Advertisement

ಅಯ್ಯಪ್ಪ ದೇಗುಲ:ಪ್ರತ್ಯೇಕ ಕಾನೂನು ಸಾಧ್ಯವಿಲ್ಲ

09:59 AM Nov 05, 2019 | Sriram |

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಂಬಂಧ ವಿಧಾನಸಭೆಯಲ್ಲಿ ಯಾವುದೇ ಪ್ರತ್ಯೇಕ ಕಾನೂನು ತರಲು ಸಾಧ್ಯವಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ಪಷ್ಟನೆ ನೀಡಿದ್ದಾರೆ.

Advertisement

ಜಲ್ಲಿಕಟ್ಟು, ಕಂಬಳ ರೀತಿ ಅಯ್ಯಪ್ಪ ದೇವಾಲಯಕ್ಕೆ ಸ್ತ್ರೀಯರ ಪ್ರವೇಶ ಕುರಿತು ರಾಜ್ಯದಲ್ಲಿ ಸುಪ್ರೀಂ ಕೋರ್ಟ್‌ಗೆ ವಿರುದ್ಧವಾಗಿ ಕಾನೂನು ರೂಪಿಸುವುದನ್ನು ಅವರು ಅಲ್ಲಗೆಳೆದಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪನ್ನು ಪಾಲಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಮಹಿಳೆಯರ ಪ್ರವೇಶ ನಿರಾಕರಣೆಯು ಅವರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಯಾವುದೇ ಮಹಿಳೆಯನ್ನು ದೇಗುಲ ಪ್ರವೇಶಕ್ಕೆ ರಾಜ್ಯ ಸರ್ಕಾರ ಬಲವಂತ ಮಾಡುವುದಿಲ್ಲ. ಅವರು ಇಚ್ಛಿಸಿದರೆ ಹೋಗಬಹುದು ಎಂದು ತಿಳಿಸಿದ್ದಾರೆ.

ಮುಟ್ಟಿನ ಕಾರಣದಿಂದ 10ರಿಂದ 50 ವರ್ಷದೊಳಗೆ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಇದೇ ತಿಂಗಳೊಳಗೆ ತೀರ್ಪು ಹೊರಬೀಳುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next