ಹೈದರಾಬಾದ್ : ಬಿ .1.617.2 ರೂಪಾಂತರಿಯ ವಿರುದ್ಧ ಕೊವಾಕ್ಸಿನ್ ಲಸಿಕೆ ಕೋವಿಶೀಲ್ಡ್ ಲಸಿಕೆಗಿಂತ ಕಡಿಮೆ ಪರಿಣಾಮಕಾರಿಯಾಗಿದೆ ಎಂಬ ವರಿದಯೊಂದನ್ನು ಹೈದರಾಬಾದ್ ಮೂಲದ ಭಾರತ್ ಬಯೋಟಿಕ್ ಸಂಸ್ಥೆ ನಿರಾಕರಿಸಿದೆ.
ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಕೋವಿಶೀಲ್ಡ್ ಗಿಂತ ಅದರ ಕೋವಾಕ್ಸಿನ್ ಕಡಿಮೆ ಪರಿಣಾಮಕಾರಿ ಎಂಬ ಹೇಳಿಕೆಯನ್ನು ಕಂಪನಿಯು ತಳ್ಳಿಹಾಕಿದೆ.
ಇದನ್ನೂ ಓದಿ : ಬಿಟ್ ಕಾಯಿನ್ ಇದ್ರೆ ಎಲ್ ಸಾಲ್ವಡಾರ್ ಪೌರತ್ವ : ಮಧ್ಯ ಅಮೆರಿಕ ದೇಶದ ಮಹತ್ವದ ನಿರ್ಧಾರ
ಇದು ಅವೈಜ್ಞಾನಿಕ ಅಧ್ಯಯನ ವರದಿ : ಭಾರತ್ ಬಯೋಟಿಕ್ ಸಂಸ್ಥೆ
ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತ್ ಬಯೋಟಿಕ್ ಲಸಿಕಾ ತಯಾರಿಕಾ ಸಂಸ್ಥೆ, ಕೋವಿಡ್ ಸೋಂಕಿನ ಬಿ .1.617.2 ರೂಪಾಂತರಿಯ ವಿರುದ್ಧ ಕೋವಾಕ್ಸಿನ್ ಲಸಿಕೆ ಪರಿಣಾಮಕಾರಿಯಲ್ಲ. ಕೋವಿಶೀಲ್ಡ್ ಲಸಿಕೆ ಈ ರೂಪಾಂತರಿಯ ವಿರುದ್ಧ ಹೆಚ್ಚು ಪರಿಣಾಮಕಾರಿ ಎಂದು ಉಲ್ಲೇಖಿಸಿ ಬಂದಿದ್ದ ಇತ್ತೀಚೆಗಿನ ಅಧ್ಯಯನ ವರದಿಯೊಂದನ್ನು ಉಲ್ಲೇಖಿಸಿ, ಈ ವರದಿ ಸಂಪೂರ್ಣ ಸುಳ್ಳಿನಿಂದ ಕೂಡಿದೆ ಎಂದು ಹೇಳಿದೆ. ಜರ್ನಲ್ ವೊಂದರಲ್ಲಿ ಪ್ರಕಟವಾದ ಈ ವರದಿಯಲ್ಲಿ, ಕೋವಾಕ್ಸಿನ್ ಲಸಿಕೆಗಿಂತ ಕೋವಿಶೀಲ್ಡ್ ಲಸಿಕೆ ಕೋವಿಡ್ ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಕೋವಿಶೀಲ್ಡ್ ಲಸಿಕೆ ಬಿ.1.617.2 ಕೋವಿಡ್ ಸೋಂಕಿನ ರೂಪಾಂತರಿ ವಿರುದ್ಧ ಹೆಚ್ಚು ಪರಿಣಾಮಕಾರಿ ಎಂದು ಉಲ್ಲೇಖವಾಗಿತ್ತು. ಈ ವರದಿಯನ್ನು ಶುದ್ಧ ಅವೈಜ್ಞಾನಿಕ ವರದಿ, ಪೂರ್ವ ನಿರ್ಧರಿತ ಊಹಪೋಹಗಳಿಂತ ಈ ವರದಿ ಸೃಷ್ಟಿಸಲಾಗಿದೆ ಎಂದು ಭಾರತ್ ಬಯೋಟಿಕ್ ಸಂಸ್ಥೆ ತಳ್ಳಿ ಹಾಕಿದೆ.
ಇನ್ನು, ಸುದ್ದಿ ಸಂಸ್ಥೆ ಎಎನ್ಐ ಗೆ ಮಾಹಿತಿ ನೀಡಿದ ಸಂಸ್ಥೆ, 3 ನೇ ಹಂತದ ದತ್ತಾಂಶವನ್ನು ಮೊದಲು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿ ಡಿ ಎಸ್ ಸಿ ಒ) ಗೆ ಸಲ್ಲಿಸಲಾಗುವುದು, ನಂತರ ಪೂರ್ಣ ಪರವಾನಿಗೆಗಾಗಿ ಅರ್ಜಿ ಸಲ್ಲಿಸಲಾಗುವುದು ಎಂದಿದೆ.
ಸುರಕ್ಷತೆ ಹಾಗೂ ಪರಿಣಾಮಕಾರಿತ್ವದ ಬಗ್ಗೆ ಮಾಹಿತಿನನೀಡಿದ ಸಂಸ್ಥೆ, ಲಸಿಕೆಯ ನಾಲ್ಕನೇ ಹಂತದ ಪ್ರಯೋಗ ಮಾಡುವುದಕ್ಕೂ ಕೂಡ ಸಂಸ‍್ಥೆ ಕಾರ್ಯ ಯೋಜನೆಯಲ್ಲಿದ್ದು, ಲಸಿಕೆಯ ಸುರಕ್ಷಿತವಾಗಿದೆ ಹಾಗೂ ಕೋವಿಡ್ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಪ್ರತಿಪಾದಿಸಿದೆ.
ಇದನ್ನೂ ಓದಿ : ಮಕ್ಕಳಲ್ಲಿ ಕೋವಿಡ್ ಸೋಂಕು ನಿರ್ವಹಣೆಯ ಕಾರ್ಯಾಗಾರಕ್ಕೆ ಸಚಿವ ಆರ್. ಅಶೋಕ್ ಚಾಲನೆ