Advertisement

ಮಿಸ್‌ ಯೂ ಪಾಪಾ : ಲಾಲುಗೆ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಭಾವನಾತ್ಮಕ ಸಂದೇಶ

09:43 AM May 18, 2019 | Sathish malya |

ಪಟ್ನಾ : ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಅವರು ತಮ್ಮ ತಂದೆಗೆ ಟ್ವಿಟರ್‌ ನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಪೋಸ್ಟ್‌ ಮಾಡಿದ್ದಾರೆ.

Advertisement

“ಪಾಟಲೀಪುತ್ರ ರಾಲಿಯಲ್ಲಿ ನೀವು ಉಪಸ್ಥಿತರಿಲ್ಲದ ಕಾರಣಕ್ಕೆ ನನಗೆ ಮಾತನಾಡುವ ಅವಕಾಶವನ್ನೇ ನಿರಾಕರಿಸಲಾಯಿತು; ಐ ಮಿಸ್‌ ಯೂ ಪಾಪಾ” ಎಂದು ನೋವಿನಿಂದ ಟ್ವೀಟ್‌ ಮಾಡಿರುವ ತೇಜ್‌ ಪ್ರತಾಪ್‌ ಟ್ವೀಟ್‌ ಜತೆಗೆ ತಂದೆಯೊಂದಿಗಿನ ತನ್ನ ಕಟೌಟ್‌ ಚಿತ್ರವನ್ನು ಕೂಡ ಪೋಸ್ಟ್‌ ಮಾಡಿದ್ದಾರೆ.

ಲಾಲು ಅವರು ಪ್ರಕೃತ ಬಹುಕೋಟಿ ಮೇವು ಹಗರಣದ ಅಪರಾಧಿಯಾಗಿ ರಾಂಚಿಯಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next