ಮಾಡುವುದಿಲ್ಲ ಎಂದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಪುನರುಚ್ಚರಿಸಿದರು.
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕೆಲವು ಮಠಗಳನ್ನೂ ದೇವಸ್ಥಾನಗಳೆಂದು ನೋಟಿμಕೇಶನ್ ಮಾಡಲಾಗಿದೆ. ಈಗ ದೇವಸ್ಥಾನಗಳ ಆಸ್ತಿ ಸಮೀಕ್ಷೆ ಮಾಡಿಸಿದಾಗ ಈ ವಿಚಾರ ಬಹಿರಂಗಗೊಂಡಿದೆ. ಇದನ್ನೇಬಿಜೆಪಿಯವರು ಮಠಾಧೀಶರನ್ನು, ಭಕ್ತರನ್ನು ದಾರಿತಪ್ಪಿಸಿ ವಿವಾದ ಸೃಷ್ಟಿಸಿದರು. ಅನುವಂಶಿಕವಾಗಿ ಪೂಜೆ ಮಾಡಿಕೊಂಡು ಬಂದ ಒಂದೇ ಕುಟುಂಬದ, ಒಂದೇ ಜಾತಿಯವರಿಗೆ ಸೇರಿದ ದೇವಸ್ಥಾನಗಳಿಗೆ ಸಂಬಂಧಿಸಿದ 50ರಿಂದ 60 ಪ್ರಕರಣಗಳು ಇಲಾಖೆಯ ಮುಂದಿದ್ದು, ಅವುಗಳನ್ನು ಜ.31 ಇಲ್ಲವೇ ಫೆಬ್ರವರಿ 1ರಂದು ಸಭೆ ನಡೆಸಿ ಡಿನೋಟಿಫೈ ಮಾಡಿ ಅವರ ದೇವಸ್ಥಾನ ಅವರಿಗೆ ಕೊಡಲಾಗುವುದು ಎಂದರು.