾಲು ಸರ್ಜನ್‌ಗಳು, ವೈದ್ಯರು ಹಾಗೂ ತಾಲೂಕು ಆರೋಗ್ಯಧಿಕಾರಿಗಳು ಜಿಲ್ಲಾ ಹೆಡ್‌ಕ್ವಾಟ್ರಸ್‌ನಲ್ಲೇ ವಾಸವಿರುವುದರಿಂದ ತುರ್ತು ಚಿಕಿತ್ಸೆ ಲಭ್ಯವಿರುವ ರೋಗಿಗಳಿಗೆವೈದ್ಯರ ಅಲಭ್ಯತೆಯಿಂದ ರೋಗಿಗಳ ಸ್ಥಿತಿ ಗಂಭೀರವಾಗುವುದಲ್ಲದೇ, ಮೈಸೂರಿಗೆ ತೆರಳುವಾಗಮಾರ್ಗ ಮಧ್ಯೆಯೇ ಮೃತಪಡುವ ದುರಂತಗಳುನಡೆಯುತ್ತಿವೆ.
ಕೋಟೆಯಲ್ಲಿ 4 ಯಂತ್ರನಿರುಪಯುಕ್ತ: ಶಾಸಕಎಚ್.ಡಿ.ಕೋಟೆತಾಲೂಕು ಆಸ್ಪತ್ರೆಯಲ್ಲಿ04 ವೆಂಟಿಲೇಟರ್‌ಗಳಿದ್ದರೂ ಆಪರೇಟರ್, ಅನುಭವಿ ವೈದ್ಯರಿಲ್ಲದೇಬಳಕೆಯಾಗದೆ ನಿರುಪಯುಕ್ತವಾಗಿವೆ.ಕೂಡಲೇ ಜಿಲ್ಲಾಡಳಿತ ಅಗತ್ಯ ಸಿಬ್ಬಂದಿ ನೇಮಕ ಮಾಡಿ, ಕೊರೊನಾರೋಗಿಗಳಿಗೆ ವೆಂಟಿಲೇಟರ್ ಸೌಲಭ್ಯಸಿಗುವಂತಾಗಬೇಕು ಎಂದು ಎಚ್.ಟಿ. ಕೋಟೆಶಾಸಕ ಅನಿಲ್ ಚಿಕ್ಕಮಾದು ತಿಳಿಸಿದ್ದಾರೆ.
ಸತೀಶ್ ದೇಪುರ